You are hereKKNCಯ ಕುರಿತು

KKNCಯ ಕುರಿತು


1973ರಲ್ಲಿ ಪ್ರಾರಂಭವಾದ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ(KKNC)ವು U.S. ಫೆಡರಲ್ ಸರ್ಕಾರದಿಂದ IRS ನಿಯಮಾವಳಿ 501(C)(3)ಯಡಿಯಲ್ಲಿ ಲಾಭೋದ್ದೇಶವಿಲ್ಲದ ದತ್ತಿ ಸಂಸ್ಥೆ ಎಂಬ ಮಾನ್ಯತೆ ಪಡೆದಿದೆ. ಕೆಕೆಎನ್ಸಿಗೆ ನಿಮ್ಮ ಸದಸ್ಯತ್ವದ ಕೊಡುಗೆ ತೆರಿಗೆ ವಿನಾಯಿತಿಯನ್ನು ಹೊಂದಿರಬಹುದು. ಅದರ ಅರ್ಹತೆಗಾಗಿ ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.KKNCಯ ಫೆಡರಲ್ ತೆರಿಗೆಯ ID 94-2801002 ಆಗಿದೆ.

ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಸಮುದಾಯ ಅಭಿವೃದ್ಧಿ ಮತ್ತು ದತ್ತಿ/ಸೇವಾ ಚಟುವಟಿಕೆಗಳನ್ನು ಮುಂದುವರಿಸಲು ವೇದಿಕೆ ಒದಗಿಸುವ ಮೂಲಕ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಸಮುದಾಯವನ್ನು ಬಲಪಡಿಸುವುದು ಕೆಕೆಎನ್ಸಿಯ ಉದ್ದೇಶವಾಗಿದೆ.
ಇದು ಪ್ರಧಾನವಾಗಿ ಸದಸ್ಯರು ಮತ್ತು ಆಸಕ್ತ ಸಾರ್ವಜನಿಕರ ದೇಣಿಗೆ ಮತ್ತು ಸದಸ್ಯತ್ವಗಳಿಂದ ನಡೆಸಲ್ಪಡುವ ಸ್ವಯಂಪ್ರೇರಿತವಾಗಿರುವ ಸಂಘಟನೆಯಾಗಿದೆ. ಕನ್ನಡ ಕೂಟವು ತನ್ನ ಗುರಿಗಳನ್ನು ಸಾಧಿಸುವಲ್ಲಿ ಮತ್ತು ಅದರ ಚಟುವಟಿಕೆಗಳನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಇನ್ನೂ ಬಹಳ ದೂರಸಾಗಬೇಕಾಗಿದೆ.

ಇದು ಮಾನವೀಯ ಕಾರಣಗಳಿಗಾಗಿ ನಿಧಿಯ ಸಂಗ್ರಹವನ್ನು ಉತ್ತೇಜಿಸಲು ಅನೇಕ ಇತರ ದತ್ತಿ ಸಂಸ್ಥೆಗಳೊಂದಿಗೆ ಸಹ ಕೆಲಸ ಮಾಡುತ್ತದೆ.

ತನ್ನ ನಲವತ್ತಾರನೆಯ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿರುವ ಕನ್ನಡಕೂಟವನ್ನು ಉತ್ತರ ಕ್ಯಾಲಿಫೋರ್ನಿಯಾದ ಮಹಾನ್ ಕನ್ನಡ ಸಮುದಾಯವು ಅಕ್ಕರೆಯಿಂದ ಪಾಲಿಸಿ, ಪೋಷಿಸಿ ಬೆಳೆಸಿದೆ.ನಿತ್ಯ ಜೀವನದ ಏಕತಾನತೆಯಲ್ಲಿ ಹಬ್ಬಗಳ ಸಂಭ್ರಮವನ್ನು ತರಲು ಕನ್ನಡ ಕೂಟದ ಚಟುವಟಿಕೆಗಳ ಭಾಗವಾಗಿ ನಾಲ್ಕು ಪ್ರಮುಖ ಉತ್ಸವಗಳನ್ನು ಆಚರಿಸಲಾಗುತ್ತದೆ. ಸಂಕ್ರಂತಿ, ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿ ಈ ಉತ್ಸವಗಳು.

ಈ ಸಂದರ್ಭಗಳು ಕನ್ನಡ ಜನರಿಗೆ ತಮ್ಮ ಸಮುದಾಯದ ಇತರರನ್ನು ಭೇಟಿ ಮಾಡಲು ಮತ್ತು ಪರಿಚಯ ಬಳಗವನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡುತ್ತವೆ.ಈ ಉತ್ಸವಗಳು ಇಲ್ಲಿ ಬೆಳೆದ ಮಕ್ಕಳಿಗೆ ಹಬ್ಬಗಳು ತರುವ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.

ಪಾಲಕರು ತಮ್ಮನ್ನು ಮತ್ತು ತಮ್ಮ ಮಕ್ಕಳನ್ನು ವಿವಿಧ ಕೆಕೆಎನ್ಸಿಗೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ. ಆ ಮೂಲಕ ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮಕ್ಕಳಿಗೆ ಪರಿಚಯಿಸುತ್ತಾರೆ. ಕನ್ನಡ ಕೂಟದ ಯುವಕರ ವಿಭಾಗವು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಸಮುದಾಯದ ಯುವಕರಲ್ಲಿ ಕರ್ನಾಟಕದ ಸ್ಥಳಗಳ ಕುರಿತು ಜಾಗೃತಿ ಮತ್ತು ಅದರ ಸಂಸ್ಕೃತಿಯ ಅರಿವು ಮೂಡಿಸುವ ಉದ್ದೇಶದಿಂದ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ. ಯುವಕರ ವಿಭಾಗದ ವ್ಯಾಪ್ತಿಯನ್ನು ವಿಸ್ತರಿಸುವುದು ಕನ್ನಡ ಕೂಟದ ಹೆಚ್ಚುತ್ತಿರುವ ವ್ಯಾಪ್ತಿಯ ಒಂದು ಉದಾಹರಣೆಯಾಗಿದೆ. ಕನ್ನಡ ಕೂಟದ ಗ್ರಂಥಾಲಯವು ಕನ್ನಡ ಕವಿಗಳು, ಬರಹಗಾರರು ಮತ್ತು ಕಾದಂಬರಿಕಾರರ ಅನೇಕ ಮಹಾನ್ ಕೃತಿಗಳನ್ನು ಹೊಂದಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಹೊರತಾಗಿ ಕನ್ನಡಕೂಟವು ಕ್ರೀಡಾ ಮತ್ತು ಆಹ್ಲಾದಕಾರಿ ಶಿಬಿರಗಳನ್ನು ಸಹ ಸಂಯೋಜಿಸುತ್ತುದೆ. ಬೇಸಿಗೆ ಶಿಬಿರಗಳು ಮತ್ತು ಕ್ರೀಡಾ ದಿನ ಸಮುದಾಯದ ವಿನೋದ ಮತ್ತು ಆಟಗಳ ಕಾಲವಾಗಿದೆ. ಇವು ದೈಹಿಕ ಪರಿಶ್ರಮವಿಲ್ಲದ ನಿತ್ಯಜೀವನಕ್ಕೆ ಒಂದು ಬದಲಾವಣೆಯನ್ನು ತರುತ್ತವೆ, ಮಾನಸಿಕ ಏಕತಾನತೆಯನ್ನು ಹೋಗಲಾಡಿಸಲು ಬೇಕಾದ ಬದಲಾವಣೆಯನ್ನು ತರುತ್ತವೆ. ಉಲ್ಲಾಸ, ಉತ್ಸಾಹದ ಜೊತೆಯಲ್ಲೇ ದೈಹಿಕ ಸಾಮರ್ಥ್ಯಕ್ಕೊಂದು ಪರೀಕ್ಷೆಯನ್ನೊಡ್ಡುತ್ತವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕನ್ನಡಕೂಟದ ದೀರ್ಘ ಇತಿಹಾಸವು, ಅದರ ಗುರಿಗಳನ್ನು ಉಳಿಸಿ, ಬೆಳೆಸಲು ಸ್ವಯಂಪ್ರೇರಣೆಯಿಂದ ಸದಾ ಸಿದ್ಧರಾಗಿರುವ ಸದಸ್ಯರ ಕೊಡುಗೆಗಳಿಂಡ ಸಮೃದ್ಧವಾಗಿದೆ. ಉತ್ತರ ಕ್ಯಾಲಿಫೋರ್ನಿಯಾದ ಪ್ರತಿಯೊಬ್ಬ ಕನ್ನಡಿಗರೂ ಕನ್ನಡ ಕೂಟದ ಎಲ್ಲ ಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಅದು ಕನ್ನಡದ ಸಂಸ್ಕೃತಿ ಮತ್ತು ಸಮುದಾಯದ ಶಕ್ತಿಯನ್ನು ಬಲಪಡಿಸುವುದರಲ್ಲಿ ಸಂದೇಹವಿಲ್ಲ.

ಸಂಪರ್ಕ ವಿವರಗಳು:
KKNC ಸಂಸ್ಥೆ ವಿಳಾಸ
Kannada Koota of Northern California
21701, Stevens Creek Blvd, #1944, Cupertino CA-95015

KKNC ಇ-ಮೇಲ್ ವಿಳಾಸ:
[email protected]
KKNC ಸಂಪರ್ಕ ವ್ಯಕ್ತಿಯ ಹೆಸರು
ಶರ್ಮಿಳಾ ವಿದ್ಯಾಧರ (2023 ಕೆಕೆಎನ್ಸಿ ಅಧ್ಯಕ್ಷೆ).

About KKNC

Kannada Koota of Northern California (KKNC), USA, started in 1973, is approved by the U.S. Federal Government as a Registered Non-Profit, Charitable Institution under IRS regulation 501(C)(3), your membership contribution to KKNC may be tax deductible.
Please consult your tax advisor for eligibility, click here [pdf, 8 pages, 413 KB] to access the Federal approval letter. KKNC's Federal Tax ID is 94-2801002.
KKNC's mission is to strengthen the Kannada community of Northern California by providing a forum to pursue religious, literary, cultural, educational, community development and charity/service activities.

It is a voluntary organization primarily run by donations and memberships from interested members of the general public. KannadaKoota has a long way in achieving its objectives and in expanding its activities to new horizons.

It also works closely with many other charity organizations to promote collection of funds for humanitarian causes.

In its march into the 46th year, KK is a fully grown juvenile, nurtured and developed by great Kannada community of Northern California.

To bring a sense of festivity into otherwise routine lifestyle, four major festivals are celebrated as part of KK activities. These festivals are Sankranti, Yugadi, Ganesh Chathurti and Deepavali.
These occasions set a stage for Kannada people to meet others of their own community and network.

They also provide an opportunity for the children who are brought up here to inculcate many values these festivals bring along with them.

Parents get an opportunity to involve themselves and their children in various KK activities and expose their children to the rich culture and traditions of Karnataka.

The youth wing of KK has spawned whole new activities aimed at developing awareness of places in Karnataka, its culture among the youth of Kannada community in Northern California.
The grand plans of youth wing is an example of KK's widening scope of objectives.
KK's library houses many great works of Kannada poets, writers and novelists. Apart from cultural get together, KK has its fun part also. The yearly picnic and sports day are the times for fun and games. They provide break from sluggish winter. The day is also a test of physical fitness and fun. Members get to participate in various games and avoid low fat food for a day. In summary, KK's long history is entirely attributed to the dedicated people who have voluntarily taken responsibilities to sustain and grow the objectives of KannadaKoota. The involvement of every Kannadiga of Northern California in KK's mainstream activities would only enhance and enrich Kannada's culture and the community's strength.
 
Contact Details

KKNC Organization address
Kannada Koota of Northern California
21701, Stevens Creek Blvd, #1944, Cupertino CA-95015

KKNC E-Mail Address
[email protected]

KKNC Contact person Name
Sharmila Vidyadhar (2023 KKNC President).

Social Media

Grand Annual Sponsor

Sponsors