Smaran Dance Festival 2018 sticky icon

ಸಾಲಂಕೃತವಾಗಿ ಬೆಳಗುವ ದೀಪಗಳ, ಬಣ್ಣ ಬಣ್ಣದ ಪ್ರಭೆಯನ್ನು ಚಿಮ್ಮುವ ಮತಾಪುಗಳ ಸಂಭ್ರಮದಿಂದ ಕೂಡಿದ, ಆಬಾಲವೃದ್ಧರಿಗೂ ಮುದವನ್ನು ನೀಡುವ ದೀಪಾವಳಿ ಅಥವಾ ದೀವಳಿಗೆ ಹಬ್ಬ, ಹಬ್ಬಗಳಲೆಲ್ಲಾ ಅತ್ಯಂತ ಜನಪ್ರಿಯವಾದದ್ದು. 2018 ರ ಕಾರ್ಯಕಾರಿ ಸಮಿತಿ ಇದೇ ನವೆಂಬರ್ 11 ರಂದು ದೀಪೋತ್ಸವವನ್ನು Chabot College, Hayward ನಲ್ಲಿ ಆಯೋಜಿಸಲು ನಿರ್ಣಯಿಸಿದೆ. ಈ ಪ್ರಯುಕ್ತ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡಲು ಇಚ್ಛಿಸುವ ಸೃಜನಶೀಲ ನಿರ್ದೇಶಕರಿಗೆ https://goo.gl/forms/s02IQcN3YfelIC1L2 ಅರ್ಜಿ ಭರ್ತಿ ಮಾಡುವ ಮೂಲಕ ಕಾರ್ಯಕ್ರಮಗಳನ್ನು ನೋಂದಾಯಿಸಿಕೊಳ್ಳಲು ಇದು ಮನರಂಜನಾ ಸಮಿತಿಯ ಆತ್ಮೀಯ ಆಹ್ವಾನ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ; 10/18/2018

Kannadotsava 2018

ಇಲ್ಲಿದೆ ಕನ್ನಡೋತ್ಸವದ ಸಂಪೂರ್ಣ ಮಾಹಿತಿ;
ಕಾರ್ಯಕ್ರಮ ನಡೆಯುವ ಸ್ಥಳ: ಸ್ಯಾನ್ ಮ್ಯಾಟಿಯೊ ಪರ್ಫಾರ್ಮಿಂಗ್ ಸೆಂಟರ್ ( https://goo.gl/maps/VUTV6FgPRiG2)
ಕಾರ್ಯಕ್ರಮದ ಟಿಕೆಟ್ ದರ : ಸದಸ್ಯರಿಗೆ $10, ಸದಸ್ಯರಲ್ಲದವರಿಗೆ $15,
ಮಕ್ಕಳಿಗೆ ಉಚಿತ ಪ್ರವೇಶ! https://www.sulekha.com/kannada
ಪಾರ್ಕಿಂಗ್ ಉಚಿತ!
ಮಕ್ಕಳಿಗಾಗಿ ಚಿಣ್ಣರ ಲೋಕ : ಸಂಪರ್ಕಿಸಿ https://goo.gl/forms/tqpZWnuaFwZ5ehW02 (ಮೊದಲು ನೋಂದಾಯಿಸಿದ 100 ಮಕ್ಕಳಿಗೆ ಮಾತ್ರ)

ಕಾರ್ಯಕ್ರಮದ ಆರಂಭಿಕ ಸಮಯ : 3.00pm
ಮನೋರಂಜನಾ ಕಾರ್ಯಕ್ರಮಗಳು : ಪ್ರಾರ್ಥನೆ,
ನವಶಕ್ತಿ , ಶಿವಂ, ಮಹಾಭಾರತ, ಒನಕೆ ಓಬವ್ವ, ಹುಲಿವೇಷ,
ಸರಣಿ ಕಾರ್ಯಕ್ರಮ- ನೋಡು ನಮ್ಮ ನಾಡು,
ಅರುಣರಾಗ.
ವಿಶೇಷ ಅತಿಥಿ: ಅನಂತ್ ನಾಗ್ ಹಾಗೂ ಗಾಯತ್ರಿ ನಾಗ್

As we all eagerly waited for our “Kannadotsova” event. Waiting is over now….. it’s only 5 days away !!
Here are the complete information and program list lined up for the day:
Date & Time : Saturday Sept 8th, 2018 | 3.00 pm
Venue : San Mateo Performing Arts Center( https://goo.gl/maps/VUTV6FgPRiG2)

Cost : $10 for members, $15 for non-members
Free for Kids. (for event tickets https://www.sulekha.com/kannanda),
Free Parking,
Chinnara Loka - contact : https://goo.gl/forms/tqpZWnuaFwZ5ehW02 (For first 100 kids registered)
Programs : Many programs from local artists
Prayer, Navashakti, Shivam, Mahabharatha, Onake Obavwa
Hulivesha, “Nodu Namma Nadu” series Program
Arunaraaga.
Special Guest : Anant Nag and Gayathri Nag
Come and join us !

ಕನ್ನಡ ಬಾಂಧವರಿಗೆ ನಮಸ್ಕಾರ,
2018 ರ KKNC ಸಮಿತಿಯು ಈ ವರ್ಷದ ಕನ್ನಡೋತ್ಸವ ಕಾರ್ಯಕ್ರಮವನ್ನು ಶನಿವಾರ, ಸೆಪ್ಟೆಂಬರ್ 8 ರಂದು San Mateo Performing Arts Center ನಲ್ಲಿ ಆಯೋಜಿಸಿದೆ. ಎಲ್ಲರೂ ಬನ್ನಿ, ಬಂಧು ಮಿತ್ರರನ್ನೂ ಕರೆತನ್ನಿ.
Buy your tickets today at sulekha.com/kannada. Feel free to invite your friends to this event.
ವಂದನೆಗಳು,
ಕಾರ್ಯಕಾರಿ ಸಮಿತಿ 2018

ಅಪರಿಮಿತ ಅಭಿಮಾನಿಗಳನ್ನು ಸೆಳೆದ, ದಶಕಗಳಿಂದ ಅಭಿಮಾನಿಗಳ ಮನದಲ್ಲಿ ಸದಾ ಹಸಿರಾಗಿರುವ ನಮ್ಮೆಲ್ಲರ ಪ್ರೀತಿಯ ಶ್ರೀಯುತ ಅನಂತ ನಾಗ್ ಹಾಗು ಶ್ರೀಮತಿ ಗಾಯತ್ರಿಯವರನ್ನು ಕನ್ನಡಕೂಟಕಕ್ಕೆ ಆಹ್ವಾನಿಸಲು ಅತ್ಯಂತ ಹರ್ಷವಾಗುತ್ತಿದೆ.

ಕೂಟದ ಸದಸ್ಯರಲ್ಲಿ ಸವಿನಯ ಪ್ರಾರ್ಥನೆ.
=======================

ಪ್ರಕೃತಿಯ ವಿಕೋಪಕ್ಕೆ ಎಡೆಯಾಗಿರುವ ಕೊಡಗಿನ ದುಃಸ್ಥಿತಿ ಹೇಳತೀರದು.

ಹಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದ್ದು, ೧೨ ಜನರು ಮೃತಪಟ್ಟಿದ್ದಾರೆ. ಸುಮಾರು ೮೪೫ ಮನೆಗಳು ನೆಲಸಮಗೊoಡಿದ್ದು, ೧೨೩ ಕಿ.ಮೀಗೂ ಹೆಚ್ಚು ರಸ್ತೆ, ೫೮ ಸೇತುವೆಗಳು ಹಾನಿಯಾಗಿವೆ. ಹಲವು ರಸ್ತೆಗಳು ಸಂಪರ್ಕ ಕಡಿತಗೊಂಡಿವೆ. 3,800 ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ.

ಈ ಸಮಯದಲ್ಲಿ ಸಂತ್ರಸ್ತರಿಗಾಗಿ ನೆರವಾಗಲು ನಮ್ಮ ಬೇ ಏರಿಯಾದ ಕನ್ನಡ ಕೂಟವು ಪರಿಹಾರ ನಿಧಿಯನ್ನು ಸಂಗ್ರಹಿಸುತ್ತಿದೆ. ಸಂಗ್ರಹಿಸಿದ ಹಣವನ್ನು ನಿರಾಶ್ರಿತರಿಗೆ ಸದುಪಯೋಗ ಮಾಡಲು ದಿನವಿಡೀ ಶ್ರಮಿಸುತ್ತಿರುವ ಕೊಡವ ಸಮಾಜಕ್ಕೆ ನೀಡಲಾಗುವುದು.

https://www.gofundme.com/kodagu-relief-fund

ಕನ್ನಡ ಬಂಧುಗಳಿಗೆ ನಮಸ್ಕಾರ!
ಕೆ ಕೆ ಏನ್ ಸಿ ೨೦೧೮ರ ಕ್ರೀಡಾ ಸಮಿತಿಯು ಕೂಟದ ಸದಸ್ಯರಿಗೆ ನೂತನ ವಾರಾಂತ್ಯ ಚಟುವಟಿಗಳನ್ನು ಆಯೋಜಿಸುತ್ತಿದೆ.
ಬೇ ಏರಿಯಾದ ಸುಂದರ ಬೆಟ್ಟಗಳ ನಡುವೆ, ಕನ್ನಡ ಸ್ನೇಹಿತರೊಡನೆ ಚಾರಣ ಹೊರಡುವುದು ನಿಜಕ್ಕೊ ಒಂದು ಉಲ್ಲಾಸದಾಯಕ ಅನುಭವ. "ದಿ ಹೈಕಿಂಗ್ ಕ್ಲಬ್" ಪ್ರತಿ ಎರಡು ವಾರಕ್ಕೊಮ್ಮೆ ರಮಣೀಯ ಸ್ಥಳಗಳಿಗೆ ಚಾರಣ ಹಮ್ಮಿಕೊಳ್ಳಲಿದೆ. ಮೊದಲ ಚಾರಣ ಇದೇ ಮಾರ್ಚ್ ೩ರಿಂದ ಶುರುವಾಗಲಿದ್ದು, ರಿಜಿಸ್ಟ್ರೇಷನ್, ಹೈಕಿಂಗ್ ಟ್ರೈಲ್ ಮತ್ತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ...

KKNC 2018 sports committee presents weekend activities for the members. The Hiking club is organizing biweekly hikes on beautiful trails around Bay Area. First hike would be started on March 3, 2018. For registration, trail details and more information please stay tuned to this space..

2018 Executive Team

Ellarigu Namaskara,

I’m very happy to introduce KKNC’s 2018 executive team. We need all your guidance, help and support. Let’s work together to make a unified and proud community. We are looking forward to a great year with our 2018 KKNC executive team and you all.

If you have not signed up/ renewed your membership yet, please sign up using this link: Join KKNC

2018 ಹೊಸ ವರ್ಷದ ಶುಭಾಶಯಗಳು !

ಕನ್ನಡ ಕೂಟದ ಸಮಸ್ತ ಬಾಂಧವರಿಗೆ ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷ ತಮಗೂ, ತಮ್ಮ ಕುಟುಂಬದವರಿಗೂ ಸಂತೋಷ ಹಾಗೂ ಸಮೃದ್ಧಿ ತರಲಿ!

ಈ ವರ್ಷವನ್ನು ಹರ್ಷದಾಯಕವಾಗಿಸುವ ಪಯಣಕ್ಕೆ ತಾವೆಲ್ಲರೂ ಕನ್ನಡ ಕೂಟದ ಜೊತೆಯಾಗಿರೆಂದು ಕೋರುತ್ತೇವೆ. 2018 ರ ಕಾರ್ಯಕಾರಿ ಸಮಿತಿಯು ನಮ್ಮ ಮೊದಲ ಕಾರ್ಯಕ್ರಮ "ಸಂಕ್ರಮಣ"ಕ್ಕೆ ಅಣಿಯಾಗುತ್ತಿದೆ. ನಿಮ್ಮೆಲ್ಲರ ಸಲಹೆ, ಸಹಕಾರ ಮತ್ತು ಬೆಂಬಲವು ಎಂದಿನಂತೆ ನಮ್ಮೊಂದಿಗಿರಲೆಂದು ಕೋರುತ್ತೇವೆ.

ಮತ್ತೊಮ್ಮೆ ಹೊಸ ವರ್ಷದ ಶುಭಾಶಯಗಳೊಂದಿಗೆ,
ವಂದನೆಗಳು,
ಕಾರ್ಯಕಾರಿ ಸಮಿತಿ - 2018

ಆತ್ಮೀಯ ಕನ್ನಡ ಕೂಟ ಬಾಂಧವರೇ,
ನಾವು ದೇಶಾಂತರಕ್ಕೆ ಬಂದರೂ ನಮ್ಮ ಭಾಷೆ, ಸಂಸೃತಿಯನ್ನು ಮರೆಯದಿರೋಣ. ಬನ್ನಿ ,ಇಂದೇ ಕನ್ನಡ ಕೂಟದ ಸದಸ್ಯತ್ವವನ್ನು ನವೀಕರಿಸಿ, ಸದಸ್ಯರಾಗಿರದವರು ಇಂದೇ ಸದಸ್ಯರಾಗಿ ಈ ಮುಖ್ಯವಾಹಿನಿಯನ್ನು ಮಹಾಪ್ರವಾಹವಾಗಿಸಿ.

Dear KKNC members and supporters,
Even if we travel on foreign lands let us not forget our mother tongue and culture. come and renew /register your KKNC membership for 2018. Please click here to renew/register your membership online.

Come and Explore KKNC !!! sticky icon

ಕನ್ನಡ ಕೂಟದಲ್ಲಿ ಸದಾ ಕನ್ನಡದ ಕಾರ್ಯಕ್ರಮಗಳನ್ನು ಮಾಡುವ ಸಂಭ್ರಮ. ಪ್ರತಿ ಕಾರ್ಯಕ್ರಮಕ್ಕೂ ಅನೇಕ ಸಿದ್ಧತೆಗಳು ಬೇಕು. ಪ್ರತಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಅನೇಕ ಕಾರ್ಯಕರ್ತರ ಶ್ರಮದ ದುಡಿಮೆ ಇರುತ್ತದೆ. ಇದು ಶ್ರಮ ಅಲ್ಲ. ಕನ್ನಡದ ಮೇಲಿನ ಅಭಿಮಾನದಿಂದ ಮಾಡುವ ಕೆಲಸ. ನೀವೂ ಸಹ ಈ ವರ್ಷ ನಮ್ಮ ೨೦೧೬ ತಂಡದೊಡನೆ ಸೇರಿ ನಿಮ್ಮ ಸ್ನೇಹಿತರ ಗುಂಪನ್ನು ವಿಸ್ತರಿಸಬಹುದು.

1973ರಿಂದ ಹಲವಾರು ಸ್ವಯಂಚಾಲಕರು ಸೇವೆ ಸಲ್ಲಿಸಿ ನಮ್ಮ ಬೇ ಏರಿಯಾ ಕನ್ನಡ ಕೂಟವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಬನ್ನಿ, ಈ ವರುಷ ನಾವೆಲ್ಲಾ ಕೈ ಜೋಡಿಸಿ ಕನ್ನಡ ಕೂಟದ ಸೊಬಗನ್ನು ಮತ್ತಷ್ಟು ಹೆಚ್ಚಿಸೋಣ

ಆಸಕ್ತಿ ವ್ಯಕ್ತಪಡಿಸಿ - Volunteer Sign up

Our Partners