You are hereಕನ್ನಡ ಕಲಿ

ಕನ್ನಡ ಕಲಿ


ಕನ್ನಡ ಕಲಿ

“ಕನ್ನಡ ಕಲಿ” ಯು ೨೦೨೦ರ ವಸಂತಮಾಸದಲ್ಲಿ ಹದಿನೈದನೇ ವರ್ಷಕ್ಕೆ ಕಾಲಿಟ್ಟಿತು. “ಆಟದೊಡನೆ ಪಾಠ” ಎನ್ನುವ ಧ್ಯೇಯವನ್ನಿಟ್ಟುಕೊಂಡಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ನಗುನಗುತ್ತಾ ತಂದೆತಾಯಿಯರ ಒತ್ತಾಯವಿಲ್ಲದೆ ಪ್ರತಿ ವಾರ ತರಗತಿಗೆ ಬರುತ್ತಿರುವುದು ನಮಗೆ ಸಂತೋಷದ ಮತ್ತು ಹೆಮ್ಮೆಯ ಸಂಗತಿ! ಪ್ರತಿ ವರ್ಷ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ಕಾರ್ಯಕ್ರಮವು ನೂರಾರು ಮಕ್ಕಳಿಗೆ ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಕಲಿಸಿದೆ. ಮಕ್ಕಳಿಗೆ ಅಕ್ಷರಾಭ್ಯಾಸ, ಕಾಗುಣಿತ ಇತ್ಯಾದಿಗಳನ್ನು ಹೊಸ ರೀತಿಯಲ್ಲಿ ಕಲಿಸಲು ನಾವು ಸದಾ ಶ್ರಮಿಸುತ್ತೇವೆ. ಅನೇಕ ಕನ್ನಡ ಕೂಟದ ಕಾರ್ಯಕ್ರಮಗಳಲ್ಲಿ ಕನ್ನಡ ಕಲಿಯ ಮಕ್ಕಳು ವೇದಿಕೆಯ ಮೇಲೆ ನಿಂತು, ಒಟ್ಟಿಗೆ ಹಾಡಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೊಸದಾದ ಮತ್ತು ಆಕರ್ಷಕವಾದ ಹಾಡು-ಹಸೆಗಳನ್ನು ಹುಡುಕಿ, ಮಕ್ಕಳನ್ನು ಹಾಡಲು ಸಿದ್ಧಪಡಿಸುತ್ತೇವೆ. ಕನ್ನಡ ಕಲಿಯ ಪುಸ್ತಕ ಸಮಿತಿಯು, ಕಳೆದ ವರ್ಷಗಳಲ್ಲಿ ಕನ್ನಡ ಕಲಿಯ ಮೊದಲ ಮೂರು ತರಗತಿಗಳಿಗೆ ತನ್ನದೇ ಆದ ಪಠ್ಯಕ್ರಮವನ್ನು ಹೊರದೇಶದಲ್ಲಿ ಬೆಳೆಯುತ್ತಿರುವ ನಮ್ಮ ಮಕ್ಕಳಿಗೆ ಹೊಂದುವ ರೀತಿಯಲ್ಲಿ ರಚಿಸಿ, ಪಠ್ಯಪುಸ್ತಕ ಬಿಡುಗಡೆ ಮಾಡಿರುವುದು ಹೆಮ್ಮೆಯ ಸಂಗತಿ. ಈ ಸಮಿತಿಯು ಮುಂದಿನ ಎಲ್ಲ ತರಗತಿಗಳಿಗೂ ತನ್ನದೇ ಆದ ಪಠ್ಯಕ್ರಮವನ್ನು ರಚಿಸುವ ಯೋಜನೆಯನ್ನು ಹಾಕಿಕೊಂಡು ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸದ ವಿಷಯ.

“ಕನ್ನಡ ಕಲಿ”ಯ ಯಶಸ್ಸಿಗೆ ಮುಖ್ಯವಾಗಿ ಮಕ್ಕಳ ಉತ್ಸಾಹ, ತಂದೆತಾಯಿಯರ ಪ್ರೋತ್ಸಾಹ ಮತ್ತು ಸ್ವಯಂಸೇವಕ ಶಿಕ್ಷಕರ ಶ್ರದ್ಧೆ, ಆಸಕ್ತಿ, ಮತ್ತು ಅವಿರತ ದುಡಿಮೆಯೇ ಕಾರಣ. ಇವರಿಗೆ ಸಹಾಯಕರಾಗಿ ಕೆಲಸ ಮಾಡುವ ಸ್ವಯಂಸೇವಕ ವಿದ್ಯಾರ್ಥಿಗಳ ಉತ್ಸಾಹಿ ತಂಡದ ಸೇವೆ ಬಹಳ ಪ್ರಶಂಶನೀಯ. ಇವರೆಲ್ಲರ ಅಪಾರ ಕನ್ನಡ ಪ್ರೀತಿ ನಿಜವಾಗಿಯೂ ಮೆಚ್ಚುವಂತಹದ್ದು. ಪ್ರತಿ ಶನಿವಾರ ತಮ್ಮ ಅಮೂಲ್ಯವಾದ ಸಮಯವನ್ನು ”ಕನ್ನಡ ಕಲಿ”ಗೆ ಮೀಸಲಾಗಿಟ್ಟು, ಪ್ರತಿಯಾಗಿ ಏನನ್ನೂ ಬಯಸದೆ, ಮಕ್ಕಳಿಗೆ ಕನ್ನಡ ಕಲಿಸುವುದರ ಮೂಲಕ ವಿದ್ಯಾದಾನ ಮಾಡುತ್ತಿದ್ದಾರೆ. ಇವರ ಕನ್ನಡ ಪ್ರೀತಿ ಹೀಗೇ ಮುಂದುವರೆಯಲಿ!

ಕನ್ನಡ ಕಲಿಯ ಶೈಕ್ಷಣಿಕ ವರ್ಷ, ೨೦-೨೧ರ ದಾಖಲಾತಿಯು ಮೇ ತಿಂಗಳ ೧ನೇ ತಾರೀಖಿನಿಂದ ಪ್ರಾರಂಭವಾಗಲಿದೆಯೆಂದು ತಿಳಿಸಲು ಕನ್ನಡ ಕಲಿಯ ತಂಡ ಹೆಮ್ಮೆಪಡುತ್ತದೆ. ಕಳೆದ ಎರಡು ವರ್ಷಗಳಿಂದ ನಾವು ಮೂರು ಶಾಖೆಗಳಲ್ಲಿ ತರಗತಿಗಳನ್ನು ನಡೆಸುತ್ತಿದ್ದೇವೆ. ಅದಲ್ಲದೆ, ಈ ವರ್ಷ ಕನ್ನಡ ಕಲಿ ಮುಖ್ಯ ಕೇಂದ್ರವು ತನ್ನ ಶಿಕ್ಷಕ ತಂಡದ ಸಹಕಾರ ಹಾಗೂ ಪ್ರಕ್ರಿಯೆಯ ಆಧಾರದ ಮೇಲೆ "Cupertino Extension Campus" ಅನ್ನು ಪ್ರಾರಂಭಿಸುತ್ತಿದೆಯೆಂದು ತಿಳಿಸಲು ಹರ್ಷಿಸುತ್ತೇವೆ. ಪ್ರತಿ ವರ್ಷದಂತೆ ಈ ವರ್ಷವೂ ಸೆಪ್ಟೆಂಬರ್ ತಿಂಗಳಿನಲ್ಲಿ ಶಾಲೆ ಪ್ರಾರಂಭವಾಗಲಿದ್ದು, ಮುಂದಿನ ಮೇ ತಿಂಗಳವರೆಗೂ ನಡೆಯಲಿದೆ. ಈ ಕೇಂದ್ರಗಳಲ್ಲಿ ನಿಮ್ಮ ಮಕ್ಕಳನ್ನು ನೊಂದಾಯಿಸಲು, ಕೆಳಗೆ ಸೂಚಿಸಿರುವ ಅಂತರ್ಜಾಲಗಳಿಗೆ ಭೇಟಿ ನೀಡಿ.

Main Center, Milpitas and Cupertino Extension

Evergreen Branch, San Jose

TVKS Branch, San Ramon

ವಂದನೆಗಳೊಂದಿಗೆ,
ಕನ್ನಡ ಕಲಿ ತಂಡ

ಹೆಚ್ಚಿನ ಪ್ರಶ್ನೆ/ವಿವರಗಳಿಗೆ ಈ ಕೆಳಕಂಡವರನ್ನು ಸಂಪರ್ಕಿಸಿ.

ಮಿಲ್ಪಿಟಾಸ್ ಮುಖ್ಯ ಕೇಂದ್ರ ಹಾಗೂ ಕುಪರ್ಟಿನೋ ಎಕ್ಸ್ ಟೆನ್ಷನ್ ಕ್ಯಾಮ್ಪಸ್:

       Principal ಜ್ಯೋತಿ ಸರಗೂರ್ ([email protected]) ಅಥವಾ

       Vice Principal ಸಂಧ್ಯಾ ಗಾಯತ್ರಿ ([email protected])

ಎವರ್ಗ್ರೀನ್ ಶಾಖೆ:

       ಪ್ರತಿಭಾ ಪ್ರಿಯದರ್ಶಿನಿ ([email protected]) ಅಥವಾ

       ವನಿತಾ ಬೇಲೂರ್ ([email protected])

ಟಿ ವಿ ಕೆ ಸ್ ಶಾಖೆ :

       ಸುಗುಣ ಹಾರನಹಳ್ಳಿ ([email protected]) ಅಥವಾ

       ರತ್ನ ದತ್ತ್ ([email protected]) ಅಥವಾ

       [email protected]

Social Media

Grand Annual Sponsor

Gold Sponsor

Sponsor