You are hereForums / ಕನ್ನಡ ನಾಡು ನುಡಿ - All about Kannada / ದಿನನಿತ್ಯದ ಮಾತುಗಳಲ್ಲಿ ಬಳಸಬಹುದಾದ ಕನ್ನಡ ಪದಗಳು!!
ದಿನನಿತ್ಯದ ಮಾತುಗಳಲ್ಲಿ ಬಳಸಬಹುದಾದ ಕನ್ನಡ ಪದಗಳು!!
ಇಂಗ್ಲಿಷ್‌ನ ಪ್ರಭಾವದಿಂದಲೋ, ಅಥವಾ ಇನ್ನಾವುದೇ ಕಾರಣದಿಂದಲೋ ನಾವು ಅನೇಕ, ಸುಲಭವಾದ ಕನ್ನಡ ಪದಗಳನ್ನು ನಮ್ಮ ದೈನಂದಿನ ಸಂಭಾಷಣೆಯಲ್ಲಿ ಬಳಸುವುದನ್ನು ನಿಲ್ಲಿಸಿ ಅದರ ಜಾಗದಲ್ಲಿ (ಅನೇಕ ಬಾರಿ ಕಷ್ಟಪಟ್ಟಾದರೂ!!) ಇಂಗ್ಲಿಷ್ ಪದಗಳನ್ನು ಬಳಸುತ್ತೇವೆ. ಇದನ್ನು ಬದಲಿಸಿ ಮತ್ತೆ ಕನ್ನಡ ಪದಗಳನ್ನು ಬಳಸುವ ಪ್ರಯತ್ನವನ್ನು ಮಾಡೋಣವೇ?
ಇಲ್ಲಿ ಕೆಲವು ಉಪಯುಕ್ತ, ಸುಲಭ ಹಾಗೂ ಮರೆತುಹೋದಂತ ಪದಗಳನ್ನು ನೀಡಲಾಗಿದೆ. ಈ ಪದಗಳನ್ನು ನಿಮ್ಮ ಪರಿವಾರದಲ್ಲಿ, ಕನ್ನಡ ಸ್ನೇಹಿತರ ಜೊತೆ, ಇತರ ಕನ್ನಡಿಗರ ಜೊತೆಗಿನ ಮಾತುಗಳಲ್ಲಿ ಉಪಯೋಗಿಸಲು ಒಂದು ಪ್ರಾಮಾಣಿಕ ಪ್ರಯತ್ನ ಮಾಡಿ (ಇದರಿಂದ ನಮ್ಮ ಇಂಗ್ಲಿಷ್ ಮರೆತುಹೋಗಿವುದಿಲ್ಲ ಎಂಬ ನಂಬಿಕೆ ನಮಗಿದೆ :-)!!). ಇನ್ನೂ ಹೆಚ್ಚಿನ ಸರಳ ಪದಗಳು ನಿಮಗೆ ತಿಳಿದರೆ ಖಂಡಿತ ಈ ವಿಚಾರವೇದಿಕೆಯಲ್ಲಿ ಸೇರಿಸಿ.
1> "Start ಮಾಡಿ" - "ಶುರು ಮಾಡಿ" !!
2> "Stop ಮಾಡಿ" - ನಿಲ್ಲಿಸಿ!!
3> "List ಮಾಡಿ" - "ಪಟ್ಟಿ ಮಾಡಿ" !!
4> "ಎಷ್ಟು Easy ಅಲ್ವಾ?" – "ಎಷ್ಟು ಸುಲಭ ಅಲ್ವಾ?" !!!
5> Embarrassment: ಮುಜಗರ/ತೊಂದರೆ/ಪೀಕಲಾಟ/ದಾಕ್ಷಿಣ್ಯ
6> "Flashಏ ಆಗೋದಿಲ್ಲ" – "ಹೊಳೆಯೋದಿಲ್ಲ!!"
7> "On the way" - ಹಾಗೆನೇ (ಅಥವಾ ’ದಾರಿಯಲ್ಲಿ'!!)
8> "Escape ಆದೆ" – "ತಪ್ಪಿಸ್ಕೊಂಡೆ"!
9> "Fold ಮಾಡು" - ಮಡಿಸು
10> "ನಾನು ಬೆಳಿಗ್ಗೆ 8 ಘಂಟೆಗೆ work start mಮಾಡಿದ್ರೆ ಮಧ್ಯಾಹ್ನ ಒಂದು half-hour lunch ತಗೊಳೊದು ಬಿಟ್ರೆ ಸಾಯಂಕಾಲ ಐದು ಘಂಟೆವರೆಗೂ little respite ಕೂಡ ಇರಲ್ಲ"
ಅಂತ ಹೇಳೋದಕ್ಕಿಂತ
"ನಾನು ಬೆಳಿಗ್ಗೆ 8 ಘಂಟೆಗೆ ಕೆಲಸ ಶುರು ಮಾಡಿದ್ರೆ ಮಧ್ಯಾಹ್ನ ಒಂದರ್ಧ ಘಂಟೆ ಊಟ ಮಾಡೋದು ಬಿಟ್ರೆ ಸಾಯಂಕಾಲ ಐದು ಘಂಟೆವರೆಗೂ ಒಂಚೂರು ವಿರಾಮ ಇರಲ್ಲ" ಅಂತ ಹೇಳೋದು ಎಷ್ಟು ಸರಳ, ಅಷ್ಟೇ ಅಲ್ಲ, ಕೇಳೋದಿಕ್ಕೂ ಎಷ್ಟು ಹಿತಕರ ಅಲ್ಲವೇ?
Try ಮಾಡಿ...ಅಲ್ಲಲ್ಲ!!! ಪ್ರಯತ್ನ ಮಾಡಿ ನೋಡಿ!!
* twenty rupees ಕೊಡಿ -> ಇಪ್ಪತ್ತು ರುಪಾಯಿ ಕೊಡಿ
* tea ಮಾಡ್ಲಾ -> ಚಹಾ ಮಾಡ್ಲಾ
* carrot, beans -> ಗಜ್ಜರಿ, ಹುರುಳಿಕಾಯಿ
* e-mail ಮಾಡು -> ಮಿಂಚೆ ಕಳಿಸು
* TV -> ದೂರದರ್ಶನ
* India -> ಭಾರತ
* singing class -> ಸಂಗೀತ ಪಾಠ
* taste ಮಾಡು -> ರುಚಿ ನೋಡು
* help ಮಾಡು -> ಸಹಾಯ ಮಾಡು
* straight ಆಗಿ ಹೋಗಿ left ತಿರಿಗ್ಕೊಳ್ಳಿ -> ನೇರವಾಗಿ ಹೋಗಿ ಎಡಕ್ಕೆ ತಿರಿಗ್ಕೊಳ್ಳಿ
* car parking -> ವಾಹನ ನಿಲುಗಡೆ
* discuss ಮಾಡಿ -> ಚರ್ಚೆ ಮಾಡಿ
* decide ಮಾಡು -> ನಿರ್ಧಾರ ಮಾಡು
ನಮಸ್ಕಾರ್ರೀ,
ಸ್ವಲ್ಪ ನಾವು ಗಮನ ಕೊಟ್ರೆ ನಾವು ದಿನ-ನಿತ್ಯ ಮಾತನಾಡುವ ’ಕನ್ನಡದಲ್ಲಿ’ ಅನವಶ್ಯಕವಾಗಿ ನುಸುಳೋ ಆಂಗ್ಲಪದಗಳನ್ನ ಕಡ್ಮಿ ಮಾಡ್ಬಹುದು. ಪ್ರಯತ್ನಿಸಿ ನೋಡಿ. ನಿಮಗೇ ನಿಮ್ಮ ಸಾಧನೆ ಬಗ್ಗೆ ಸಂತೋಷ ಆಗೋದಲ್ಲದೆ ಇತರರಿಗೂ ಸ್ಫೂರ್ತಿ ನೀಡ್ತೀರಾ. ಏನಂತೀರಿ?
ನಿಮಗೆ ಪೂರ್ತಿ ಕನ್ನಡದಲ್ಲೇ ಮಾತನಾಡುವ ಅಭಿಲಾಷೆ ಇದ್ರೆ ನನಗೊಂದು ಕರೆ ಕೊಡಿ :-) ಎಷ್ಟೋ ಸರ್ತಿ ನಾನು ಮಾತನಾಡೋದು ನೋಡಿ ’ಇವನ್ಯಾಕೆ ಇಂಗೆ ಆಡ್ತಾನೆ’ ಅಂದೊಂಡೋವ್ರು ಇದಾರೆ. ಅದನ್ನೆಲ್ಲ ಹಚ್ಚಿಕೋಬಾರ್ದು ಅಷ್ಟೆ.
ನೆನಪಿಗೆ ಬಂದ ಕೆಲ ಶಬ್ದಗಳನ್ನು ಇಲ್ಲಿ ಬರ್ದೀದೇನೆ. ಮೊಟ್ಟಮೊದಲಿಗೆ ನನಗೆ ನೆನಪಿಗೆ ಬರೋದು ಅಂದ್ರೆ..ಶೇಕಡಾ ೯೦ಕ್ಕಿಂತ ಹೆಚ್ಚು ನಮ್ಮವರು ’india' ಅಂತಾರೆ ’ಭಾರತ’ ಅನ್ನೋ ಬದ್ಲು.
noise = ಸದ್ದು, ಗಲಾಟೆ
call = ಕರೆ
directions = ಹೋಗುವ ದಾರಿ, ಮಾರ್ಗಸೂಚಿ
message = ಸಂದೇಶ
line = ರೇಖೆ
lunch = ಊಟ
breakfast = ತಿಂಡಿ
water = ನೀರು
daughter = ಮಗಳು
movie = ಚಲನಚಿತ್ರ
rent = ಭಾಡಿಗೆ
play = ಆಟ, ಹಚ್ಚು
guidance = ಮಾರ್ಗದರ್ಶನ
guardian = ಪಾಲಕ
school = ಶಾಲೆ
sound = ಸಪ್ಪಳ, ಸದ್ದು
pet = ಸಾಕುಪ್ರಾಣಿ
paper = ಕಾಗದ, ಹಾಳೆ
newspaper = ಸುದ್ದಿಪತ್ರಿಕೆ
toy = ಆಟಿಗೆ
cold = ಛಳಿ, ನೆಗಡಿ
umbrella = ಕೊಡೆ, ಛತ್ರಿ
upset = ಬೇಜಾರು
competition = ಸ್ಪರ್ಧೆ
responsibility = ಜವಾಬ್ದಾರಿ
corruption = ಭ್ರಷ್ಟಾಚಾರ
fair = ನ್ಯಾಯ
cheap = ಅಗ್ಗ, ಸೋವಿ
loan = ಸಾಲ
interest = ಆಸಕ್ತಿ, ಬಡ್ಡಿ
good night = ಶುಭರಾತ್ರಿ
ನಿಮ್ಮ,
ಅಶೋಕ
ರೀ ಅಶೋಕ್ ನೀವು ಕಳೆದುಹೋದಗಂದರ್ವ ಊರಿನಿಂದ ಯಾವಾಗ ಉಗಿಬಂಡಿಯಲ್ಲಿ ಬರ್ತಿರ ಅಂತ ನನ್ನ ಚಲಿಸುವ ದೂರವಾಣಿಗೆ ಕರಿ ಮಾಡಿ. ನಾನು ಚತುರ್ಚಕ್ರ ವಾಹನದಲ್ಲಿ ನಿಲ್ದಾಣಕ್ಕೆ ಬಂದು ನಿಮಗೆ ಎತ್ತಿ ಕೊಡ್ತೀನಿ.
* twenty rupees ಕೊಡಿ -> ಇಪ್ಪತ್ತು ರುಪಾಯಿ ಕೊಡಿ
* tea ಮಾಡ್ಲಾ -> ಚಹಾ ಮಾಡ್ಲಾ
* carrot, beans -> ಗಜ್ಜರಿ, ಹುರುಳಿಕಾಯಿ
* e-mail ಮಾಡು -> ಮಿಂಚೆ ಕಳಿಸು
* India-ಗೆ ಹೋಗುತ್ತೇನೆ -> ಭಾರತಕ್ಕ ಹೋಗುತ್ತೇನೆ
* singing class -> ಸಂಗೀತ ಪಾಠ
* taste ಮಾಡು -> ರುಚಿ ನೋಡು
* help ಮಾಡು -> ಸಹಾಯ ಮಾಡು
* straight ಆಗಿ ಹೋಗಿ left ತಿರಿಗ್ಕೊಳ್ಳಿ -> ನೇರವಾಗಿ ಹೋಗಿ ಎಡಕ್ಕೆ ತಿರಿಗ್ಕೊಳ್ಳಿ
* car parking -> ವಾಹನ ನಿಲುಗಡೆ
* discuss ಮಾಡಿ -> ಚರ್ಚೆ ಮಾಡಿ
* decide ಮಾಡು -> ನಿರ್ಧಾರ ಮಾಡು
* appreciate ಮಾಡು -> ಮೆಚ್ಚು, ಗೌರವಿಸು
* time ಎಷ್ಟು -> ಸಮಯ ಎಷ್ಟು
* brush ಮಾಡು -> ಹಲ್ಲು ಉಜ್ಜು
* results ಬಂತಾ -> ಫಲಿತಾಂಶ ಬಂತಾ
* ಒಳ್ಳೆ talent -> ಒಳ್ಳೆ ಪ್ರತಿಭೆ
* memory ಚೆನ್ನಾಗಿದೆ -> ಜ್ಞಾಪಕಶಕ್ತಿ ಚೆನ್ನಾಗಿದೆ
* line busy ಇದೆ -> ದೂರವಾಣಿ ಕಾರ್ಯನಿರತವಾಗಿದೆ
* higher studies -> ಉನ್ನತ ವ್ಯಾಸಂಗ
* apply ಮಾಡು -> ಅರ್ಜಿ ಹಾಕು
* happy ದಿವಾಳಿ -> ದೀಪಾವಳಿ ಹಬ್ಬದ ಶುಭಾಶಯಗಳು
* Congratulations! -> ಅಭಿನಂದನೆಗಳು!
* TV -> ದೂರದರ್ಶನ