Sneha Bandhana (ಸ್ನೇಹ ಬಂಧನ)

Are you new to KKNC? Do you feel like fish out of water when you attend KKNC events because you don't know many people? Are you interested in making friends with other Kannadigas in the Bay Area and network with them? If so please join Vishwanand Pattanashetty's orientation program Sneha Bandhana.This is an excellent opportunity to meet other new Kannadigas as well as those who have settled here for some time. for more information please contact Vishwanand Pattanashetty at the following address [email protected]

ನೀವು KKNCಗೆ ಹೊಸಬರೇ? KKNC ಜನರ ಪರಿಚಯ ಇಲ್ಲದಿಂದರಿಂದಾಗಿ ಕಾರ್ಯಕ್ರಮಗಳಿಗೆ ಬರಲು ಮಜುಗುರವೆನಿಸುತ್ತದೆಯೇ? ಇತರ ಕನ್ನಡಿಗರೊಂದಿಗೆ ಒಡನಾಡಲು, ಪರಿಚಯ ಮಾಡಿಕೊಳ್ಳಲು, Network ಮಾಡಲು, ಆಸಕ್ತಿ ಇದೆಯೇ? ಹಾಗಾದರೆ ವಿಶ್ವಾನಂದ ಪಟ್ಟಣಶೆಟ್ಟಿ ಅವರು ಪ್ರಾರಂಭಿಸಿರುವ "ಸ್ನೇಹ ಬಂಧನ" ಎಂಬ ಕಾರ್ಯಕ್ರಮವನ್ನು (orientation program) ಸೇರಿಕೊಳ್ಳಿ. ನಿಮಗೆ ಇದು ಇತರ ಹೊಸ ಕನ್ನಡಿಗರು ಹಾಗೂ ಹಲವಾರು ವರ್ಷಗಳಿಂದ ಇಲ್ಲೇ ನೆಲಸಿರುವ ಕನ್ನಡಿಗರ ಪರಿಚಯ ಮಾಡಿಕೊಳ್ಳುವ ಒಳ್ಳೆ ಅವಕಾಶ.ಹೆಚ್ಚಿನ ವಿವರಗಳಿಗಾಗಿ ವಿಶ್ವಾನಂದ ಪಟ್ಟಣಶೆಟ್ಟಿ ಅವರನ್ನು ಸಂಪರ್ಕಿಸಿ [email protected]

ಸ್ವರ್ಣಸೇತು 2013

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ(ಕೆ.ಕೆ.ಎನ್.ಸಿ), ರತ್ನ ಮಹೋತ್ಸವದ ಅಂಗವಾಗಿ, ಅಮೇರಿಕಾದ ಉದ್ದಗಲಕ್ಕೂ ಕಥಾಸ್ಪರ್ಧೆಯನ್ನು ಘೋಷಿಸಿದೆ. ಕೆ.ಕೆ.ಎನ್.ಸಿ ಪ್ರತಿ ವರ್ಷವೂ ಬಿಡುಗಡೆ ಮಾಡುವ ’ಸ್ವರ್ಣಸೇತು’ ಸಂಚಿಕೆಯಲ್ಲಿ ಆಯ್ದ ಕಥೆಗಳನ್ನು ಪ್ರಕಟಿಸಲಾಗುತ್ತದೆ.

ಕಥಾಸ್ಪರ್ಧೆಯ ನಿಬಂಧನೆಗಳು ಹೀಗಿದೆ:

- ಕಥೆಯು ಕನ್ನಡದಲ್ಲಿರಬೇಕು ಮತ್ತು ಆರು ಪುಟ ಮೀರಬಾರದು.
- ಕಥೆಯು ಸ್ವಂತದ್ದಾಗಿರಬೇಕು ಹಾಗೂ ಬೇರೆ ಎಲ್ಲೂ ಪ್ರಕಟವಾಗಿರಬಾರದು.
- ಅನುವಾದಿತ ಕಥೆಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿಲ್ಲ.
- ಸ್ಪರ್ಧೆಗೆ ಕಳುಹಿಸಿದ ಕಥೆಗಳನ್ನು ಸ್ವರ್ಣಸೇತು 2013 ಸಂಚಿಕೆ ಪ್ರಕಟಣೆಯಾಗುವವರೆಗೂ ಬೇರೆಲ್ಲೂ (ಬ್ಲಾಗ್ ಸೇರಿದಂತೆ) ಪ್ರಕಟಿಸುವಂತಿಲ್ಲ.
- ಕಥೆಗಳು ಯೂನಿಕೋಡ್/ತುಂಗಾ ಫಾಂಟ್ ನಲ್ಲಿ, MS-Wordನಲ್ಲಿ ಫಾಂಟ್ ಸೈಜ ೧೨ರಲ್ಲಿ ಕಳಿಸತಕ್ಕದ್ದು, ಯಾವುದೇ ಕಾರಣಕ್ಕೂ ಹಸ್ತಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ.
- ಕಳಿಸಿದ ಕಥೆಗಳಲ್ಲಿ ಹೆಚ್ಚಾಗಿ ಕಾಗುಣಿತ/ವ್ಯಾಕರಣ ದೋಷಗಳಿದ್ದಲ್ಲಿ, ಸ್ಪರ್ಧೆಗೆ ಪರಿಗಣಿಸುವುದಿಲ್ಲ.
- ಅಮೆರಿಕಾದ ಹೊರಗಿರುವ ಬರಹಗಾರರಿಗೆ ಅವಕಾಶವಿಲ್ಲ.
- ನಿಮ್ಮ ಕಥೆಗಳನ್ನು 5 ನೇ ಎಪ್ರಿಲ್ 2013 ರ ಒಳಗೆ ಕಳಿಸತಕ್ಕದ್ದು.
- ಸ್ಪರ್ಧೆಗೆ ಒಂದಕ್ಕಿಂತ ಹೆಚ್ಚು ಕಥೆಗಳನ್ನು ಕಳಿಸುವ ಹಾಗಿಲ್ಲ.
- ಸ್ಪರ್ಧೆಗೆ ಸಲ್ಲಿಸಿದ ಯಾವುದೇ ಕಥೆಯನ್ನಾದರೂ ಸ್ವರ್ಣಸೇತು-2013ರಲ್ಲಿ ಪ್ರಕಟಿಸುವ ಅಥವಾ ಪ್ರಕಟಿಸದೆ ಇರುವ ತೀರ್ಮಾನ ಸ್ವರ್ಣಸೇತು ಸಂಪಾದಕ ಸಮಿತಿಯದಾಗಿರುತ್ತದೆ.
ಕಥೆಯೊಂದಿಗೆ ನಿಮ್ಮ ಭಾವಚಿತ್ರ, ಈ-ಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ದಯವಿಟ್ಟು ಕಳಿಸತಕ್ಕದ್ದು.
- ನಿಮ್ಮ ಕಥೆಗಳನ್ನು [email protected] ಗೆ ಕಳಿಸಿ.
- ತೀರ್ಪುಗಾರರ ನಿರ್ಧಾರವೇ ಅಂತಿಮ.

Social Media

Our Partners