Happy New Year from 2014 & 2015 Executive Team

ಮಾನ್ಯರೇ

ತಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ೨೦೧೫ ಎಲ್ಲರಿಗೂ ಸಂತೋಷ ಹಾಗೂ ಅಭಿವೃದ್ಧಿಯನ್ನು ತರಲೆಂದು ಹಾರೈಸುತ್ತೇವೆ.

ಪ್ರತಿ ವರ್ಷದಂತೆಯೇ, ಈ ವರ್ಷವೂ ಹೊಸ ತಂಡವೊಂದು ನಮ್ಮ ಕನ್ನಡ ಕೂಟದ ಸಾರಥ್ಯವಹಿಸಲು ಮುಂದೆ ಬಂದಿದೆ. ಹಾಗೆಯೇ ಪ್ರತಿ ವರ್ಷದಂತೆ, ಹೊಸ ತಂಡಕ್ಕೆ ನಿಮ್ಮೆಲ್ಲರ ಬೆಂಬಲ, ಪ್ರೀತಿ ಹಾಗೂ ಉತ್ತೇಜನ ಬೇಕಾಗಿದೆ. ಈ ವರ್ಷದ ಮೊದಲನೇ ಕಾರ್ಯಕ್ರಮ, ಸಂಕ್ರಾಂತಿ ಜನವರಿ ೩೧ರಂದು ಫುಟ್-ಹಿಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ೨೦೧೫ರ ಕಾರ್ಯಕಾರಿ ಸಮಿತಿಯು ನಿಮ್ಮೆಲ್ಲರಿಗೂ ಈ ಮೂಲಕ ಸ್ವಾಗತ ಕೋರುತ್ತಿದೆ. ಬನ್ನಿ, ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ಕನ್ನಡಕೂಟವನ್ನು ಎಲ್ಲ ಕನ್ನಡಿಗರ ಏಳಿಗೆಗೆ ಸಾಧಕವಾಗುವ ವೇದಿಕೆಯಾಗಿಸೋಣ.
೨೦೧೫ರ ಕಾರ್ಯಕಾರಿ ಸಮಿತಿಯು ನಿಮ್ಮೆಲ್ಲರಿಗೂ ಈ ಮೂಲಕ ಸ್ವಾಗತ ಕೋರುತ್ತಿದೆ. ಬನ್ನಿ, ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ಕನ್ನಡಕೂಟವನ್ನು ಎಲ್ಲ ಕನ್ನಡಿಗರ ಏಳಿಗೆಗೆ ಸಾಧಕವಾಗುವ ವೇದಿಕೆಯಾಗಿಸೋಣ.
ಕನ್ನಡ ಕೂಟದ ಸದಸ್ಯತ್ವ ಪಡೆಯಲು ಕ್ಲಿಕ್ಕಿಸಿ http://kknc.org/join

ನಿಮ್ಮ
ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ - ೨೦೧೫ರ ಕಾರ್ಯಕಾರಿ ಸಮಿತಿ

Dear all,

Wish you a very happy and prosperous new year!

As with every year, with new year comes in a new team to take KKNC to the next level. Again, as with every year, the new team needs all your support, love and encouragement. 2015 executive team would like to welcome you all to join us on first event of the year - Sankranthi happening at the Foothill college auditorium on Jan 31st. Together, let us take KKNC to new heights and build a stronger platform for all Kannadigas to come together.

Sankranthi happening at the Foothill college auditorium on Jan 31st. Together, let us take KKNC to new heights and build a stronger platform for all Kannadigas to come together.
To join KKNC, please go to http://kknc.org/join

Yours
KKNC Executive Team - 2015

------------------------------------------------------------

Message from 2014 Executive Team

------------------------------------------------------------

ಪ್ರೀತಿಯ ಕನ್ನಡ ಕೂಟದ ಸದಸ್ಯರಿಗೂ ಮತ್ತು ಅವರ ಕುಟುಂಬಕ್ಕೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು !!!
೨೦೧೪ ನೆ ಇಸವಿಯ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಮತ್ತು ಸಂಪೂರ್ಣ ಬೆಂಬಲಕ್ಕೆ ನಮ್ಮ ಧನ್ಯವಾದಗಳು!!!
ನಾವು ೨೦೧೪ ನೇ ಇಸವಿಯ ಕನ್ನಡ ಕೂಡದ ಸೇವೆ ಸಲ್ಲಿಸಲು ಮುಂದೆ ಬಂದಾಗ ನಮ್ಮ ಬಳಗದ ಎಲ್ಲ ವಯಸ್ಕರಿಗೂ ಸರಿಹೋಗುವಂತ, ಅನೇಕ ಕಲೆ ಮತ್ತು ಹವ್ಯಾಸಗಳಲ್ಲಿ ಆಸಕ್ತಿ ಇರುವವರಿಗೆ ಸಮಾಧಾನ ತರುವಂತ , ಒಳ್ಳೆಯ ಗುಣಮಟ್ಟವಿರುವ ಕಾರ್ಯಕ್ರಮಗಳನ್ನು ಮತ್ತು ೨೦೧೪ ರ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಯಶಸ್ವಿಗೊಳಿಸಲು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೆವು.
ಸ್ನೇಹಿತರೇ, ನಮಗೆ ಈ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿರುವ ಸಂತಸವನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇವೆ.
ನಮ್ಮ ೨೦೧೪ ರ ಕೂಟದ ಪ್ರಮುಖ ಕಾರ್ಯಕ್ರಮಗಳಾದ ಸಂಕ್ರಾಂತಿ , ಯುಗಾದಿ ಮತ್ತು ದೀಪೋತ್ಸವಕ್ಕೆ ಅತ್ಯುತ್ತಮ ಮನರಂಜನಾ ಕಾರ್ಯಕ್ರಮಗಳನ್ನು ತರುವುದು.
ನಮ್ಮ ಕೂಟದ ಬಗ್ಗೆ ಅನೇಕ ಬೆಂಬಲಿಗರಿಗೆ ಅನುಕೂಲವಾಗುವ ಮತ್ತು ಆಸಕ್ತಿ ತರುವ ತರಬೇತಿ ಶಿಬಿರಗಳನ್ನು ಮತ್ತು ಕೂಟದ ಬಲವೃದ್ಧಿಗೆ ಸಹಾಯವಾಗುವಂತ ಕಾರ್ಯಕ್ರಮಗಳನ್ನು ನಡೆಸಿಕೊಡುವುದು.
ಉದಾಹರಣೆಗೆ
ಫೋಟೋಗ್ರಫಿ , ಮ್ಯಾರಥಾನ್ ತರಬೇತಿ, ಕಾಲೇಜ್ ಕೌನ್ಸೆಲ್ಲಿಂಗ್ , ತೂಕ ಇಳಿಸುವ ಶಿಬಿರ , ಉದ್ಯಮಿಗಳಾಗಲು ತರಬೇತಿ , ಮುಂಜಾನೆಯ ರಾಗಗಳು-ಸಂಗೀತ ಕಚೇರಿ ಮತ್ತು ಹಲವಾರು ಕಾರ್ಯಕ್ರಮಗಳು.
ಕೂಟದ ಸದಸ್ಯರ ಮುಂದಾಳತ್ವದಲ್ಲಿ ನಡೆಯುವ ಅನೇಕ ಧನ ಸಹಾಯ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು - ನಾಟಕ ಚೈತ್ರ (ಶಂಕರ ಕ್ಯಾನ್ಸರ್ ಸಂಸ್ಥೆಗೆ ), ಸೇವತ್ಹಾನ್(ಸ್ಥಳೀಯ ಸಂಸ್ಥೆಗಳಿಗೆ) ಮತ್ತು ಸುಂದರ ಸ್ವಪ್ನ (UVCE - ಸಂಸ್ಥೆಗೆ ಧನ ಸಹಾಯ )
(ನಮ್ಮ ಯುವಕ ಮತ್ತು ಯುವತಿಯರ ಮುಂದಾಳತ್ವದಲ್ಲಿ ಅನೇಕ ಸ್ಥಳೀಯ ಸಂಸ್ಥೆಗಳಿಗೆ ಸಹಾಯ ಧನ ಕಾರ್ಯಕ್ರಮಗಳು - ಸೆಕೆಂಡ್ ಹಾರ್ವೆಸ್ಟ್ ಫುಡ್ ಬ್ಯಾಂಕ್ , ಬ್ಯಾಕ್ ಪ್ಯಾಕ್ ಡ್ರೈವ್, ಗಿಡ ನೆಡುವ ಕಾರ್ಯಕ್ರಮ , ಸಮುದಾಯ ಅನ್ನದಾನ ಮತ್ತು ಬೆಟರ್ ವರ್ಲ್ಡ್ ಸಂಸ್ಥೆಗೆ ಪುಸ್ತಕ ಸಹಾಯ
ಸ್ಥಳೀಯ ಸಂಸ್ಥೆಗಳಲ್ಲಿ ಕನ್ನಡ ಕೂಟದ ಬಗ್ಗೆ ಜಾಗೃತಿ ಮೂಡಿಸಲು - "ಗೋಲ್ಡನ್ ಗೇಟ್ ಬ್ರಿಜ್ ವಾಕ್ " ಹಮ್ಮಿಕೊಂಡಿದ್ದೆವು - ಇದರ ಮೂಲಕ ಸಿಟಿ ಆಫ್ ಸ್ಯಾನ್ ಹೋಸೆ ಮತ್ತು ಸಿಟಿ ಆಫ್ ಸ್ಯಾನ್ ಫ್ರಾನ್ಸಿಸ್ಕೋ ಸಂಸ್ಥೆಗಳು - ಆಗಸ್ಟ್ ೩೦ ನೆ ತಾರೀಕು ೨೦೧೪ ನೆ ಇಸವಿಯ ದಿನವನ್ನು - ಕನ್ನಡ ಕೂಟ ಮತ್ತು ಅಕ್ಕ ದಿನವೆಂದು ಘೋಷಿಸಿದವು.
ಎಲ್ಲದಕಿಂತ ಮಹತ್ವದ ಸಾಧನೆ - ನಮ್ಮ ಕನ್ನಡ ಕೂಟದ ನಾಯಕರು ಮತ್ತು ಸದಸ್ಯ ಸ್ವಯಂಸೇವಕರು ೨೦೧೪ ರ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಅತ್ಯುತ್ತಮವಾಗಿ ನಡೆಸಿಕೊಟ್ಟಿರುವುದು- ಕಾರ್ಯಕ್ರಮಗಳ ಗುಣಮಟ್ಟ, ನಮ್ಮ ಆತಿಥ್ಯ ಮತ್ತು ನಿರ್ವಹಣೆಯ ಶ್ರೇಷ್ಠತೆಯ ವಿಷಯದಲ್ಲಿ ಭಾರಿ ಒಳ್ಳೆಯ ವಿಮರ್ಶೆಗಳನ್ನು ಪಡೆದಿವೆ.
ನಮ್ಮ ಸದಸ್ಯರ ಸಂಪೂರ್ಣ ಬೆಂಬಲ ಮತ್ತು ಸಹಾಯದಿಂದ ಮಾತ್ರ ಈ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಯಿತು. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ೨೦೧೪ ರ ಸಮಿತಿಯ ನಮನಗಳು. ಇದೇ ರೀತಿ ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲವನ್ನು ನಮ್ಮ ೨೦೧೫ ರ - ಸುದತ್ತ ಗೌತಮ್ ಮತ್ತು ತಂಡದವರಿಗೆ ಕೊಟ್ಟು ನಮ್ಮ ಕೂಟವನ್ನು ಬೆಳೆಸುವಿರೆಂದು ನಂಬಿದ್ದೇವೆ.

- ೨೦೧೪ ರ ಕನ್ನಡ ಕೂಟದ ಸಮಿತಿಗಳು

Wishing all our Kannada speaking friends and families a very Happy New Year 2015!!!
We would like to take this opportunity to convey our heartfelt Thanks for supporting our team the whole year through your patron-ship, best wishes and participation in all our programs and activities all through the year 2014.
When we started out at the start of 2014 to serve our beloved KKNC organization, we had several goals that would help reach out to maximum cross section of our community through variety of interests and successfully host the AKKA 2014 convention to showcase our talent and hospitality to all the Kannadigas visiting our home - Bay Area.
Friends, we are happy and proud that we were able to achieve most of our goals that we set out for the year 2014 at KKNC,
To bring quality cultural programs as prime time shows on each of our major events, Sankranthi, Yugadi and Deepotsava
To promote various activities that would reach maximum Kannada speaking individuals and build a stronger community interaction- we were able to achieve that through workshops and programs like - Photography, Marathon Training, College Planning and Counselling, Weight Loss Challenge, Entrepreneurship , Theater and Art training and Morning Raagas (Charity event )
To promote and partner with charitable non profit organizations that are led by many of our members- Nataka Chaitra(Shankara Cancer Foundation), Sevathon and Sundara Swapna(UVCE Foundation)
Involving youths and young adults through various activities like Food Collection for Second Harvest Food Bank, Tree Planting, Book Donation to Better World, Donation of Back Packs for the needy kids by raising funds through pizza and baked cookie sales at our KKNC events, Donation of food to Community Meal Service Program.
As an initiative to promote KKNC among other local organizations we were able to work with the City of San Jose and San Francisco to organize Golden Gate Bridge Walk and were honored from the cities a proclamation to declare August 30th 2014 as KKNC and AKKA day.
Best of ALL- KKNC with its leaders and member volunteers has hosted the AKKA World Kannada Conference 2014, considered to be the BEST so far, in terms of quality of programs, hospitality and excellence in execution, which has and still receiving rave reviews from across the world.
All these would not have been possible without our members participation, passion and support.
Once Again, Thank you all for the support and Looking forward for your continued support and patron-ship for the next year. We are PROUDLY SIGNING off as the KKNC 2014 team by welcoming the new KKNC 2015 team led by Sudatta Gautham and Team. See you all at the KKNC Shankranti event on January 31st, 2015.

-KKNC 2014 Committees.

Social Media


Grand Annual Sponsor

Sponsors