You are hereಸ್ವರ್ಣಸೇತು 2013

ಸ್ವರ್ಣಸೇತು 2013


By cjeerage - Posted on 22 March 2013

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ(ಕೆ.ಕೆ.ಎನ್.ಸಿ), ರತ್ನ ಮಹೋತ್ಸವದ ಅಂಗವಾಗಿ, ಅಮೇರಿಕಾದ ಉದ್ದಗಲಕ್ಕೂ ಕಥಾಸ್ಪರ್ಧೆಯನ್ನು ಘೋಷಿಸಿದೆ. ಕೆ.ಕೆ.ಎನ್.ಸಿ ಪ್ರತಿ ವರ್ಷವೂ ಬಿಡುಗಡೆ ಮಾಡುವ ’ಸ್ವರ್ಣಸೇತು’ ಸಂಚಿಕೆಯಲ್ಲಿ ಆಯ್ದ ಕಥೆಗಳನ್ನು ಪ್ರಕಟಿಸಲಾಗುತ್ತದೆ.

ಕಥಾಸ್ಪರ್ಧೆಯ ನಿಬಂಧನೆಗಳು ಹೀಗಿದೆ:

- ಕಥೆಯು ಕನ್ನಡದಲ್ಲಿರಬೇಕು ಮತ್ತು ಆರು ಪುಟ ಮೀರಬಾರದು.
- ಕಥೆಯು ಸ್ವಂತದ್ದಾಗಿರಬೇಕು ಹಾಗೂ ಬೇರೆ ಎಲ್ಲೂ ಪ್ರಕಟವಾಗಿರಬಾರದು.
- ಅನುವಾದಿತ ಕಥೆಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿಲ್ಲ.
- ಸ್ಪರ್ಧೆಗೆ ಕಳುಹಿಸಿದ ಕಥೆಗಳನ್ನು ಸ್ವರ್ಣಸೇತು 2013 ಸಂಚಿಕೆ ಪ್ರಕಟಣೆಯಾಗುವವರೆಗೂ ಬೇರೆಲ್ಲೂ (ಬ್ಲಾಗ್ ಸೇರಿದಂತೆ) ಪ್ರಕಟಿಸುವಂತಿಲ್ಲ.
- ಕಥೆಗಳು ಯೂನಿಕೋಡ್/ತುಂಗಾ ಫಾಂಟ್ ನಲ್ಲಿ, MS-Wordನಲ್ಲಿ ಫಾಂಟ್ ಸೈಜ ೧೨ರಲ್ಲಿ ಕಳಿಸತಕ್ಕದ್ದು, ಯಾವುದೇ ಕಾರಣಕ್ಕೂ ಹಸ್ತಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ.
- ಕಳಿಸಿದ ಕಥೆಗಳಲ್ಲಿ ಹೆಚ್ಚಾಗಿ ಕಾಗುಣಿತ/ವ್ಯಾಕರಣ ದೋಷಗಳಿದ್ದಲ್ಲಿ, ಸ್ಪರ್ಧೆಗೆ ಪರಿಗಣಿಸುವುದಿಲ್ಲ.
- ಅಮೆರಿಕಾದ ಹೊರಗಿರುವ ಬರಹಗಾರರಿಗೆ ಅವಕಾಶವಿಲ್ಲ.
- ನಿಮ್ಮ ಕಥೆಗಳನ್ನು 5 ನೇ ಎಪ್ರಿಲ್ 2013 ರ ಒಳಗೆ ಕಳಿಸತಕ್ಕದ್ದು.
- ಸ್ಪರ್ಧೆಗೆ ಒಂದಕ್ಕಿಂತ ಹೆಚ್ಚು ಕಥೆಗಳನ್ನು ಕಳಿಸುವ ಹಾಗಿಲ್ಲ.
- ಸ್ಪರ್ಧೆಗೆ ಸಲ್ಲಿಸಿದ ಯಾವುದೇ ಕಥೆಯನ್ನಾದರೂ ಸ್ವರ್ಣಸೇತು-2013ರಲ್ಲಿ ಪ್ರಕಟಿಸುವ ಅಥವಾ ಪ್ರಕಟಿಸದೆ ಇರುವ ತೀರ್ಮಾನ ಸ್ವರ್ಣಸೇತು ಸಂಪಾದಕ ಸಮಿತಿಯದಾಗಿರುತ್ತದೆ.
ಕಥೆಯೊಂದಿಗೆ ನಿಮ್ಮ ಭಾವಚಿತ್ರ, ಈ-ಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ದಯವಿಟ್ಟು ಕಳಿಸತಕ್ಕದ್ದು.
- ನಿಮ್ಮ ಕಥೆಗಳನ್ನು [email protected] ಗೆ ಕಳಿಸಿ.
- ತೀರ್ಪುಗಾರರ ನಿರ್ಧಾರವೇ ಅಂತಿಮ.

Tags

Social Media

Grand Annual Sponsor

Sponsors