KKNC Election Results sticky icon

As you all are aware, there more than one nomination for the following vacancies in the Board of Trustees:
BOT Vice Chair : Two Candidates – Shri Raghunandan Halur and Smt. Padma Rao
BOT Member : Shri Madhusudan Melkote and Shri Basavaraja Banakar
As such, there was an Election on Saturday, November 16, 2013 between 3pm - 7pm at Spangenberg theater of Gunn High School Palo Alto, 780 Arastradero Rd, Palo Alto, CA 94306
Election was smooth and here is the result:
1. Shri Raghunandan Halur has been elected as BOT Vice Chair.
2. Shri Basavaraja Banakar has been elected as BOT member

Successful 2013 KKNC Deepotsava! Thank You !! sticky icon

ಪ್ರೀತಿಯ ಎಲ್ಲರಿಗೂ ನಮಸ್ಕಾರ.
ಕಳೆದ ಜನವರಿಯಿಂದ ಒಟ್ಟಾಗಿ ಕೆ ಕೆ ಎನ್ ಸಿ ಗಾಗಿ ಸಮಿತಿಗಳನ್ನು ಸೇರಿಕೊಂಡು ಸೇವೆ ಸಲ್ಲಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು. 2013 ಕೆ ಕೆ ಎನ್ ಸಿ ದೀಪೋತ್ಸವದ ಯಶಸ್ಸಿಗೆ ಕಾರಣರಾದ ಎಲ್ಲ ಸಮಿತಿಯ ಸದಸ್ಯರು, ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಥಳೀಯ ಕಲಾವಿದರು ಮತ್ತು ಭಾರತದಿಂದ ಆಗಮಿಸಿದ ಎಮ್ ಡಿ ಕೌಶಿಕ್, ಅಜಯ್ ವಾರಿಯರ್ ಮತ್ತು ದಿವ್ಯಾ ರಾಘವನ್ ಇವರಿಗೆ, ಕಾರ್ಯಕ್ರಮಕ್ಕೆ ವಿಶೇಷ ಕಳೆನೀಡಿದ್ದ ಎಲ್ಲ ನಲವತ್ತು ವರ್ಷಗಳ ಕೆ ಕೆ ಎನ್ ಸಿ ಅಧ್ಯಕ್ಷರುಗಳಿಗೆ ಮತ್ತು ಆಗಮಿಸಿದ ಎಲ್ಲ ಕೆ ಕೆ ಎನ್ ಸಿ ಸದಸ್ಯರಿಗೂ, ಪ್ರೇಕ್ಷಕರಿಗೂ ಕೆ ಕೆ ಎನ್ ಸಿ ಕಾರ್ಯಕಾರಿ ಸಮಿತಿಯು ಧನ್ಯವಾದಗಳನ್ನು ಅರ್ಪಿಸುತ್ತದೆ :-)

೨೦೧೩ರ ಕೆ ಕೆ ಎನ್ ಸಿ ಕಾರ್ಯಕಾರಿ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ ಧನಂಜಯ ಕೆಂಗಯ್ಯ ಅವರು ೨೦೧೪ನೆಯ ಕೆ ಕೆ ಎನ್ ಸಿ ಅಧ್ಯಕ್ಷರಾಗಿ, ಶ್ರೀ ನಂದಕಿಶೋರ ಅವರು BOT ಅಧ್ಯಕ್ಷರಾಗಿ ಮತ್ತು ಶ್ರೀ ರಘು ಹಾಲೂರು ಅವರು BOT ಉಪಾಧ್ಯಕ್ಷರಾಗಿಯೂ, ಶ್ರೀ ಬಸವರಾಜ್ ಬಣಕರ್ ಅವರು BOT ಸದಸ್ಯರಾಗಿಯೂ ಸೇವೆ ಸಲ್ಲಿಸಲಿದ್ದಾರೆ. ಇವರೆಲ್ಲರಿಗೆ ಕೆ ಕೆ ಎನ್ ಸಿ ಕಾರ್ಯಕಾರಿ ಸಮಿತಿಯು ಎಲ್ಲರ ಪರವಾಗಿ ಅಭಿನಂದನೆಗಳನ್ನು ಅರ್ಪಿಸುತ್ತದೆ :-)
ಕನ್ನಡಿಗರು ೨೦೧೩ನೇಯ ವರ್ಷಕ್ಕೆ ನೀಡಿದ ಪ್ರೋತ್ಸಾಹ, ಸಹಕಾರ ಅಪಾರವಾದದ್ದು. ಅದೇ ತೆರನಾದ ಸಹಕಾರವನ್ನು, ಬೆಂಬಲವನ್ನು ೨೦೧೪ರಲ್ಲಿ ಧನಂಜಯ ಕೆಂಗಯ್ಯ ಮತ್ತು ತಂಡಕ್ಕೂ ನೀಡಿರೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ :-)

ವಂದನೆಗಳೊಂದಿಗೆ,
ಪ್ರೀತಿಯಿಂದ,
ಕಾರ್ಯಕಾರಿ ಸಮಿತಿ ೨೦೧೩
ಕನ್ನಡಕೂಟ ಉತ್ತರಕ್ಯಾಲಿಫೋರ್ನಿಯಾ

Social Media

Our Partners