You are herePrevious Events

Previous Events


ಕನ್ನಡಕೂಟದ 2019ರ ಕಾರ್ಯಕ್ರಮಳು

Glimpses of KKNC in 2019
!! Thanks to all the volunteers who joined us in making this year very special !!

ಕನ್ನಡಕೂಟದ 2019 ರ ವಾರ್ಷಿಕ ಸಂಚಿಕೆ "ಸ್ವರ್ಣಸೇತು" ಬಿಡುಗಡೆ ಹಾಗು 2019ರ ಸ್ವಯಂಸೇವಾ ಕಾರ್ಯಕರ್ತರ "ಅಭಿನಂದನಾ ಸಮಾರಂಭ" ಡಿಸೆಂಬರ 14, 2019 ರಂದು @ Independence High School, San Jose

ಥಟ್ ಅಂಥ ಹೇಳಿ ಖ್ಯಾತಿಯ ಡಾ ।। ನಾ. ಸೋಮೇಶ್ವರ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ನಮ್ಮೆಲ್ಲರ ನೆಚ್ಚಿನ ಥಟ್ ಅಂಥ ಹೇಳಿ ಕಾರ್ಯಕ್ರಮವನ್ನು ಕೂಡ ಅವರು ನಡೆಸಿಕೊಡಲಿದ್ದಾರೆ.

ದೀಪೋತ್ಸವ On Nov 16th @ Carrington Hall, 1201 Brewster Avenue, at El Camino Real, Redwood City

ಬೇ ಏರಿಯಾ ದಲ್ಲಿ ಭರತ ನಾಟ್ಯ ಹಾಗೂ ಹಿಂದೂಸ್ತಾನಿ ಅಥವಾ ಕರ್ನಾಟಿಕ್ ಶಾಸ್ತ್ರೀಯ ಸಂಗೀತದ ಪೋಷಕರಲ್ಲಿ ಕನ್ನಡಿಗರದ್ದು ಮೇಲುಗೈ. ಕನ್ನಡಿಗರ ಕೀರ್ತಿಯನ್ನು ಮೆರೆಯುತ್ತಿರುವ ಈ ಕಲಾಪೋಷಕರೆಲ್ಲಾ ಒಟ್ಟಾಗಿ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿರುವ ಭವ್ಯ ವಾದ ನೃತ್ಯ ರೂಪಕ "ಪ್ರದಕ್ಷಿಣೆ". ರೋಮಾಂಚನಕಾರಿಯಾದ ಈ ನೃತ್ಯವನ್ನು ಸವಿಯಲು ಸರ್ವರಿಗೂ ಆಮಂತ್ರಿಸುತ್ತೇವೆ.

ರಂಗು ರಂಗಿನ ದೀಪೋತ್ಸವ - ಇದೇ ಶನಿವಾರ ನವೆಂಬರ್ ೧೬ರಂದು ಮದ್ಯಾಹ್ನ ೧೩೦ರಿಂದ. ಸರ್ವರಿಗೂ ಉಚಿತ ಪ್ರವೇಶ.

ದೀಪೋತ್ಸವದ ಮತ್ತೊಂದು ಆಕರ್ಷಣೆ ರಾಷ್ಟ್ರ ಪಶಸ್ತಿ ವಿಜೇತ ಪ್ರತಿಬಿಂಬ ನಾಟಕ. ಈಗಾಗಲೇ ನಾಟಕವು ಸುಮಾರು 75 ಪ್ರದರ್ಶನಗಳನ್ನು ಕಂಡಿದೆ. ಖ್ಯಾತ ರಂಗ ಭೂಮಿ ಕಲಾವಿದ ನಿತೀಶ್ ಶ್ರೀಧರ್ ನಟಿಸಿ ನಿರ್ದೇಶಿಸುತ್ತಿರುವ ನಾಟಕದಲ್ಲಿ ಸ್ಥಳೀಯ ಕಲಾವಿದರು ಇದ್ದಾರೆ. ಪ್ರತಿಬಿಂಬ ನಾಟಕವನ್ನು ನೋಡಲು ತಪ್ಪದೆ ಬನ್ನಿ.

ಕರ್ನಾಟಕದ ಉದಯೋನ್ಮುಕ ಕಲಾವಿದ ,KIMA ವಿಜೇತ , ಅನೀಶ್ ಕೇಶವ ರಾವ್ ನಿಮ್ಮೆಲ್ಲರನ್ನೂ ರಂಜಿಸಲಿದ್ದಾರೆ. ಹಾಡುಗಾರಿಕೆಯೊಂದಿಗೆ ನೃತ್ಯ , ಮೃದಂಗದಲ್ಲೂ ಪರಿಣಿತರಾದ ಅನೀಶ್ ಸ್ಥಳೀಯ ಕಲಾವಿದರ ACapelllla ತಂಡವನ್ನು ತಯಾರು ಮಾಡಿ ದೀಪೋತ್ಸವದ ವೇದಿಕೆಯ ಮೇಲೆ ಪ್ರದರ್ಶಿಸುತ್ತಾರೆ.

ದೀಪೋತ್ಸವದ ವಿಶೇಷ ಅತಿಥಿ ಶ್ರೀ ಶಂಕರ ಕ್ಯಾನ್ಸರ್ ಸಂಸ್ಥೆಯ ಡಾ।। ಶ್ರೀನಾಥ್ ರವರು. ಕ್ಯಾನ್ಸರ್ನಿಂದ ಬಳಲುತ್ತಿದ್ದ ೪೩೦೦೦ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ಒದಗಿಸಿರುವ ಡಾ।। ಶ್ರೀನಾಥ್ ರವರು ಅವರ ಅಪರಿಮಿತ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ.


ದೀಪೋತ್ಸವದಲ್ಲಿ ನರ್ತನ , ಕೀರ್ತನ ಹಾಗು ವಾದ್ಯಘೋಷ್ಠಿಗಳಿಂದ ಮೂಡಿ ಬರುವ ಕಾರ್ಯಕ್ರಮ "ಪ್ರದಕ್ಷಿಣೆ"

ಪ್ರಥಮ ಬಾರಿಗೆ ಪ್ರಸಿದ್ಧ ಸ್ಥಳೀಯ ಶಾಸ್ತ್ರೀಯ ಕಲಾವಿದರನ್ನು ಒಗ್ಗೂಡಿಸಿ ವೇದಿಕೆಯ ಮೇಲೆ ಪ್ರಸ್ತುತಪಡಿಸುತ್ತಿರುವ ಕಾರ್ಯಕ್ರಮ ಪ್ರದಕ್ಷಿಣೆ !!



ದೀಪೋತ್ಸವದ ಮತ್ತೊಂದು ಆಕರ್ಷಣೆ ರಾಷ್ಟ್ರ ಪಶಸ್ತಿ ವಿಜೇತ ಪ್ರತಿಬಿಂಬ ನಾಟಕ. ಈಗಾಗಲೇ ನಾಟಕವು ಸುಮಾರು 75 ಪ್ರದರ್ಶನಗಳನ್ನು ಕಂಡಿದೆ. ಖ್ಯಾತ ರಂಗ ಭೂಮಿ ಕಲಾವಿದ ನಿತೀಶ್ ಶ್ರೀಧರ್ ನಟಿಸಿ ನಿರ್ದೇಶಿಸುತ್ತಿರುವ ನಾಟಕದಲ್ಲಿ ಸ್ಥಳೀಯ ಕಲಾವಿದರು ಇದ್ದಾರೆ. ಪ್ರತಿಬಿಂಬ ನಾಟಕವನ್ನು ನೋಡಲು ತಪ್ಪದೆ ಬನ್ನಿ . ನವೆಂಬರ್ 16 , Carrington Hall , Redwood city


Chitra Sanje - Drawing competition and Photography Show on Nov 10th.

Click here to register http://bit.ly/KKNCArtComp


College Preparation & Funding Seminar on Nov 3rd

Register here:


ಕನ್ನಡೋತ್ಸವ - ಸೆಪ್ಟೆಂಬರ್ ೨೧ ೨೦೧೯, ಹೇವರ್ಡ್ ನ ಶಬೊ ಸಭಾಂಗಣದಲ್ಲಿ





ಕನ್ನಡ ಕೂಟದ ಬೇಸಿಗೆ ಶಿಬಿರ on Aug 23rd, 24th and 25th

KKNC Camping 2019 - Registrations are closed !!
===================================
KKNC will be conducting the annual camping on August 23rd 24th 25th 2019 @ Little basin Campgrounds

KKNC TENx! on Aug 11th

Living in the bay area, technology is our bread and butter. KKNC brings TENx - Technology, Education, Networking - a full day event covering various Tech Talks...
Register now - http://bit.ly/KKNCTENx

Sports Day on June 22nd @ De Anza Park, Sunnyvale - 1150 Lime Dr, Sunnyvale, CA 94087

KKNC Sports day pre-event is starting with Tennis on June 1st, followed by Table Tennis on June 2nd. Tie up your gear and practice! Venue and Time will be announced soon. Show your sports talent, register here - http://bit.ly/kkncsports

src="http://kknc.org/sites/default/files/YakshaganaTop.jpeg">

ಕನ್ನಡ ಕೂಟದ ಯುಗಾದಿ ಜಾತ್ರೆ 2019 on Apil 27th @ Vasona Park, Los Gatos

KKNC Yugadi Jaatre 2019

Push
App

Swara Sanjeevini ~ March 23rd, 2019 @ Carrington Hall, Redwood City, CA

KKNC presents "Swara Sanjeevini" a musical extravaganza by Raaga - Bayarea Kannada Band a fundraiser for SSCF - Sri Shankara Cancer Foundation.

Click here to buy your tickets now

Donation Drive for Butte Wild fire Victims.

KKNC Youth committee doing a Donation Drive for Butte Wild fire Victims. It's our turn as adults to support the cause. March 9th is the last day

Please click here donate

ಕನ್ನಡ ಕೂಟ- ಯುವ ಸಮಿತಿ ವತಿಯಿಂದ Butte County, CA ಕಾಡ್ಗಿಚ್ಚಿನಲ್ಲಿ ನೊಂದ ಕುಟುಂಬಗಳಿಗೆ ಸಹಾಯಾರ್ಥವಾಗಿ ಈ ಕೆಳಕಂಡ ದೇಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಹಕನ್ನಡಿಗರೆಲ್ಲಾ ದಯವಿಟ್ಟು ಉದಾರ ಮನಸ್ಸಿನಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ!!


KKNC 2019 "Yugadi Jaatre" on April 27th, 2019
@
Vasona Park, Las Gatos, CA

The push notification says it all. For the latest updates please download 'Namma KKNC' app if you don't have it already.

Push
App

೨೦೧೯ ಕನ್ನಡ ಕೂಟದ ಕಾರ್ಯಕಾರಿ ಸಮಿತಿ

ಕನ್ನಡ ಕೂಟವು ವರ್ಷದಿಂದ ವರ್ಷಕ್ಕೆ ಸದೃಢವಾಗಿ ಬೆಳೆಯುತ್ತಾ ಬಂದಿದೆ. ೪೫ ವಸಂತಗಳನ್ನು ಕಂಡ ಈ ಭವ್ಯ ಸಂಸ್ಥೆಯನ್ನು ಮುನ್ನಡಿಸುವ ಜವಾಬ್ದಾರಿ ಲಭ್ಯವಾದದ್ದು ತಮ್ಮ ಸೌಭಾಗ್ಯವೆಂದೇ ನಂಬಿದ್ದಾರೆ ೨೦೧೯ರ ಚುನಾಯಿತ ಅಧ್ಯಕ್ಷರಾದ ಶ್ರೀಯುತ ಅರವಿಂದ್ ಬಾಯರಿ ಯವರು .

ಈ ಮುಂಬರುವ ವರ್ಷಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹೊರಮೂಡಿಸಲು ಹಾಗೂ ಕೂಟದ ಸಮಗ್ರ ಕಾರ್ಯಗಳನ್ನು ಹೃತ್ಪೂರ್ವಕವಾಗಿ ನೆರವೇರಿಸಲು ಕೂಟದ ಕೆಲವು ಸಕ್ರಿಯ ಸದಸ್ಯರು ಇವರ ಬೆನ್ನೆಲುಬಾಗಿ ನಿಂತಿದ್ದಾರೆ. ಇವರ ಒಂದು ಕಿರು ಪರಿಚಯ ಇಲ್ಲಿದೆ. ಕೂಟದ ಜನತೆಯಲ್ಲಿ ಉತ್ತೇಜನ ಮೂಡಿಸಿ ಅವರನ್ನು ಕೂಟದ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸುವುದೇ ಈ ತಂಡದ ಮುಖ್ಯ ಗುರಿ.

2018 ರ ಕಾರ್ಯಕ್ರಮ ಗಳನ್ನು ವಿಜೃಂಭಣೆಯಿಂದ ನಡೆಸಿ ಕೊಟ್ಟು ಕನ್ನಡ ಕೂಟದ ಬುನಾದಿಯನ್ನು ಸದೃಢ ಗೊಳಿಸಿದ ರಾಜೇಂದ್ರ ಹೆಗ್ಡೆ ಹಾಗೂ ತಂಡದವರಿಗೆ ಹೃತ್ಪೂರ್ವಕ ಅಭಿನಂದನೆ ಗಳನ್ನು ಸಲ್ಲಿಸುತ್ತಾ ಮುಂಬರುವ ವರುಷದಲ್ಲೂ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಹೀಗೆ ತುಂಬಿರಲೆಂದು ೨೦೧೯ರ ಸಮಿತಿಯು ಕೋರುತ್ತದೆ.

ಬನ್ನಿ, ನಮ್ಮ ನೆಚ್ಚಿನ ಕನ್ನಡ ಕೂಟಕ್ಕೆ ತಮ್ಮ ನಿಸ್ವಾರ್ಥ ಸೇವೆಯನ್ನು ಅರ್ಪಿಸಲು ಮುಂದಾಗಿರುವ ೨೦೧೯ ರ ಈ ತಂಡವನ್ನು ಹಾರೈಸೋಣ. ನಿಮ್ಮ ಹೃತ್ಪೂರ್ವಕ ಹಾರೈಕೆಯೇ ಇವರಿಗೆ ಸ್ಪೂರ್ತಿ !

Kannada Koota formed in 1973 is a vibrant organization growing year on year and conducting various community uplifting programs through the years. President Elect for 2019 Shree Aravind Bairy feels it is a great honor and privilege to lead and serve the volunteer force behind this organization in the year 2019.

Joining hands with him to make 2019 a special year for KKNC are few committed volunteers who have led various initiatives for KKNC. We would like to introduce the KKNC Executive Team for 2019 with a brief introductory video.

2019 Team wishes hearty Congratulations to the 2018 team led by Rajendra Hegde Bhandi for inspiring the community by conducting various new initiatives.
Come, join us in wishing the new 2019 Executive team and inspire them to bring on their best !

ಸಂಗೀತ ಸಂಜೆ (Sangeetha Sanje) ~ ವಿದುಷಿ ನಂದಿನಿ ರಾವ್ ಗುಜಾರ್ ಜೊತೆ On Jan 27th, Sunday 2019 ~ 7:00 pm to 8:30 pm

Many of you asked and we listened , Vidushi Nandini Rao , YES! you can listen to her again at Sanatana Dharma Kendra, this weekend

27th Sunday from 7:00 PM to 8:30 PM , LIMITED SEATS ONLY , needless to say evening full of melodious music, see you all there !!!!

ಕನ್ನಡ ಕೂಟದ 2019 ರ ಸಂಕ್ರಾಂತಿ "ಸುಗ್ಗಿ ಸೊಬಗು!" ಜನವರಿ 19ರಂದು ಹೇವರ್ಡ್ ನ ಶಬೊ ಸಭಾಂಗಣದಲ್ಲಿ

KKNC Sankranti "Suggi Sobagu" on Jan 19th, 2019 @ Chabot College, Hayward, CA

ಸುಗ್ಗಿ ಸೊಬಗಿನ ಕಾರ್ಯಕ್ರಮಗಳ ಪಕ್ಷಿನೋಟ

‘ಮಧ್ಯಾಹ್ನ ೩ ಘಂಟೆ ಇಂದ ಸತತವಾಗಿ ನಡೆಯಲಿರುವ ಹಲವಾರು ಕಾರ್ಯಕ್ರಮಗಳನ್ನು ಆನಂದಿಸಲು ನೀವು ತಪ್ಪದೇ ಬನ್ನಿ! ಅನೇಕ ಸ್ಥಳೀಯ ಹಾಗು ಅತಿಥಿ ಕಲಾವಿದರ ವರ್ಣಮಯ ಪ್ರಸ್ತುತಿಗಳನ್ನು ನಿಮ್ಮ ಮುಂದಿಡಲು ಕಾತರದಿಂದ ಕಾದಿದ್ದೇವೆ !!

‘ಸುಗ್ಗಿ ಸೊಬಗು’ ಕಾರ್ಯಕ್ರಮದಲ್ಲಿ ಹಲವಾರು ರೀತಿಯ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವಿಶೇಷ ಅತಿಥಿಯಾಗಿ ನಮ್ಮ ನಿಮ್ಮ ಮೆಚ್ಚಿನ ಹ್ಯಾಟ್ಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಶ್ರೀ ಶಿವರಾಜ್ ಕುಮಾರ್ ರವರು, ಅವರ ಪತ್ನಿ ಶ್ರೀಮತಿ ಗೀತಾ ಶಿವರಾಜ್ಕುಮಾರ್ ಹಾಗು ಪುತ್ರಿ ಕುಮಾರಿ ನಿವೇದಿತಾ ಶಿವರಾಜ್ಕುಮಾರ್, ನಟ , ನಿರ್ದೇಶಕ ಶ್ರೀ ರಘುರಾಮ್ ಮತ್ತು 'ಟಗರು' ಖ್ಯಾತಿಯ ನಿರ್ಮಾಪಕ ಶ್ರೀ ಶ್ರೀಕಾಂತ್ ನಮ್ಮೆಲ್ಲರೊಂದಿಗೆ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲು ಬರುತ್ತಿದ್ದಾರೆ.

ಹಾಗೆ, ಸುಮಧುರ ಸಂಗೀತದ ಹೊನಲನ್ನು ಹರಿಸಲು ಶ್ರೀಮತಿ ನಂದಿನಿ ರಾವ್ ಗುಜಾರ್, ವರ್ಣಮಯ ಜಾನಪದ ನೃತ್ಯವನ್ನು ಪ್ರದ್ರರ್ಶಿಸಲು ಸ್ನೇಹ ಕಪ್ಪಣ್ಣ ಬರುತ್ತಿದ್ದಾರೆ!!!

ಸುಮಧುರ ಸಂಜೆ ಹಾಗು ಕರ್ನಾಟಕದ ಜಾನಪದ ನೃತ್ಯ ಪ್ರದರ್ಶನ ಚಾಬೊ ಕಾಲೇಜಿನಲ್ಲಿ , ಮರೆಯದೆ ಬನ್ನಿ , ನಮ್ಮ ಕನ್ನಡಿಗರ ಹಬ್ಬ , ಸುಗ್ಗಿ ಸೊಬಗು !

ಕರುನಾಡ ಚಕ್ರವರ್ತಿ !!!! ಶಿವರಾಜ್‌ಕುಮಾರ್‌ !!!! ನಿಮ್ಮ ಜೊತೆ

!ಸುಗ್ಗಿ ಸೊಬಗಿನ ಕಾರ್ಯಕ್ರಮಗಳ ವಿವರ !

ನಮ್ಮ ಆದರಣೀಯ ಅತಿಥಿ ಕಲಾವಿದರ ಜೊತೆಗೆ ನಮ್ಮ ಸ್ಥಳೀಯ ಕಲಾವಿದರು ಕೂಡ ಅನೇಕ ಕಾರ್ಯಕ್ರಮಗಳನ್ನು ಸುಗ್ಗಿ ಸೊಬಗಿನಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ. ಇವರನ್ನು ಉತ್ಸಾಹದಿಂದ ಹುರಿದುಂಬಿಸಿ ಈ ಕಾರ್ಯಕ್ರಮಗಳನ್ನು ಆನಂದಿಸಲು ಇಂದೇ ಸದಸ್ಯತ್ವವನ್ನು ನೋಂದಾಯಿಸಿಕೊಂಡು ತಪ್ಪದೇ ಬನ್ನಿ!

Kids activity zone

! Free Entry for Kids ! Age limit 3 to 8 years

Registration opens @ 6:00 pm.

!!! Limited capacity and slots will be allotted on first come first served basis !!!

ಸ್ನೇಹಿತರೇ,
“ಸುಗ್ಗಿ-ಸೊಬಗು” -KKNC 2019 ರ ಸಂಕ್ರಾಂತಿ ಕಾರ್ಯಕ್ರಮಕ್ಕೆ ಹೆಸರಾಂತ ಕರ್ನಾಟಕ ಸಂಗೀತ ವಿದುಷಿ- ನಂದಿನಿ ರಾವ್ ಗುಜಾರ್ ಬರ್ತಾ ಇದ್ದಾರೆ. ಅವರು ನಡೆಸಿಕೊಡುವ “ನಾದ-ನಿನಾದ” ಕಾರ್ಯಕ್ರಮಕ್ಕೆ ಎಲ್ರೂ ತಪ್ಪದೇ ಬನ್ನಿ!!

“ಸುಗ್ಗಿ-ಸೊಬಗು” - KKNC 2019 ರ ಸಂಕ್ರಾಂತಿ ಕಾರ್ಯಕ್ರಮ ನಮ್ಮ ಕನ್ನಡ ಕೂಟದ ಮೆರಗು!!

With her significant work as a Carnatic Classical Vocalist and performances with more than 800 concerts all over India and Abroad, Nandini Rao Gujar is pursuing her research in different styles of devotional music not just from south but all over India.

Television, live performances, Masters in Music, anchoring, accompanying for dance performances, composing, song writing, teaching - Vidushi Nandini has discovered different aspects of related arts at a relatively young age.

Her work was recognised by Government of Karnataka by conferring the prestigious Kempegowda Award.


ಸ್ನೇಹಿತರೇ,

“ಸುಗ್ಗಿ-ಸೊಬಗು” -KKNC 2019 ರ ಸಂಕ್ರಾಂತಿ ಕಾರ್ಯಕ್ರಮಕ್ಕೆ ನಮ್ಮ ನಾಡಿನ ಹೆಸರಾಂತ ಭ್ರಮರಿ ನೃತ್ಯ ಕಲಾವಿದರಾದ ಸ್ನೇಹಾ ಕಪ್ಪಣ್ಣ ಅವರು ಬರ್ತಾ ಇದ್ದಾರೆ.

“ಸುಗ್ಗಿ-ಸೊಬಗು” - KKNC 2019 ರ ಸಂಕ್ರಾಂತಿ ಕಾರ್ಯಕ್ರಮ ನಮ್ಮ ಕನ್ನಡ ಕೂಟದ ಮೆರಗು!! ಎಲ್ರೂ ತಪ್ಪದೇ ಬನ್ನಿ!!

Sneha Kappanna @ KKNC Suggi Sobagu on Jan 19th Chabot College

Bramari Dance group is an innovative dance repertoire that has won international acclaim for representing a fusion of classical, folk and contemporary forms of dance.

Hot deals !! Only in January !! For KKNC members

  • Looking for Indian channels to watch Kannada serials and movies?
  • Don’t want to miss out all cricketing action like IPL, world cup-2019?
  • Also, want to catch Bollywood movies and serials?
  • Here is the deal for KKNC members!! All of these above at an effective rate of just $30/year Hotstar subscription if you are a KKNC member.

    Here is how it works:

  • Become KKNC member. Existing and Lifetime members also get this benefit.
  • Login into us.hotstar.com and pick yearly subscription of $99.99*
  • Apply coupon code “kkncmember” and get the subscription for $60
  • Receive $30 Amazon gift card from Hotstar in a couple of weeks.
  • So what are you waiting for? Hurry up. Get KKNC membership, & go and grab Hotstar deal which costs as low as a cup of Starbucks coffee

    *Use same email id for both KKNC and Hotstar membership

    Audition for MCs...

    ಯಾವುದೇ ಕಾರ್ಯಕ್ರಮ ನಡೆದರೂ, ಆ ಕಾರ್ಯಕ್ರಮವನ್ನ ಸಮರ್ಪಕವಾಗಿ ನಡೆಸಿಕೊಡಲು ಒಬ್ಬ ನಿರೂಪಕ/ನಿರೂಪಕಿ ಬೇಕೇ ಬೇಕು! ಕಾರ್ಯಕ್ರಮ ರೂಪಿಸಿದ ಚೌಕಟ್ಟನ್ನು ಮೀರದ ಹಾಗೆ, ಎಲ್ಲ ಸಭಾಸದಸ್ಯರಿಗೆ ಕಾರ್ಯಕ್ರಮವನ್ನು, ಅದರ ಹಿನ್ನಲೆ ಮುನ್ನಲೆಗಳನ್ನು ಸವಿವರವಾಗಿ ತಿಳಿಸಿಕೊಡುವ ಕೆಲಸ ನಿರೂಪಕರದ್ದು. ಕನ್ನಡ ಕೂಟದ ಕಾರ್ಯಕ್ರಮಗಳಲ್ಲಿ ಪ್ರತಿ ವರ್ಷ ವಿವಿಧ ನಿರೂಪಕರು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ಬಂದಿದ್ದಾರೆ. ಈ ಬಾರಿ ಸಹ ಹೊಸ ನಿರೂಪಕರನ್ನು ಪರಿಚಯಿಸುವ ಅಭಿಲಾಷೆ ನಮಗೆ! ಜನವರಿ ೧೯ರಂದು ನಡೆಯುವ 'ಸುಗ್ಗಿ ಸೊಬಗು' ಕಾರ್ಯಕ್ರಮದ ನಿರೂಪಕರಾಗಲು, ಅಥವಾ ಮುಂದಿನ ಕನ್ನಡ ಕೂಟದ ಕಾರ್ಯಕ್ರಮಗಳ ನಿರೂಪಕರಾಗಲು ಆಸಕ್ತಿ ಇದ್ದಲ್ಲಿ ನೀವು ಎಂದಾದರೂ ನಿರೂಪಣೆ/ಭಾಷಣ ಮಾಡಿರುವ ತುಣುಕುಗಳನ್ನು ನಮಗೆ ಜನವರಿ ೧೦ರ ಒಳಗೆ ಕಳುಹಿಸಿಕೊಡಿ. ಹೊಸದಾಗಿ ಚಿತ್ರಿಸಿ/ ಧ್ವನಿಮುದ್ರಣ ಮಾಡಿ ಸಹ ಕಳುಹಿಸಬಹುದು.

    Do you have an ability to talk extempore? Do you have interest in conducting a program? KKNC has created a stage for you! You can be a Master of Ceremony for any of the events conducted by KKNC! If you have any video/audio clippings of yours where you have given a talk/ been an MC, do send it to us by 10th of January. You can record a clipping and send it us too. Sooner the better!

    Register today

    ಎಲ್ಲರಿಗೂ 2019 ಹೊಸ ವರುಷದ ಶುಭಾಶಯಗಳು!!!

    ನಮ್ಮೆಲ್ಲರ ಮನೆಯಲ್ಲೂ ೨೦೧೯ ಸುಖ ಶಾಂತಿಯನ್ನು ತರಲಿ

    ಹೊಸ ವರ್ಷವು ಹೊಸ ಹರ್ಷ, ಹೊಸ ನಿರೀಕ್ಷೆ ತರುತ್ತದೆ. ಆ ನಿರೀಕ್ಷೆ ನಮಗೆ ಸ್ಪೂರ್ತಿ ತುಂಬಲಿ.

    ಕನ್ನಡ ಕೂಟದ ೨೦೧೯ ರ ಸಂಕ್ರಾಂತಿ "ಸುಗ್ಗಿ ಸೊಬಗು!" ಜನವರಿ ೧೯ 19ರಂದು ಹೇವರ್ಡ್ ನ ಶಬೊ ಸಭಾಂಗಣದಲ್ಲಿ

    ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ೨೦೧೯ ರ ಕಾರ್ಯಕಾರಿ ಸಮಿತಿ ನಿಮ್ಮ ಮುಂದಿಡುತ್ತಿರುವ ಪ್ರಪ್ರಥಮ ಕಾರ್ಯಕ್ರಮ "ಸುಗ್ಗಿ ಸೊಬಗು!" ಜನವರಿ 19ರಂದು ಶಬೊ ಸಭಾಂಗಣದಲ್ಲಿ. ಸಂಕ್ರಮಣದ ಕಾರ್ಯಕ್ರಮ, ಭಾರತದಲ್ಲಿ ಸುಗ್ಗಿಯ ಹಿಗ್ಗನ್ನು ನೋಡಿ ಅಲ್ಲಿ ಜನ ಸಂಭ್ರಮಿಸಿದರೆ, ಇಲ್ಲಿ ಸುಗ್ಗಿಯ ಪ್ರಯುಕ್ತ ನಾವೂ ಒಂದೆರಡು ಕುಣಿತ ಕುಣಿದ್ರೆ? ಹೌದು! ಹಾಡು, ಕುಣಿತ, ಹಸೆ, ಎಲ್ಲವನ್ನು ಪ್ರಸ್ತುತಪಡಿಸುತ್ತಾ ಸಂಕ್ರಾಂತಿಯನ್ನು ಎಲ್ಲರೊಡಗೂಡಿ ಆಚರಿಸೋಣ! ನಿಮಗೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವ ಆಸಕ್ತಿ ಇದ್ದಲ್ಲಿ, ಇಂದೇ ನಿಮ್ಮ ಹೆಸರು/ತಂಡದ ಹೆಸರನ್ನು ನೊಂದಾಯಿಸಿಕೊಳ್ಳಿ! ವರ್ಷಕ್ಕೆ ನಾಲ್ಕೇ ದೊಡ್ಡ ಕಾರ್ಯಕ್ರಮ. ಹಾಗಾಗಿ ಒಂದೊಂದು ಅವಕಾಶವೂ ಸುವರ್ಣಾವಕಾಶವೇ! ಉತ್ಸಾಹವನ್ನು ಮುಂದೂಡದೆ ಈ ಕೂಡಲೇ ಒಂದು ತಂಡ ಕಟ್ಟಿ ಅತ್ಯುತ್ತಮ ಕಾರ್ಯಕ್ರಮವನ್ನು ನೀಡುವಂತವರಾಗಿ :) ಹಾಡು, ನೃತ್ಯ, ನಾಟಕ, ಮೂಕಾಭಿನಯ, ಯಾವ ಕಲೆ ನಿಮ್ಮಲ್ಲಿದೆಯೋ, ಅದನ್ನು ಎಲ್ಲರ ಮುಂದೆ ಪ್ರಸ್ತುತ ಪಡಿಸಿ, ಮೆಚ್ಚುಗೆ ಗಳಿಸಿ. ಡಿಸೆಂಬರ್ 24ರ ಒಳಗೆ ನಿಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡರೆ ಉತ್ತಮ.

    ಈ ಕೆಳಗಿನ ಗೂಗಲ್ ಫಾರಂ ಕೊಂಡಿಯಲ್ಲಿ ನಿಮ್ಮ ನೋಂದಣಿ ಪೂರ್ತಿಯಾಗಲಿ.
    https://goo.gl/forms/q1ot6CR2Z4pLBRWD2

    KKNC 2019 Executive team is gearing up for performing the Sankranthi program "Suggi Sobagu !" on Jan 19th @ Chabot College, Hayward.

    We are inviting local artists to submit registrations for the Stage programs for the event. Deadline for the Registration is Dec 24th 2018. Register your program at - https://goo.gl/forms/q1ot6CR2Z4pLBRWD2

    ಸಾಲಂಕೃತವಾಗಿ ಬೆಳಗುವ ದೀಪಗಳ, ಬಣ್ಣ ಬಣ್ಣದ ಪ್ರಭೆಯನ್ನು ಚಿಮ್ಮುವ ಮತಾಪುಗಳ ಸಂಭ್ರಮದಿಂದ ಕೂಡಿದ, ಆಬಾಲವೃದ್ಧರಿಗೂ ಮುದವನ್ನು ನೀಡುವ ದೀಪಾವಳಿ ಅಥವಾ ದೀವಳಿಗೆ ಹಬ್ಬ, ಹಬ್ಬಗಳಲೆಲ್ಲಾ ಅತ್ಯಂತ ಜನಪ್ರಿಯವಾದದ್ದು. 2018 ರ ಕಾರ್ಯಕಾರಿ ಸಮಿತಿ ಇದೇ ನವೆಂಬರ್ 11 ರಂದು ದೀಪೋತ್ಸವವನ್ನು Chabot College, Hayward ನಲ್ಲಿ ಆಯೋಜಿಸಲು ನಿರ್ಣಯಿಸಿದೆ. ಈ ಪ್ರಯುಕ್ತ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡಲು ಇಚ್ಛಿಸುವ ಸೃಜನಶೀಲ ನಿರ್ದೇಶಕರಿಗೆ https://goo.gl/forms/s02IQcN3YfelIC1L2 ಅರ್ಜಿ ಭರ್ತಿ ಮಾಡುವ ಮೂಲಕ ಕಾರ್ಯಕ್ರಮಗಳನ್ನು ನೋಂದಾಯಿಸಿಕೊಳ್ಳಲು ಇದು ಮನರಂಜನಾ ಸಮಿತಿಯ ಆತ್ಮೀಯ ಆಹ್ವಾನ.
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ; 10/18/2018

    Kannadotsava 2018

    ಇಲ್ಲಿದೆ ಕನ್ನಡೋತ್ಸವದ ಸಂಪೂರ್ಣ ಮಾಹಿತಿ;
    ಕಾರ್ಯಕ್ರಮ ನಡೆಯುವ ಸ್ಥಳ: ಸ್ಯಾನ್ ಮ್ಯಾಟಿಯೊ ಪರ್ಫಾರ್ಮಿಂಗ್ ಸೆಂಟರ್ ( https://goo.gl/maps/VUTV6FgPRiG2)
    ಕಾರ್ಯಕ್ರಮದ ಟಿಕೆಟ್ ದರ : ಸದಸ್ಯರಿಗೆ $10, ಸದಸ್ಯರಲ್ಲದವರಿಗೆ $15,
    ಮಕ್ಕಳಿಗೆ ಉಚಿತ ಪ್ರವೇಶ! https://www.sulekha.com/kannada
    ಪಾರ್ಕಿಂಗ್ ಉಚಿತ!
    ಮಕ್ಕಳಿಗಾಗಿ ಚಿಣ್ಣರ ಲೋಕ : ಸಂಪರ್ಕಿಸಿ https://goo.gl/forms/tqpZWnuaFwZ5ehW02 (ಮೊದಲು ನೋಂದಾಯಿಸಿದ 100 ಮಕ್ಕಳಿಗೆ ಮಾತ್ರ)

    ಕಾರ್ಯಕ್ರಮದ ಆರಂಭಿಕ ಸಮಯ : 3.00pm
    ಮನೋರಂಜನಾ ಕಾರ್ಯಕ್ರಮಗಳು : ಪ್ರಾರ್ಥನೆ,
    ನವಶಕ್ತಿ , ಶಿವಂ, ಮಹಾಭಾರತ, ಒನಕೆ ಓಬವ್ವ, ಹುಲಿವೇಷ,
    ಸರಣಿ ಕಾರ್ಯಕ್ರಮ- ನೋಡು ನಮ್ಮ ನಾಡು,
    ಅರುಣರಾಗ.
    ವಿಶೇಷ ಅತಿಥಿ: ಅನಂತ್ ನಾಗ್ ಹಾಗೂ ಗಾಯತ್ರಿ ನಾಗ್

    As we all eagerly waited for our “Kannadotsova” event. Waiting is over now….. it’s only 5 days away !!
    Here are the complete information and program list lined up for the day:
    Date & Time : Saturday Sept 8th, 2018 | 3.00 pm
    Venue : San Mateo Performing Arts Center( https://goo.gl/maps/VUTV6FgPRiG2)

    Cost : $10 for members, $15 for non-members
    Free for Kids. (for event tickets https://www.sulekha.com/kannanda),
    Free Parking,
    Chinnara Loka - contact : https://goo.gl/forms/tqpZWnuaFwZ5ehW02 (For first 100 kids registered)
    Programs : Many programs from local artists
    Prayer, Navashakti, Shivam, Mahabharatha, Onake Obavwa
    Hulivesha, “Nodu Namma Nadu” series Program
    Arunaraaga.
    Special Guest : Anant Nag and Gayathri Nag
    Come and join us !

    ಕನ್ನಡ ಬಾಂಧವರಿಗೆ ನಮಸ್ಕಾರ,
    2018 ರ KKNC ಸಮಿತಿಯು ಈ ವರ್ಷದ ಕನ್ನಡೋತ್ಸವ ಕಾರ್ಯಕ್ರಮವನ್ನು ಶನಿವಾರ, ಸೆಪ್ಟೆಂಬರ್ 8 ರಂದು San Mateo Performing Arts Center ನಲ್ಲಿ ಆಯೋಜಿಸಿದೆ. ಎಲ್ಲರೂ ಬನ್ನಿ, ಬಂಧು ಮಿತ್ರರನ್ನೂ ಕರೆತನ್ನಿ.
    Buy your tickets today at sulekha.com/kannada. Feel free to invite your friends to this event.
    ವಂದನೆಗಳು,
    ಕಾರ್ಯಕಾರಿ ಸಮಿತಿ 2018

    ಅಪರಿಮಿತ ಅಭಿಮಾನಿಗಳನ್ನು ಸೆಳೆದ, ದಶಕಗಳಿಂದ ಅಭಿಮಾನಿಗಳ ಮನದಲ್ಲಿ ಸದಾ ಹಸಿರಾಗಿರುವ ನಮ್ಮೆಲ್ಲರ ಪ್ರೀತಿಯ ಶ್ರೀಯುತ ಅನಂತ ನಾಗ್ ಹಾಗು ಶ್ರೀಮತಿ ಗಾಯತ್ರಿಯವರನ್ನು ಕನ್ನಡಕೂಟಕಕ್ಕೆ ಆಹ್ವಾನಿಸಲು ಅತ್ಯಂತ ಹರ್ಷವಾಗುತ್ತಿದೆ.

    ಕೂಟದ ಸದಸ್ಯರಲ್ಲಿ ಸವಿನಯ ಪ್ರಾರ್ಥನೆ.
    =======================

    ಪ್ರಕೃತಿಯ ವಿಕೋಪಕ್ಕೆ ಎಡೆಯಾಗಿರುವ ಕೊಡಗಿನ ದುಃಸ್ಥಿತಿ ಹೇಳತೀರದು.

    ಹಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದ್ದು, ೧೨ ಜನರು ಮೃತಪಟ್ಟಿದ್ದಾರೆ. ಸುಮಾರು ೮೪೫ ಮನೆಗಳು ನೆಲಸಮಗೊoಡಿದ್ದು, ೧೨೩ ಕಿ.ಮೀಗೂ ಹೆಚ್ಚು ರಸ್ತೆ, ೫೮ ಸೇತುವೆಗಳು ಹಾನಿಯಾಗಿವೆ. ಹಲವು ರಸ್ತೆಗಳು ಸಂಪರ್ಕ ಕಡಿತಗೊಂಡಿವೆ. 3,800 ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ.

    ಈ ಸಮಯದಲ್ಲಿ ಸಂತ್ರಸ್ತರಿಗಾಗಿ ನೆರವಾಗಲು ನಮ್ಮ ಬೇ ಏರಿಯಾದ ಕನ್ನಡ ಕೂಟವು ಪರಿಹಾರ ನಿಧಿಯನ್ನು ಸಂಗ್ರಹಿಸುತ್ತಿದೆ. ಸಂಗ್ರಹಿಸಿದ ಹಣವನ್ನು ನಿರಾಶ್ರಿತರಿಗೆ ಸದುಪಯೋಗ ಮಾಡಲು ದಿನವಿಡೀ ಶ್ರಮಿಸುತ್ತಿರುವ ಕೊಡವ ಸಮಾಜಕ್ಕೆ ನೀಡಲಾಗುವುದು.

    https://www.gofundme.com/kodagu-relief-fund

    ಕನ್ನಡ ಬಂಧುಗಳಿಗೆ ನಮಸ್ಕಾರ!
    ಕೆ ಕೆ ಏನ್ ಸಿ ೨೦೧೮ರ ಕ್ರೀಡಾ ಸಮಿತಿಯು ಕೂಟದ ಸದಸ್ಯರಿಗೆ ನೂತನ ವಾರಾಂತ್ಯ ಚಟುವಟಿಗಳನ್ನು ಆಯೋಜಿಸುತ್ತಿದೆ.
    ಬೇ ಏರಿಯಾದ ಸುಂದರ ಬೆಟ್ಟಗಳ ನಡುವೆ, ಕನ್ನಡ ಸ್ನೇಹಿತರೊಡನೆ ಚಾರಣ ಹೊರಡುವುದು ನಿಜಕ್ಕೊ ಒಂದು ಉಲ್ಲಾಸದಾಯಕ ಅನುಭವ. "ದಿ ಹೈಕಿಂಗ್ ಕ್ಲಬ್" ಪ್ರತಿ ಎರಡು ವಾರಕ್ಕೊಮ್ಮೆ ರಮಣೀಯ ಸ್ಥಳಗಳಿಗೆ ಚಾರಣ ಹಮ್ಮಿಕೊಳ್ಳಲಿದೆ. ಮೊದಲ ಚಾರಣ ಇದೇ ಮಾರ್ಚ್ ೩ರಿಂದ ಶುರುವಾಗಲಿದ್ದು, ರಿಜಿಸ್ಟ್ರೇಷನ್, ಹೈಕಿಂಗ್ ಟ್ರೈಲ್ ಮತ್ತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ...

    KKNC 2018 sports committee presents weekend activities for the members. The Hiking club is organizing biweekly hikes on beautiful trails around Bay Area. First hike would be started on March 3, 2018. For registration, trail details and more information please stay tuned to this space..

    2018 Executive Team

    Ellarigu Namaskara,

    I’m very happy to introduce KKNC’s 2018 executive team. We need all your guidance, help and support. Let’s work together to make a unified and proud community. We are looking forward to a great year with our 2018 KKNC executive team and you all.

    If you have not signed up/ renewed your membership yet, please sign up using this link: Join KKNC

    2018 ಹೊಸ ವರ್ಷದ ಶುಭಾಶಯಗಳು !

    ಕನ್ನಡ ಕೂಟದ ಸಮಸ್ತ ಬಾಂಧವರಿಗೆ ಹೊಸ ವರ್ಷದ ಶುಭಾಶಯಗಳು.
    ಹೊಸ ವರ್ಷ ತಮಗೂ, ತಮ್ಮ ಕುಟುಂಬದವರಿಗೂ ಸಂತೋಷ ಹಾಗೂ ಸಮೃದ್ಧಿ ತರಲಿ!

    ಈ ವರ್ಷವನ್ನು ಹರ್ಷದಾಯಕವಾಗಿಸುವ ಪಯಣಕ್ಕೆ ತಾವೆಲ್ಲರೂ ಕನ್ನಡ ಕೂಟದ ಜೊತೆಯಾಗಿರೆಂದು ಕೋರುತ್ತೇವೆ. 2018 ರ ಕಾರ್ಯಕಾರಿ ಸಮಿತಿಯು ನಮ್ಮ ಮೊದಲ ಕಾರ್ಯಕ್ರಮ "ಸಂಕ್ರಮಣ"ಕ್ಕೆ ಅಣಿಯಾಗುತ್ತಿದೆ. ನಿಮ್ಮೆಲ್ಲರ ಸಲಹೆ, ಸಹಕಾರ ಮತ್ತು ಬೆಂಬಲವು ಎಂದಿನಂತೆ ನಮ್ಮೊಂದಿಗಿರಲೆಂದು ಕೋರುತ್ತೇವೆ.

    ಮತ್ತೊಮ್ಮೆ ಹೊಸ ವರ್ಷದ ಶುಭಾಶಯಗಳೊಂದಿಗೆ,
    ವಂದನೆಗಳು,
    ಕಾರ್ಯಕಾರಿ ಸಮಿತಿ - 2018

    ಇದೋ ಬಂತು ಕನ್ನಡ ಕೂಟದ ಅತ್ಯಾಕರ್ಷಕ ಬೇಸಿಗೆ ಶಿಬಿರ!! ನಿತ್ಯ ಬದುಕಿಗೆ ಹೊಸ ಚೈತನ್ಯ! ಯಾಂತ್ರಿಕ ಬದುಕಿನಿಂದ ಸ್ವಚ್ಛಂದ ಪ್ರಕೃತಿಯೆಡೆಗೆ ಪಯಣ! ಕಾಡಿನ ಮನಮೋಹಕ ದೃಶ್ಯ! ಏಕಾಂತ ಹಾಗೂ ಲೋಕಾಂತ! ಎಲ್ಲ ಒತ್ತಡಗಳಿಂದ ಸ್ವಲ್ಪ ಕಾಲ ಮುಕ್ತಿ.

    ಇದೇ ಆಗಸ್ಟ್ 3,4 ಹಾಗು 5ರಂದು “Little Basin State Park” ನಲ್ಲಿ ನಮ್ಮ ಕನ್ನಡಕೂಟ ಬೇಸಿಗೆ ಶಿಬಿರದ ಸುಸಂದರ್ಭವನ್ನು ಅಣಿಗೊಳಿಸಿದೆ. ಕ್ಯಾಬಿನ್ ಹಾಗು ಟೆಂಟ್ ಸೈಟ್ ಗಳು ಲಭ್ಯವಿರುತ್ತವೆ.

    ಕನ್ನಡ ಕೂಟದ ಸದಸ್ಯರಿಗೆ ವಿಶೇಷ ರಿಯಾಯತಿ ಇರುತ್ತದೆ. ಸದಸ್ಯತ್ವಕ್ಕಾಗಿ : http://kknc.org/join

    ವಿಳಾಸ: 21700 Little Basin Rd, Boulder Creek, CA 95006

    ಕ್ರಿಡಾ ದಿನಾ ಜೂನ್ 2ರಂದು ಮುರ್ಡಾಕ್ ಪಾರ್ಕ್, 1188 ವುಂಡರ್ಲಿಚ್ ಡ್ರೈವ್, ಸ್ಯಾನ್ ಜೋಸ್


    Men's VolleyBall Tournament and Women's Throwball tournament on May 19th, 2018

    Kannada Koota of Northern California (KKNC) presents Men's VolleyBall Tournament (outdoor, grass court, 6X6) and Women's Throwball tournament (outdoor, grass court, 4+2). This is a charity fund raiser event which is highly competitive and great fun as well.

    VENUE:
    *********
    Lakewood Park (834 Lakechime Dr, Sunnyvale, CA 94089)

    DATE:
    *******
    Saturday, May 19th, 2018
    Check-In : 08.30 AM , Game : 09.00 AM

    VOLLYBALL
    ***************

    Fee : Vollyball - $90 per team

    Please register here https://goo.gl/forms/aOIL1MjyGi6LLsco1 to RSVP

    Payment:
    http://events.sulekha.com/kknc-volleyball-and-throwball-tournament-2018_...

    *Team registration is confirmed only after payment is received.

    Categories:
    1. Beginner
    2. Intermediate
    3. Advanced

    THROWBALL
    ***************

    Fee : Throwball - $60 per team

    Please register here https://goo.gl/forms/HxHYFEFuMI8zi8U23 to RSVP

    Payment:
    http://events.sulekha.com/kknc-volleyball-and-throwball-tournament-2018_...

    *Team registration is confirmed only after payment is received.

    Categories:
    One Open Category - Teams after round robin go to various playoffs: Gold, Silver, Bronze

    Throwball rules:
    https://drive.google.com/file/d/196u29vl4Ub7d3wdQ0c4ahpTqKsVHxbh1/view?u...

    CONTACT US
    ***************
    email : [email protected] OR Text /Call @ Sharmila Vidyadhara: 408-802-9992 / Deepa Jorapur: 408-707-0158 / Shoba Venugopal: 510-378-4978 / Sandeep Belliappa: 408-469-0538 / Amruth Murthy : 408-431-1401

    ABOUT US
    ************
    Visit http://www.kknc.org/ to know about our non-profit organization.

    Best Regards,
    KKNC sports team



    ಯುಗಾದಿ ಮೇಳ 2018, ಏಪ್ರಿಲ್ 14ರಂದು ಬೇ ಲ್ಯಾಂಡ್ಸ್ ಪಾರ್ಕ್ ಸನ್ನಿವೇಲ್

    ಈ ವರ್ಷದ ಕೆ.ಕೆ.ಏನ್.ಸಿ ಬೇಸಿಗೆ ಶಿಬಿರ ಆಗಸ್ಟ್ 3, 4, 5ನೇ ತಾರೀಖು. ಬೇರೆ ಏನೂ ಕೆಲಸ ಇಟ್ಕೋಬೇಡಿ, ರಜೆಗೆ ಪ್ರವಾಸ ಹೋಗೋರೆಲ್ಲ ಅಷ್ಟೊತ್ತಿಗೆ ಬಂದುಬಿಡಿ..

    ಸುಖದುಃಖಗಳ ಸಮರಸವೇ ಜೀವನ . ಅಂತೆಯೇ ಬೇವು ಬೆಲ್ಲ ಸವಿಯುತ್ತ ಈ ಯುಗಾದಿ ಮೇಳದಲ್ಲಿ ಕನ್ನಡ ಬಾಂಧವರೆಲ್ಲ ಸೇರಿ ಯುಗಾದಿ ಆಚರಿಸೋಣ . ಕನ್ನಡಕೂಟದ ಸದಸ್ಯತ್ವ ತೆಗೆದುಕೊಂಡಲ್ಲಿ ಉಚಿತ ಪ್ರವೇಶ . ನಿಮ್ಮ ಕನ್ನಡಕೂಟದ ಸದಸ್ಯತ್ವವನ್ನು ನವೀಕರಿಸಿಕೊಳ್ಳಿ, ಸದಸ್ಯರಾಗಿರದೆ ಇದ್ದಲ್ಲಿ ಇಂದೇ ಸದಸ್ಯತ್ವ ತೆಗೆದುಕೊಳ್ಳಿ .

    ಕನ್ನಡ ಬಂಧುಗಳಿಗೆ ನಮಸ್ಕಾರ!
    ಕೆ ಕೆ ಏನ್ ಸಿ ೨೦೧೮ರ ಕ್ರೀಡಾ ಸಮಿತಿಯು ಕೂಟದ ಸದಸ್ಯರಿಗೆ ನೂತನ ವಾರಾಂತ್ಯ ಚಟುವಟಿಗಳನ್ನು ಆಯೋಜಿಸುತ್ತಿದೆ.
    ಬೇ ಏರಿಯಾದ ಸುಂದರ ಬೆಟ್ಟಗಳ ನಡುವೆ, ಕನ್ನಡ ಸ್ನೇಹಿತರೊಡನೆ ಚಾರಣ ಹೊರಡುವುದು ನಿಜಕ್ಕೊ ಒಂದು ಉಲ್ಲಾಸದಾಯಕ ಅನುಭವ. "ದಿ ಹೈಕಿಂಗ್ ಕ್ಲಬ್" ಪ್ರತಿ ಎರಡು ವಾರಕ್ಕೊಮ್ಮೆ ರಮಣೀಯ ಸ್ಥಳಗಳಿಗೆ ಚಾರಣ ಹಮ್ಮಿಕೊಳ್ಳಲಿದೆ. ಮೊದಲ ಚಾರಣ ಇದೇ ಮಾರ್ಚ್ ೩ರಿಂದ ಶುರುವಾಗಲಿದ್ದು, ರಿಜಿಸ್ಟ್ರೇಷನ್, ಹೈಕಿಂಗ್ ಟ್ರೈಲ್ ಮತ್ತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ...

    KKNC 2018 sports committee presents weekend activities for the members. The Hiking club is organizing biweekly hikes on beautiful trails around Bay Area. First hike would be started on March 3, 2018. For registration, trail details and more information please stay tuned to this space..

    Swara Sanjeevini on March 24th, 2018 at Carrington Hall, Redwood City, CA

    ಸಂಕ್ರಮಣ 2018 ಜನವರಿ 20 ರಂದು ಶಬೊ ಕಾಲೇಜು ಆವರಣದಲ್ಲಿ !

    ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಹನ್ನೆರಡು ಕವನ ಸಂಗ್ರಹಗಳನ್ನು, ಎರಡು ಕಾದಂಬರಿಗಳನ್ನು, ಒಂದು ಸಣ್ಣ ಕಥೆಗಳ ಸಂಕಲನವನ್ನು, ಒಂದು ವಿಮರ್ಶ ಲೇಖನಗಳ ಸಂಕಲನವನ್ನು, ಹದಿಮೂರು ಅನುವಾದಿತ ಗ್ರಂಥಗಳನ್ನು ಕನ್ನಡಕ್ಕೆ ನೀಡಿದ ಪ್ರತಿಭಾಶಾಲಿ. ಇಂತಹ ನವ್ಯ ಕಾವ್ಯ ಪ್ರಕಾರದ ಯುಗಪ್ರವರ್ತಕ ಕವಿ "ಮೊಗೇರಿ ಗೋಪಾಲಕೃಷ್ಣ ಅಡಿಗರ" ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ನಮ್ಮ ಕನ್ನಡ ಕೂಟದ ಮೊದಲ ಕಾರ್ಯಕ್ರಮವಾದ ಸಂಕ್ರಮಣಕ್ಕೆ ತಪ್ಪದೇ ಬನ್ನಿ. ಕನ್ನಡ ಕೂಟದ ಸದಸ್ಯರಿಗೆ ಉಚಿತ ಪ್ರವೇಶ. ಸದಸ್ಯರಾಗಿರದೇ ಇದ್ದವರು ಇಂದೇ ನಿಮ್ಮ ಸದಸ್ಯತ್ವವನ್ನು ನವೀಕರಿಸಿ (kknc.org/join).


    ಪ್ರಸಿದ್ಧ ಕನ್ನಡ ಹಾಸ್ಯನಟರಾದ ರಿಚರ್ಡ್ ಲೂಯಿಸ್ ಹಾಗೂ ಮೈಸೂರು ಆನಂದ್ ನಮ್ಮ ಕನ್ನಡಕೂಟದ ಸಂಕ್ರಮಣಕ್ಕೆ ಬರ್ತಾ ಇದ್ದಾರೆ. ಮರೆಯದೆ ಸಂಕ್ರಮಣಕ್ಕೆ ಬನ್ನಿ , ಸಂಭ್ರಮಿಸೋಣ. ಇಂದೇ ಕನ್ನಡ ಕೂಟದ ಸದಸ್ಯತ್ವವನ್ನು ನವೀಕರಿಸಿ, ಸದಸ್ಯರಾಗಿರದವರು ಇಂದೇ ಸದಸ್ಯರಾಗಿ.

    ಸಂಕ್ರಮಣ, ಅಂದರೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿಕಾಲ!
    ದಕ್ಷಿಣಾಯಣದಲ್ಲಿ ಬರುವ ಮಳೆಗಾಲದ ಮಳೆ, ಚಳಿಗಾಲದ ಚಳಿ - ಗಾಳಿಯ ಕೊರೆತದಿಂದ ಬರಡಾದ ಜೀವಕ್ಕೆ, ಕೊರಡಾದ ಗಿಡ ಬಳ್ಳಿಗಳಿಗೆ, ಸಂಕ್ರಮಣವು ನವಚೇತನವನ್ನು ಒದಗಿಸುತ್ತಾ, ನಿಸರ್ಗಕ್ಕೆ ಕಾಲಚಕ್ರವನ್ನು ಮುಂದುವರೆಸಲು ಸಹಕರಿಸುತ್ತದೆ. ಅದೇ ರೀತಿ 2018ರ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯು " ಸಂಕ್ರಮಣ” ಎಂಬ ಹೆಸರಿನಲ್ಲಿ ಈ ವರ್ಷದ ಮೊದಲ ಕಾರ್ಯಕ್ರಮವನ್ನು ಜನವರಿ 20ರಂದು ಶಬೊ ಕಾಲೇಜು ಆಡಿಟೋರಿಯಂನಲ್ಲಿ ಆಯೋಜಿಸುವ ಮೂಲಕ ವರ್ಷವನ್ನು ಪ್ರಾರಂಭಿಸುತ್ತಿದೆ.
    “ವರ್ಣಮಯ ಜಗತ್ತು” ಎನ್ನುವುದು 'ಸಂಕ್ರಮಣದ' ಪ್ರಧಾನ ವಸ್ತು. ಈ ಪ್ರಧಾನ ವಸ್ತುವನ್ನಾಧರಿಸಿ ಹಾಗೂ ನವ್ಯ ಕಾವ್ಯ ಪ್ರಕಾರದ ಯುಗಪ್ರವರ್ತಕ ಕವಿ “ಮೊಗೇರಿ ಗೋಪಾಲಕೃಷ್ಣ ಅಡಿಗರ “ಜನ್ಮ ಶತಮಾನೋತ್ಸವದ ಪ್ರಯುಕ್ತ, ಅಡಿಗರ ಸಾಹಿತ್ಯಾಧಾರಿತ ಕಾರ್ಯಕ್ರಮಗಳು ಸಂಕ್ರಮಣದ ವಿಶೇಷ.

    ೧. ಗುಂಜನ-- ಕನ್ನಡಕಲಿ ಪುಟಾಣಿಗಳಿಂದ ಸಮೂಹ ಗಾಯನ ಕಾರ್ಯಕ್ರಮ

    ೨. "ನೋಡು ನಮ್ಮ ನಾಡು" -- ಸರಣಿ ಕಾರ್ಯಕ್ರಮ

    ೨೦೧೮ ರ ಸಾಲಿನಲ್ಲಿ ಹೆಚ್ಚು ಹೆಚ್ಚು ಮಕ್ಕಳು ಭಾಗವಹಿಸುವ ಹಾಗು ಕನ್ನಡ ನಾಡಿನ ಕುರಿತು ಅರಿಯುವ ಸಲುವಾಗಿ ಸರಣಿ ಕಾರ್ಯಕ್ರಮವೊಂದನ್ನು ಆಯೋಜಿಸಿದೆ . ಪ್ರತಿಯೊಂದು ಕಾರ್ಯಕ್ರಮವೂ ಕರ್ನಾಟಕಕ್ಕೆ ಸಂಬಂಧಿಸಿದ ವಾಸ್ತು ಶಿಲ್ಪ , ಕಲೆ , ಚರಿತ್ರೆ , ಮಹಾನ್ ವ್ಯಕ್ತಿಗಳು - ಹೀಗೆ ಬೇರೆ ಬೇರೆ ಆಯಾಮಗಳನ್ನು ಒಳಗೊಂಡಿರುತ್ತದೆ. ಪ್ರತಿ ಸಂಚಿಕೆಯನ್ನು ಬೇರೆ ಬೇರೆ ನಿರ್ದೇಶಕರು ರೂಪಿಸಿ ನಿರ್ದೇಶಿಸುತ್ತಾರೆ. ಸಂಗೀತ, ನೃತ್ಯ ಮತ್ತು ನಾಟಕದಲ್ಲಿ ಆಸಕ್ತಿಯಿರುವ ೮ ರಿಂದ ೧೫ ವರ್ಷಗಳ ಒಳಗಿನ ಮಕ್ಕಳು ಈ ಕಾರ್ಯಕ್ರಮದ ಜೀವಾಳ.

    ೩. ಸಂಗೀತ ಧಾರೆ -- 'ಪುತ್ತೂರು ನರಸಿಂಹ ನಾಯಕ್' ರಿಂದ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ಮುಂತಾದ ಕಾರ್ಯಕ್ರಮಗಳು ಸಂಕ್ರಮಣದ ಭಾಗವಾಗಲಿವೆ.

    Sankramana 2018

    Jan 20th Chabot College, Hayward CA

    Sankramana - The medial period in which the Sun God travels from one sun sign to the other. During this period, the winds traversing from the south, breathe a fresh air of life into the dry and bare nature around us which helps in rejuvenating the life cycle. Likewise, the team of 2018 at KKNC set foot into their term, by hosting their first event of the year, Sankramana on January 20th, at the Chabot College auditorium. The theme of the event being "Varnamaya Jagathu" - a colorful world through which we stage some compositions of Sri Mogeri Gopalakrishnga Adiga, in commemoration of the centenary celebrations of this great poet. A few highlights of this event are:

    1. Gunjana --- choir from kannadakali kids.

    2. Nodu Namma Naadu -- A Series Program is an initiative aiming to educate the younger generation in various aspects of the glorious state of Karnataka. Each event will showcase many facets of Karnataka such as History, Architecture, Eminent personalities, and art and culture. The prominent artistes of these presentations will be children in the age group of 8 - 15 who will directed by many talented Directors of KKNC.

    3. Sangeetha Dhaare: A melodious stream of devotional, light and folk music by Sri Puttur Narasimha Nayak and many more entertaining performances will take stage in the Sankramana event.


    ಆತ್ಮೀಯರೇ
    ಈ ಸಲದ ದೀಪೋತ್ಸವದ ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ, ದೊಡ್ಡವರ ನೃತ್ಯ, ಭರತನಾಟ್ಯ, ಕಥಕ್, ಯಕ್ಷಗಾನ, ಜಾನಪದ ನೃತ್ಯ, ಹಾಸ್ಯ ನಾಟಕ ಇನ್ನು ಅನೇಕ ಆಕರ್ಷಕ ಕಾರ್ಯಕ್ರಮಗಳನ್ನು ಕೊಡಲು ಕನ್ನಡಕೂಟದ ಸದಸ್ಯರು ಭರ್ಜರಿ ತಯಾರಿ ನಡೆಸಿದ್ದಾರೆ. ತಾವೆಲ್ಲ ಬಂದು ನೋಡಿ ನಲಿದು, ಹಬ್ಬದೂಟವನ್ನು ಸವಿದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ. ಕಾರ್ಯಕ್ರಮಕ್ಕೆ ಬರುವ ಮೊದಲ ೫೦೦ ಕೆ.ಕೆ.ಏನ್.ಸಿ ಸದಸ್ಯರಿಗೆ ಉಚಿತ ಊಟವನ್ನು ನೀಡಲಾಗುವುದು. ಈ ಸದವಕಾಶವನ್ನು ಕಳೆದುಕೊಳ್ಳಬೇಡಿ, ಕಾರ್ಯಕ್ರಮಕ್ಕೆ ಬೇಗ ಹಾಜರಾತಿ ನೀಡಿ ನಿಮ್ಮ ಉಚಿತ ಹಬ್ಬದೂಟವನ್ನು ಗಿಟ್ಟಿಸಿಕೊಳ್ಳಿ. ಇದು ಸದಸ್ಯರಿಗೆ ಮಾತ್ರ ಅನ್ವಯಿಸುತ್ತದೆ . ಸದಸ್ಯರಲ್ಲದವರು, ಸದಸ್ಯತ್ವವನ್ನು ಪಡೆಯಬೇಕಾಗುತ್ತದೆ.

    Dear Members
    Please join us on our last event Deepotsava 2017 on Dec 3rd at ICC, Milpitas. We have a wide variety of programs lined up for your entertainment and delicious food with festive menu items planned for this Deepavali celebration. The first 500 members will be offered free food, so please don't miss this chance. Attend the event early & claim your free festive dinner. This applies to only members, non members need to buy tickets or get the membership.

    KKNC Deepotsava
    December 3, 2017 2:30 PM - 8:00 PM
    India Community Center
    525 Los Coches St, Milpitas, California 95035

    Please RSVP for KKNC's Deepotsava dinner/s you need on 3rd Dec using "Namma KKNC" App.(available for both iOS & Android OS)

    Note: This helps us to get the near accurate count and plan to better serve you at the event.
    We appreciate your understanding & support!!


    Pictures in Swarnasetu!

    We are almost at the end of the year 2017. As an active team, we are happy to say that we have given 22+ programs and number of initiatives and collaborations to the KKNC community. Now it is time to capture and share these moments with you in the form of Swarnasetu.

    It is an opportunity to be part of the magazine that being shared with all members either in the digital or physical paper print form. We are inviting family pictures for Swarnasetu. Take an advantage of this.

    To cover printing, shipping and other expenses, we are expecting a donation of $450 for half page and $900 for the full page.

    Please email ratisiddu@gmail, if you are interested and/or have any questions.
    *********************************************************************************

    ಇದೇ ಡಿಸೆಂಬರ್ ೩ ರಂದು ತಾವುಗಳು ತಮ್ಮ ಕುಟುಂಬ ಹಾಗು ಸ್ನೇಹಿತರೊಂದಿಗೆ ಬಂದು ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕೋರಿಕೊಳ್ಳುತ್ತೇವೆ.

    ನಿಮಗೆ ವೇದಿಕೆಯ ಮೇಲೆ ಪ್ರದರ್ಶನ ನೀಡಲು ಇಷ್ಟವಿದ್ದಲ್ಲಿ ಈ ಕೆಳಗಿನ ಕೊಂಡಿಯನ್ನು ಒತ್ತಬೇಕೆಂದು ಕೇಳಿಕೊಳ್ಳುತ್ತೇವೆ
    https://goo.gl/MsYfLd

    *****************************2018 Volunteer Sign up********************************

    ಕನ್ನಡ ಕೂಟದ ಸಮಸ್ತ ಬಾಂಧವರಿಗೆ ನಮಸ್ಕಾರ,

    ನನ್ನನ್ನು 2018 ರ ಕನ್ನಡಕೂಟದ ಅಧ್ಯಕ್ಷನನ್ನಾಗಿ ಸ್ವೀಕರಿಸಿರುವದಕ್ಕೆ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಈ ಪ್ರೀತಿ ಸದಾ ಇರಲಿ ಮತ್ತು ವರ್ಷ ಪೂರ್ತಿಯ ಸೇವೆಗೆ ಶಕ್ತಿಯಾಗಲಿ.
    ಸದಸ್ಯರ ಮತ್ತು ಸ್ವಯಂಸೇವಕರ ಸಹಕಾರ ವರ್ಷದ ಫಲಿತಾಂಶ. 44 ವರ್ಷಗಳ ಇತಿಹಾಸವಿರುವ ನಮ್ಮ ಕನ್ನಡ ಕೂಟದ ಅಭಿವೃದ್ಧಿಗೆ ಈ ನಿಟ್ಟಿನಲ್ಲಿ ಒಟ್ಟಾಗಿ ಸೇವೆ ಸಲ್ಲಿಸೋಣ, ಕನ್ನಡ ಕೂಟವನ್ನು ಇನ್ನಷ್ಟು ಬೆಳೆಸೋಣ.

    ಇದೀಗ 2018 ರ ಸಮಿತಿಗಳನ್ನು ರಚಿಸುವ ಸಮಯ. ಸಮಿತಿಯಲ್ಲಿ ಸೇವೆ ಸಲ್ಲಿಸ ಬಯಸುವವರು ಕೆಳಗಿನ Form ಭರ್ತಿಗೊಳಿಸಿ. ನಮ್ಮೊಂದಿಗೆ ಕೈ ಜೋಡಿಸಿ.
    Click the link to join the team: https://goo.gl/forms/LG7Ez6JVxT8mKYqv1

    ವಂದನೆಗಳು ,
    ರಾಜೇಂದ್ರ ಹೆಗಡೆ
    ಕಾರ್ಯಕಾರಿ ಸಮಿತಿ - 2018 ರ ವತಿಯಿಂದ

    ***********************2018 Membership********************************************

    ಕನ್ನಡಕೂಟ ಬಾಂಧವರೆ ,
    ಡಿಸೆಂಬರ್ ೩ ರಂದು India Commuinity center, Milpitasನಲ್ಲಿ ನಡೆಯುವ ದೀಪೋತ್ಸವದಲ್ಲಿ ನಿಮ್ಮ ಕೆ ಕೆ ಏನ್ ಸಿ ಯ ಸದಸ್ಯತ್ವವನ್ನು ನವೀಕರಿಸಿಕೊಳ್ಳಿ. ಕುಟುಂಬಕ್ಕೆ ಕೇವಲ $೬೦ ಹಾಗು ಒಬ್ಬರಿಗೆ $೩೦ ನಗದು ಅಥವಾ ಚೆಕ್ ಮೂಲಕ ಪಾವತಿಸಬಹುದು . ನಿಮ್ಮ ಸದಸ್ಯತ್ವವನ್ನು ನವೀಕರಿಸಲು ದೀಪೋತ್ಸವದಲ್ಲಿ ಸದಸ್ಯತ್ವ ಬೂತ್ ಅನ್ನು ಭೇಟಿ ಮಾಡಿ .

    Namaskara Kannadakoota bandhavare,
    Its time to renew your membership for the year 2018. Its just $60 per family and $30 for individual membership (Cash or Check) . Please join as a Proud Member and support KKNC ,it will help us in organizing the best programs. Please visit membership booth to renew your membership on Sunday Dec 3rd, 2017 @India Community Center, Milpitats, CA. Thank you.

    ವಂದನೆಗಳು ,
    ರಾಜೇಂದ್ರ ಹೆಗಡೆ
    ಕಾರ್ಯಕಾರಿ ಸಮಿತಿ - 2018 ರ ವತಿಯಿಂದ

    *******************************************************************************************
    ಕನ್ನಡ ಕೂಟದ ಸ್ನೇಹಿತ ಸ್ನೇಹಿತೆಯರೇ

    ಸ್ವರ್ಣಸೇತು 2017ರ ಸಮಿತಿಯು ಅಮೇರಿಕನ್ನಡಿಗರಿಗಾಗಿ ಕಥಾಸ್ಪರ್ಧೆಯೊಂದನ್ನು ಆಯೋಜಿಸಿದೆ. ನಿಮ್ಮ ಸೃಜನಶೀಲತೆಗೆ ಕಥೆಯ ರೂಪ ಕೊಡಲು, ನಿಮ್ಮಲ್ಲಿನ ಕಥೆಗಾರನನ್ನು ಪ್ರೋತ್ಸಾಹಿಸಲು, ನಿಮ್ಮ ಕಥೆಯನ್ನು ಇಲ್ಲಿನ ಕನ್ನಡ ಮನೆಮನಗಳಿಗೆ ತಲುಪಿಸಲು ಇದೊಂದು ಸದವಕಾಶ.
    ಕಥಾ ಸ್ಪರ್ಧೆಯ ನಿಯಮಗಳು :
    * ಕಥೆ ಎರಡು ಸಾವಿರ (2000) ಶಬ್ದಗಳನ್ನು ಮೀರದಿರಲಿ
    * ಕಥೆಗಳು ಬೇರೆಲ್ಲೂ (ಅಂತರ್ಜಾಲ ಮತ್ತು ಮುದ್ರಿತ ಮಾಧ್ಯಮ) ಪ್ರಕಟವಾಗಿರಬಾರದು
    * ಒಬ್ಬರು ಒಂದಕ್ಕಿಂತ ಹೆಚ್ಚು ಕಥೆ ಕಳುಹಿಸುವಂತಿಲ್ಲ
    * ಕನ್ನಡ ಅಥವಾ English ನಲ್ಲಿ ಕಥೆಯನ್ನು ರಚಿಸಬಹುದು.
    * ಅಮೇರಿಕದ ಎಲ್ಲಾ ಕನ್ನಡಿಗರಿಗೂ ಭಾಗವಹಿಸುವ ಅವಕಾಶವಿದೆ.
    * ಕಥೆಗಳು ಬರಹ, ನುಡಿ ಅಥವಾ ಯುನಿಕೋಡ್ ತಂತ್ರಾಂಶದಲ್ಲಿರಬೇಕು. ಕೈಬರಹದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
    * ಆಯ್ದ ಕಥೆಗಳಿಗೆ ಬಹುಮಾನವಿರುತ್ತದೆ. ತೀರ್ಪುಗಾರರ ನಿರ್ಧಾರವೇ ಅಂತಿಮ
    * ಆಯ್ದ ಕಥೆಗಳನ್ನು ಸ್ವರ್ಣಸೇತು - 2017ರಲ್ಲಿ ಪ್ರಕಟಿಸಲಾಗುವುದು. ಪರಿಷ್ಕರಿಸಿ ಪ್ರಕಟಿಸುವ ಹಕ್ಕು ಸ್ವರ್ಣಸೇತು-2017ರ ಸಂಪಾದಕ ಸಮಿತಿಗೆ ಸೇರಿದ್ದು.
    * ಸ್ಪರ್ಧೆಯು 8-12, 12-18, 18 ಮೇಲ್ಪಟ್ಟವರು ಎಂಬ ಮೂರು ವಿಭಾಗಗಲ್ಲಿ ನಡೆಸಲಾಗುವುದು.
    * ಕಥೆಯ ಜೊತೆಗೆ ಲೇಖಕರ ಹೆಸರು, ವಯಸ್ಸು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಮಿಂಚಂಚೆ ವಿಳಾಸ (email ID) ಕಳುಹಿಸಬೇಕು
    * ನಿಮ್ಮ ಕಥೆಗಳು ನಮಗೆ ತಲುಪಲು ಅಂತಿಮ ದಿನಾಂಕ ಡಿಸೆಂಬರ್ 15, 2017
    * ನಿಮ್ಮ ಕಥೆಗಳನ್ನು ಕಳುಹಿಸಬೇಕಾದ ವಿಳಾಸ - [email protected]
    ಸಂಪಾದಕ ಸಮಿತಿ
    ಸ್ವರ್ಣಸೇತು - 2017
    Swarnasetu 2017 Short Story writing competition
    Swarna Setu 2017 committee is happy to announce a short story writing competition for kannadigas living in the US. This is a golden opportunity to showcase your talent in creativity, art of storytelling and to reach Kannadigas here.
    General Rules:
    * Cannot exceed 2000 words
    * Previously published (internet or print) are not allowed
    * Limited to one story per person
    * Story can be either in Kannada or English.
    * This invitation is open to all kannadigas in USA
    * Use baraha, Nudi or any unicode format. Handwritten stories will not be accepted.
    * Selected stories will have a prize. Judges’ decision will be final
    * Selected stories will be published in SwarnaSetu -2017. The editors of the committee will reserve all rights to screen and select the stories to be published
    * Competition will be conducted for 8-12, 12-18, 18 and above age groups.
    * Include author’s name, age, address, telephone number and email ID.
    * Stories have to be received by us before December 15, 2017.
    * Send your stories to: [email protected]
    Editors,
    Swarnasetu - 2017

    ಕವನ ಸ್ಪರ್ಧೆ

    ಬರೆಯದ ಮೌನದ ಕವಿತೆ ಹಾಡಾಗಿದೆ.. "
    ನಿಮ್ಮ ಮೌನದ ಕವಿತೆಗಳಿಗೆ ಅಕ್ಷರ ರೂಪ ಒದಗಿಸುವ ಅವಕಾಶ. ಕಥೆ ಕೇಳಿದರೆ ಕಲ್ಪನೆಗೆ ಜಾರುವ ಮನಸ್ಸು ನಿಮ್ಮದೇ? ಒಳಮನದ ಗುನುಗನ್ನು ಆಲಿಸುವ ಕಿವಿಗಳು ನಿಮಗಿವೆಯೇ? ಸಾಹಿತ್ಯವನ್ನು ಪ್ರೀತಿಸುವ ಸದಭಿರುಚಿ ನಿಮಗಿದೆಯೇ? ಹಾಗಿದ್ದರೆ ನೀವು ಕವಿಯಾಗಲು ಪ್ರೇರಣೆ ಒಂದೇ ಬಾಕಿ ಇರೋದು. ಸ್ವಲ್ಪ ಸಮಯ ಮೀಸಲಿಟ್ಟರೆ ಸಾಕು. ನಿಮ್ಮಲ್ಲಿರುವ ಒಬ್ಬ ಕವಿಯನ್ನು ನಮಗೆಲ್ಲ ಪರಿಚಯಿಸಬಹುದು! ನಿಮಗೂ ಸಹ ಆ ಪರಿಚಯ ಹೊಸದೆನ್ನಿಸಬಹುದು.
    ಸ್ವರ್ಣಸೇತು ೨೦೧೭ ತಂಡದ ಪರವಾಗಿ ಕನ್ನಡ ಕೂಟದ ವತಿಯಿಂದ ಕವನ ರಚನಾ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಉದ್ದೇಶ ನಮ್ಮದು.
    * ವಿಷಯವನ್ನು ನಾವು ಕೊಡುತ್ತೇವೆ.
    * ಕೇವಲ ಎರಡು ದಿನ ಕಾಲಾವಕಾಶ. ನೀವೇ ನಿಗದಿ ಪಡಿಸುವ ದಿನದಂದು ನಿಮಗೆ ಕವಿತೆಯ ವಿಷಯವನ್ನು ಮಿಂಚಂಚೆ(e-mail) ಮೂಲಕ ತಿಳಿಸಲಾಗುವುದು. ವಿಷಯ ಕೊಟ್ಟ ದಿನದಿಂದ ೪೮ ಘಂಟೆಗಳ ಅವಧಿಯಲ್ಲಿ ನಿಮ್ಮ ಕವನವನ್ನು ನಮಗೆ ಕಳುಹಿಸತಕ್ಕದ್ದು.
    * ಕನ್ನಡ ಅಥವಾ English ಭಾಷೆಯಲ್ಲಿ ಕವಿತೆಯನ್ನು ರಚಿಸಬಹುದು.
    * ಕವನಗಳು ಬರಹ, ನುಡಿ ಅಥವಾ ಯುನಿಕೋಡ್ ತಂತ್ರಾಂಶದಲ್ಲಿರಬೇಕು [English ಕವನಗಳು ಇದಕ್ಕೆ ಹೊರತು] . ಕೈಬರಹದ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ.
    * ಅಮೇರಿಕದ ಎಲ್ಲಾ ಕನ್ನಡಿಗರಿಗೂ ಭಾಗವಹಿಸುವ ಅವಕಾಶವಿದೆ.
    * ಆಯ್ದ ಕವಿತೆಗೆ ಬಹುಮಾನವಿರುತ್ತದೆ. ತೀರ್ಪುಗಾರರ ನಿರ್ಧಾರವೇ ಅಂತಿಮ
    * ಆಯ್ದ ಕವಿತೆಗಳನ್ನು ಸ್ವರ್ಣಸೇತು -೨೦೧೭ರಲ್ಲಿ ಪ್ರಕಟಿಸಲಾಗುವುದು.
    * ಸ್ಪರ್ಧೆಯು 8-12, 12-18, 18 ಮೇಲ್ಪಟ್ಟವರು ಎಂಬ ಮೂರು ವಿಭಾಗಗಲ್ಲಿ ನಡೆಸಲಾಗುವುದು.
    * ಸ್ಪರ್ಧೆಗೆ ಕಡೆಯ ದಿನಾಂಕ ಡಿಸೆಂಬರ್ 15, 2017.
    * ನಿಮ್ಮ ಹೆಸರು, ವಯಸ್ಸು ಹಾಗು ನೀವು ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳುವ ದಿನಾಂಕವನ್ನು ನಮಗೆ ಕಳುಹಿಸಬೇಕಾದ ವಿಳಾಸ - [email protected]
    ವಿ. ಸೂ : ಕವನ ರಚನೆ ಎಂಬ ಮೇಲ್ಕಂಡ ಸ್ಪರ್ಧೆಯಲ್ಲಿ ಚುಟುಕ/ಹನಿಗವನಗಳನ್ನು ಸಹ ರಚಿಸಬಹುದು.

    ಪ್ರೀತಿಯ ಕನ್ನಡ ಕೂಟದ ಸದಸ್ಯರೇ
    ಈ ವರ್ಷ ನಮ್ಮ ಕನ್ನಡ ಕೂಟದ ಮೆಗಾ ಕಾರ್ಯಕ್ರಮವಾದ ಕನ್ನಡೋತ್ಸವದ ವಿಶೇಷತೆ ಏನೆಂದರೆ ಇದೊಂದು ಪೂರ್ಣ ದಿನದ ಸಂಗೀತಮಯ ಅತಿರಂಜಿತ ದಿನವಾಗಿದೆ. ನಿಮಗಾಗಲೇ ತಿಳಿದಿರುವಂತೆ ರಾಜೇಶ್ ಕೃಷ್ಣನ್ ಮತ್ತು ಐಶ್ವರ್ಯ ರಂಗರಾಜನ್ ಅವರು ಪಕ್ಕವಾದ್ಯ ಕಲಾವಿದರುಗಳಾದ ರಾಜೀವ್, ವೆಂಕಿ, ಕೃಷ್ಣ , ರಘು, ಭರತ್ ಮತ್ತು ದೀಪು ಅವರೊಂದಿಗೆ "ಸ್ವರಸಂಗಮ" ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಇದಲ್ಲದೆ ವಿದ್ವಾನ್. ಪ್ರೊ. ಸುಚೇತನ್ ರಂಗಸ್ವಾಮಿ ಅವರು ಐಶ್ವರ್ಯ ರಂಗರಾಜನ್ ಅವರೊಂದಿಗೆ "ರಾಗ ಸಂಗಮ" ಸಂಗೀತ ಗಾಯನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಬೆಳಗ್ಗೆ ೧೦. ೩೦ ರಿಂದ ಸಂಜೆ ೭. ೦೦ ರವರೆಗೆ ಹಲವು ಕಲಾವಿದರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸೆಪ್ಟೆಂಬರ್ ೧೦ ರಂದು ಭಾನುವಾರ ಶಾಬೋತ್ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ಹೆಚ್ಚಿನ ಸಂಖ್ಯಯಲ್ಲಿ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತೀರೆಂದು ನಂಬಿದ್ದೇವೆ. ಟಿಕೆಟ್ ಗಳನ್ನು ಇಲ್ಲಿ ಖರೀದಿಸಿರಿ. sulekha.com/kknc
    ನಮ್ಮ KKNC APP ಮೂಲಕ ಸಹ ನಿಮ್ಮ ಚೀಟಿಗಳನ್ನು ಖರೀದಿಸಬಹುದು.
    ಎಲ್ಲರೂ ನಿಮ್ಮ ಚೀಟಿಗಳನ್ನು ಬೇಗ ಖರೀದಿಸ ಬೇಕಾಗಿ ವಿನಂತಿ

    Dear KKNC Members,

    We would like to invite you all for 'Kannadotsava 2017' our mega event on Sunday September 10th at Chabot college Hayward. We have celebrity singer Rajesh Krishan presenting "Swara Sangama" a musical extravaganza. Aishwarya Rangarajan Sa.Ri.Ga.Ma. Pa champion will be joining us for this full day musical event. And they will be accompanied by artists Rajiv, Venky, Krishna, Raghu, Bharath & Deepu on instruments. And Vidwan Suchetan Rangaswamy will be presenting "Raaga Sangama" with the orchestra. Vidwan Professor Suchetan Rangaswamy is a renowned singer, actor and a great mentor. We are very lucky to have all these artists from India for our kannadotsava program. Don't miss this great opportunity. Buy your tickets today at sulekha.com/kknc

    You can also buy on Namma KKNC app.
    We have local artists performances lined up in our full day event which starts from 10.30 in the morning to 7.00 PM.

    KKNC IDOL 2017


    Based on public demand !!!
    Karaoke and Meet & Greet with Rajesh Krishnan!!!
    Entry Fees (Covers dinner):
    Ages 4-8-->$10
    Ages 8 and above-->$15
    Age below 4 years --> Free !!!
    A) Bay Area ಕನ್ನಡದ ಗಾಯಕ/ಗಾಯಕಿಯರಿಗೆ ಒಂದು ಚಿನ್ನದ ಅವಕಾಶ !!! ಸುಪ್ರಸಿದ್ಧ ಕನ್ನಡ ಚಿತ್ರ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರ ಸಮ್ಮುಖದಲ್ಲಿ ಹಾಡುವ ವಿಶೇಷ ಸಂದರ್ಭ !!! ಮೊದಲು ಹೆಸರು ನೋಂದಾಯಿಸಿದ 20-25 ಹಾಡುಗಾರರಿಗೆ ರಾಜೇಶ್ ಕೃಷ್ಣನ್ ಅವರ ಸಮ್ಮುಖದಲ್ಲಿ ಹಾಡಲು ಅವಕಾಶ ಕೊಡಲಾಗುವುದು ಹಾಗೆಯೇ ರಾಜೇಶ್ ಅವರಿಂದ ಅಭಿಪ್ರಾಯ ಕೂಡ ಪಡೆಯಬಹುದು.

    B) ಕೇವಲ Meet & Greetಗೆ ಕೂಡ ಬಂದು ರಾಜೇಶ್ ಕೃಷ್ಣನ್ ಅವರೊಂದಿಗೆ ಪ್ರಶ್ನೋತ್ತರ ಹಾಗೂ ಫೋಟೋ ತೆಗೆಯಿಸಿಕೊಳ್ಳಲು ಸಹ ಅವಕಾಶವಿದೆ.

    ಇದರೊಂದಿಗೆ ಸಂಜೆ ರುಚಿಯಾದ ಊಟ !!!.
    ಇನ್ನೇಕೆ ತಡ ???
    Please register through the following link for either Karaoke singing or meet & greet here:
    https://tinyurl.com/rkmeet2017
    Rules:
    1) The opportunity to sing in front of Rajesh Krishnan will be given to to the first 20-25 singers based on a first come first serve basis.
    2) Getting the karaoke tracks is individual's responsibility.
    3) Mic and sound system to play track will be provided by KKNC.
    4) Persons only interested in meet & greet with Rajesh Krishnan must also register through the same link (https://tinyurl.com/rkmeet2017)
    5) Singers are allowed to sing only Pallavi and 1 Charana of a song or around 4 minutes, whichever is shorter.

    So, let's spend a musical evening with Rajesh Krishnan !

    Kannadotsava Rangoli Competition

    Registrations for KannadOtsava Rangoli competition are open..!
    Exciting prizes to be won(1st & 2nd) & also your chance to be in the contention for "KKNC Rangoli Ratna" award at the end of the year.!
    It doesn't matter if you've missed participating in the past two events, there are 2 more events including kannadOtsava to be in contention for "KKNC Rangoli Ratna 2017" award.
    Hurry in your entries,
    https://goo.gl/forms/n2XszUuZTgEYWzbJ2
    If you remember, at the beginning of the year, we mentioned that one of the step that we are taking to sustain, encourage and nourish our Rangoli Art form is,
    "The Rangoli competition will happen at all major KKNC events this year. We encourage you to participate in all of the KKNC Rangoli events. At the last event of the year, the title "KKNC RANGOLI RATNA" will be awarded for the participant after considering the points you would've earned by your wins from your participation through out the year. Yes, there's a super attractive prize included too!
    Points!!! How???
    The top 5 positions in every event will be awarded points, 10, 8, 6, 4 & 2 for the winning positions 1,2,3,4 & 5 respectively. So, again, the more events you participate & win/stand in the top 5 positions, the more points you earn & get closer to the title that you can be proud of & boast about.

    KKNC Camping 2017

    Camp Date : Aug 18th, 19th and 20th
    Camp Ground Address: 21700 Little Basin Rd, Boulder Creek, CA 95006
    Contact: Suresh Bedare: 408-505-3139
    Aabhijith Prabhudev: 408-368-2182
    More Details: http://kknc.org/sites/default/files/Camping-Details-2017.pdf





    India Independence Day Parade

    ಧನ್ಯವಾದಗಳು
    ಕಳೆದ ಭಾನುವಾರ ಫ್ರೀಮಾಂಟ್ ನಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಕನ್ನಡ ಕೂಟದ ಮಾರುಕಟ್ಟೆ ಸಮಿತಿಯ ನಾಯಕತ್ವದಲ್ಲಿ ಏರ್ಪಡಿಸಿದ್ದ ಫ್ಲೋಟ್ ನಿರ್ಮಾಣ ಮತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯರಿಗೂ ಮತ್ತು ಎಲ್ಲಾ ಸ್ವಯಂಸೇವಕರಿಗೂ ನಮ್ಮ ಅನಂತ ಅನಂತ ಧನ್ಯವಾದಗಳು. ನಿಮ್ಮೆಲ್ಲರ ಅಪಾರವಾದ ಪರಿಶ್ರಮದಿಂದ ನಮಗೆ ಎರಡನೇಯ ಬಹುಮಾನ ಲಭ್ಯವಾಗಿದೆ. ನಿಮ್ಮ ಈ ಪರಿಶ್ರಮಕ್ಕೆ ನಾವು ಚಿರ ಋಣಿಯಾಗಿದ್ದೇವೆ ಮತ್ತು ಈ ಮೂಲಕ ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ

    India Independence Day Parade

    70ರ ಹೊಸ್ತಿಲಲ್ಲಿ ಭಾರತ!!! ಪ್ರತಿವರ್ಷದಂತೆ ಈ ವರ್ಷವೂ ಅಗಸ್ಟ ೧೩, ಭಾನುವಾರದದಂದು ನಡೆಯಲಿರುವ FOGಯ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಕಳೆದ ಕೆಲವು ವರ್ಷಗಳಿಂದ ಅಲ್ಲಿನ ಮೆರವಣಿಗೆಯಲ್ಲಿ BEST FLOAT ಗೆದ್ದ ಇತಿಹಾಸ ಹೊಂದಿರುವ ಗರಿಮೆ ಕನ್ನಡ ಕೂಟದ್ದು. ತಮ್ಮ ಸೃಜನಶೀಲತೆ ಮತ್ತು ಕಾರ್ಯಕುಶಲತೆಯಿಂದ ಈ ವರ್ಷವೂ ಜನಮನ ಗೆಲ್ಲಬಲ್ಲ ಕಲಾಕೃತಿಯನ್ನು ನಿರ್ಮಿಸುವ ಹುಮ್ಮಸ್ಸಿನ ಕಾರ್ಯಕರ್ತರನ್ನು ಎದುರುನೋಡುತ್ತಿದೆ. ಪಾಲಕರಲ್ಲಿ ವಿನಂತಿ - ಹನ್ನೆರಡು ವರ್ಷಕ್ಕೂ ಮೇಲ್ಪಟ್ಟ ಮಕ್ಕಳನ್ನು ಈ ಯೋಜನೆಯಲ್ಲಿ ಭಾಗವಹಿಸುವಂತೆ ನೀವೂ ಪ್ರೋತ್ಸಾಹಿಸಿ, ನಾವೂ ಅವರನ್ನು ಸ್ವಾಗತಿಸುತ್ತೇವೆ. ಈ ಸೃಜನಶೀಲ ಯೋಜನೆಯಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಲು ಈ ಕೆಳಗಿನ ಫಾರ್ಮಿನಲ್ಲಿ ನೋಂದಾಯಿಸಿಕೊಳ್ಳಿ.
    https://goo.gl/forms/u2FBhgtUwIXRZTF72

    India @ 70!!! Like every year, KKNC is gearing up to be part of FOG Independence Day celebration in Fremont on Aug 13(Sunday) 2017.
    Historically, KKNC has been winning BEST FLOAT award in past couple of years for creative presentation of Karnataka themes.

    KKNC is looking for volunteers who would like to contribute their creativity and skills in building an yet another master piece in collaboration with our master designers.

    NOTICE TO PARENTS: We would love to involve Kids (12 years or above) to be part of this project.

    Please register your interest in volunteering to build float using below form:
    https://goo.gl/forms/u2FBhgtUwIXRZTF72

    ಕ್ಯಾಂಪಿಂಗ್ - ೨೦೧೭

    ನಮ್ಮ ಈ ವರ್ಷದ ಬೇಸಿಗೆಯ ಬೀಡನ್ನು ಆಗಸ್ಟ್ ೧೮-೧೯-೨೦ ರಂದು ಲಿಟಲ್ ಬೇಸಿನ್ ಹೊರಾಂಗಣದಲ್ಲಿ ಏರ್ಪಡಿಸಲಾಗಿದೆ. ಈಗಾಗಲೇ ನೋಂದಾಯಿಸಿಕೊಂಡಿರದಿದ್ದರೆ "ನಮ್ಮ KKNC APP" ಮೂಲಕ ನೋಂದಾಯಿಸಿಕೊಳ್ಳಿ.

    Camp Date : Aug 18th, 19th, 20th (Friday evening, Saturday, Sunday)
    Camp Ground address: 21700 Little Basin Rd, Boulder Creek, CA 95006
    Contact Suresh Bedare: 408-505-3139 & Aabhijith prabhudev: 408-368-2182
    Email: [email protected]

    ಕ್ರೀಡಾ ದಿನ

    ಈ ವರ್ಷದ ಕ್ರೀಡಾದಿನವನ್ನು ಶನಿವಾರ ಜೂನ್ ೩ ರಂದು ಏರ್ಪಡಿಸಲಾಗುವುದು, ಹೆಚ್ಚಿನ ಮಾಹಿತಿಯನ್ನು ಮುಂದಿನ ಸುದ್ದಿಪತ್ರದಲ್ಲಿ ತಿಳಿಸಲಾಗುವುದು. ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ನೀವೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿರುವಂತೆ ನಮ್ಮ “ಕ್ರೀಡಾ ದಿನ” ವನ್ನು ಸಹ ಯಶಸ್ವಿಗೊಳಿಸುತ್ತೀರೆಂದು ನಂಬಿದ್ದೇವೆ. ನಿಮ್ಮ ನಿರಂತರ ಬೆಂಬಲಕ್ಕೆ ನಮ್ಮ ಧನ್ಯವಾದಗಳು.

    Sports Day! 3-June-2017(Saturday)

    The sports day event will be held on Saturday June 3rd. Please stay tuned for more information. We thank you for all your participation and making all our events a huge success so far. We are sure you all will participate in huge numbers on our sports day event as well.

    ಸೇವತಾನ್ ೨೦೧೭

    ಕನ್ನಡ ಕೂಟವು ಈ ವರ್ಷ ಜುಲೈ ೯ ಭಾನುವಾರ ದಂದು ನಡೆಯಲಿರುವ ಸೇವತಾನ್-೨೦೧೭ ನಲ್ಲಿ ನೊಂದಾಯಿಸಿಕೊಂಡಿದೆ. ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡ ಕೂಟಕ್ಕೆ ನಿಮ್ಮ ಬೆಂಬಲವನ್ನು ತೋರಿಸಬೇಕಾಗಿ ಕೋರಿಕೊಳ್ಳುತ್ತೇವೆ. ನಾವು ಶೀಘ್ರದಲ್ಲೇ ನೋಂದಣಿ ತೆಗೆದುಕೊಳ್ಳಲು ಪ್ರಾರಂಬಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಕಾದು ನೋಡಿ.

    KKNC has been registered for Sevathon 2017. Sevathon is the walkathon and Yogathon that aims to set the standard as the largest social and service platform (more than 130 non-profit organizations) of its kind. Walkers, runners, Yoga participants, non-profits, sponsors, family members and friends are all part of the Sevathon family, as they enable each non-profit organization partner (KKNC) to deliver its message and further its cause. This is a great opportunity to be part of Sevathon to support KKNC to also showcase the unity and integrity. We are starting the registration soon. Stay tune.

    ಭಾರತೀಯ ಸ್ವಾತಂತ್ರ್ಯದ ೭೦ ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಬೇ ಏರಿಯಾದಲ್ಲಿರುವ ಎಲ್ಲಾ ದಕ್ಷಿಣ ಭಾರತೀಯ ಸಮುದಾಯ ಸಂಸ್ಥೆಗಳು ಒಂದುಗೂಡಿ “ದಕ್ಷಿಣ್ ಫೆಸ್ಟ್” ಎಂಬ ಉತ್ಸವವನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ, ಭಾರತೀಯ ಕಾನ್ಸುಲೇಟ್ನೊಂದಿಗೆ ಆಚರಿಸಲು ನಿರ್ಧರಿಸಿವೆ. ನಮ್ಮ ಕನ್ನಡ ಕೂಟವು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ ಮತ್ತು ಕಾರ್ಯಕ್ರಮಗಳನ್ನು ಹುಡುಕುತ್ತಿದೆ. ದಕ್ಷಿಣ ಭಾರತದ ಅದ್ಭುತ ಆಹಾರ ಮತ್ತು ಸಾಂಸ್ಕೃತಿಕ ಪ್ರದರ್ಶನವನ್ನು ಆನಂದಿಸಲು ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಈ ಆಚರಣೆಯಲ್ಲಿ ಭಾಗವಹಿಸಿ.

    On the occasion of 70th anniversary of Indian Independence, All South Indian organizations are coming together to celebrate DAKSHIN FEST with Indian Consulate at San Francisco. KKNC is actively participating in this and looking for programs. Please come with your family and friends to enjoy amazing Food and Cultural display of South India.

    ಛಾಯಾಗ್ರಹಣ ಕಾರ್ಯಾಗಾರ - ಮೇ ೨೦

    ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾ, ಕನ್ನಡ ಕೂಟದ ಜನತೆಗೆ ಫೋಟೋಗ್ರಫೀ ತರಬೇತಿ ಶಿಬಿರವನ್ನು ಆಯೋಜಿಸಿದ್ದು. ನೀವೆಲ್ಲ ಇದರ ಸದುಪಯೋಗ ಪಡೆಯಬೇಕೆಂದು ವಿನಂತಿಸುತ್ತೇವೆ. ನಿಮಗೆ ಫೋಟೋಗ್ರಫೀ ಕಲಿಯುವ ಹಂಬಲವಿದ್ದಲ್ಲಿ ಇಂದೇ ನೋಂದಾಯಿಸಿ. ತರಬೇತಿಯು ಕೂಟದ ಸದಸ್ಯರಿಗೆ ಸೀಮಿತವಾಗಿದ್ದು , ಯಾವುದೇ ಶುಲ್ಕ ವ್ಯಯ ಮಾಡುವಂತಿರುವಿದಿಲ್ಲ. ನಮ್ಮ ಮೆಚ್ಚಿನ ರವಿಶೇಖರ್ ಅವರು ಈ ತರಬೇತಿಯನ್ನು ನೀಡಲಿದ್ದಾರೆ.
    ದಿನಾಂಕ: ಮೇ ೨೦ ಶನಿವಾರ
    ಸಮಯ: ಬೆಳಗ್ಗೆ ೯.೩೦ ರಿಂದ ಮದ್ಯಾಹ್ನ ೨.೩೦
    ಸ್ಥಳ : ೫೧೦ ಮೆಕಾರ್ತಿ ಬುಲವರ್ಡ್, ಮಿಲ್ಪಿಟಾಸ್

    KKNC presents Photography Workshop from our KKNC member & renowned photographer Ravi Shekar. It is free for all members. Come and learn photography & make use of this workshop..
    Please Register using "Nama KKNC" App
    Date & Time : May 20th 2017, 9:30AM - 2:30PM
    Venue : 510 McCarthy Blvd , Milpitas, CA 95035

    ಕ್ರೀಡಾ ದಿನ

    ಈ ವರ್ಷದ ಕ್ರೀಡಾದಿನವನ್ನು ಶನಿವಾರ ಜೂನ್ ೩ ರಂದು ಏರ್ಪಡಿಸಲಾಗುವುದು, ಹೆಚ್ಚಿನ ಮಾಹಿತಿಯನ್ನು ಮುಂದಿನ ಸುದ್ದಿಪತ್ರದಲ್ಲಿ ತಿಳಿಸಲಾಗುವುದು. ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ನೀವೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿರುವಂತೆ ನಮ್ಮ “ಕ್ರೀಡಾ ದಿನ” ವನ್ನು ಸಹ ಯಶಸ್ವಿಗೊಳಿಸುತ್ತೀರೆಂದು ನಂಬಿದ್ದೇವೆ. ನಿಮ್ಮ ನಿರಂತರ ಬೆಂಬಲಕ್ಕೆ ನಮ್ಮ ಧನ್ಯವಾದಗಳು.

    The sports day event will be held on Saturday June 3rd. Please stay tuned for more information. We thank you for all your participation and making all our events a huge success so far. We are sure you all will participate in huge numbers on our sports day event as well.

    ಸೇವತಾನ್ ೨೦೧೭

    ಕನ್ನಡ ಕೂಟವು ಈ ವರ್ಷ ಜುಲೈ ೯ ಭಾನುವಾರ ದಂದು ನಡೆಯಲಿರುವ ಸೇವತಾನ್-೨೦೧೭ ನಲ್ಲಿ ನೊಂದಾಯಿಸಿಕೊಂಡಿದೆ. ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡ ಕೂಟಕ್ಕೆ ನಿಮ್ಮ ಬೆಂಬಲವನ್ನು ತೋರಿಸಬೇಕಾಗಿ ಕೋರಿಕೊಳ್ಳುತ್ತೇವೆ. ನಾವು ಶೀಘ್ರದಲ್ಲೇ ನೋಂದಣಿ ತೆಗೆದುಕೊಳ್ಳಲು ಪ್ರಾರಂಬಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಕಾದು ನೋಡಿ.

    KKNC has been registered for Sevathon 2017. Sevathon is the walkathon and Yogathon that aims to set the standard as the largest social and service platform (more than 130 non-profit organizations) of its kind. Walkers, runners, Yoga participants, non-profits, sponsors, family members and friends are all part of the Sevathon family, as they enable each non-profit organization partner (KKNC) to deliver its message and further its cause. This is a great opportunity to be part of Sevathon to support KKNC to also showcase the unity and integrity. We are starting the registration soon. Stay tune.

    ಶ್ರೀಮತಿ ಮಂಜುಳಾ ಗುರುರಾಜ್ ಮತ್ತು ಶ್ರೀ ಬದರಿ ಪ್ರಸಾದ್

    ಕನ್ನಡ ಕೂಟದ ಬಾಂಧವರೇ
    ನಿಮಗೆಲ್ಲರಿಗೂ ಒಂದು ಸಂತಸದ ಸುದ್ದಿ. ಏಪ್ರಿಲ್ ೯ ರಂದು ಚಬೋತ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಯುಗೋತ್ಸವ ಕಾರ್ಯಕ್ರಮಕ್ಕೆ ನಮ್ಮನ್ನು ಮನರಂಜಿಸಲು ಬರುತ್ತಿದ್ದಾರೆ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಹೆಸರಾಂತ ಗಾಯಕರಾದ ಶ್ರೀಮತಿ ಮಂಜುಳಾ ಗುರುರಾಜ್ ಮತ್ತು ಶ್ರೀ ಬದರಿ ಪ್ರಸಾದ್. ನಮ್ಮ ಆಮಂತ್ರಣವನ್ನು ಸ್ವೀಕರಿಸಿ ನಮ್ಮ ಅತಿಥಿಗಳಾಗಿ ಬರುತ್ತಿರುವ ಮಂಜುಳಾ ಗುರುರಾಜ್ ಮತ್ತು ಬದರಿ ಪ್ರಸಾದ್ ಅವರ ಸ್ವರ ಮಾಧುರ್ಯವನ್ನು ಸವಿಯುವ ಭಾಗ್ಯ ನಿಮ್ಮದಾಗಿದೆ. ಈ ಸದವಕಾಶವನ್ನು ಕಳೆದುಕೊಳ್ಳಬೇಡಿ. ಮರೆಯದೇ ಯುಗೋತ್ಸವಕ್ಕೆ ಬನ್ನಿ.

    Dear KKNC friends
    We are very happy to inform you a great news.The renowned singers Shrimathi Manjula Gururaj and Shri Badari Prasad will be joining us for the celebration of yugadi. In Yugothsava , our next celebration event on April 9th at Chabot college, you all have a golden opportunity to listen to their singing. Please don’t miss this chance. Come to Yugotsava.

    ಶ್ರೀ ಬಸಲಿಂಗಯ್ಯ ಹಿರೇಮಠ ಮತ್ತು ಶ್ರೀಮತಿ ವಿಶ್ವೇಶ್ವರಿ ಬಸಲಿಂಗಯ್ಯ

    900+ shows ,workshop all over the world and first time in US.

    Just grab the opportunity and can be proud of learning new folk art form.

    ಕರ್ನಾಟಕದ ಸಮೃದ್ಧ ಜನಪದ ರಂಗಕಲೆಗಳಲ್ಲಿ ಕೃಷ್ಣ ಪಾರಿಜಾತ ಮಹತ್ವದ ಪಾತ್ರ ಹೊಂದಿದೆ. ಹಾಡು, ಕುಣಿತ, ಪ್ರಸಾಧನಗಳಿಂದ ಮನರಂಜಿಸುವ ಈ ನಾಟಕ ಕಲೆ ಉತ್ತರ ಕರ್ನಾಟಕದಲ್ಲಿ ಬಹು ಜನಪ್ರಿಯವಾಗಿದೆ. ರಾಮಾಯಣ, ಮಹಾಭಾರತದಿಂದಾಯ್ದ ಪೌರಾಣಿಕ ಕಥಾನಕಗಳನ್ನು ಗದ್ಯ-ಪದ್ಯ ಮಿಶ್ರಿತ ಕಥನಶೈಲಿಯಿಂದ ಪ್ರಸ್ತುತಪಡಿಸುವ ಕೃಷ್ಣ ಪಾರಿಜಾತ, ಯಕ್ಷಗಾನ ಮತ್ತು ಬಯಲಾಟಗಳ ಸಾಲಿನಲ್ಲಿ ನಿಲ್ಲುವ ನೃತ್ಯ ರಂಗಕಲೆ.

    We are getting very much good responses from many of you for guest artist workshop "Krishnaparijath/ RangageetegaLu/Rangatarabetishibhir".

    Before we close registration, take advantage of it.

    Join by registering..
    https://goo.gl/forms/9pDRpyycxYMt0hQz2

    ಕ್ಯಾಂಪಿಂಗ್ ನೋಂದಣಿ ಯುಗೋತ್ಸವ ದಿನದಂದು ಪ್ರಾರಂಬ

    ನಮ್ಮ ಈ ವರ್ಷದ ಬೇಸಿಗೆಯ ಬೀಡನ್ನು ಆಗಸ್ಟ್ ೧೮-೧೯-೨೦ ರಂದು ಲಿಟಲ್ ಬೇಸಿನ್ ಹೊರಾಂಗಣದಲ್ಲಿ ಏರ್ಪಡಿಸಲಾಗಿದೆ. ಇದರ ನೋಂದಣಿಯನ್ನು ನಾವು ಯುಗೋತ್ಸವದ ದಿನದಂದು ಪ್ರಾರಂಬಿಸುತ್ತಿದ್ದೇವೆ. ಬೇಗ ನಿಮ್ಮ ಹೆಸರನ್ನು ನೋಂದಾಯಿಸಿ ನಿಮ್ಮ ಬೀಡು ನೆಲವನ್ನು ಧೃಡಪಡಿಸಿಕೊಳ್ಳಿ

    We would like to inform you that this year our summer camping will be held in Little Basin on August 18-19-20th.

    The enrollment is opening on April 9th at Chabot college during YugOtsava event.
    Camp ground has limited/pre-defined number of tents and cabins hence we have limited spots, will be allocated on first come first serve basis.
    Please plan accordingly, and bring cash or check to reserve your spot, please find the below link for more information and to the fill your details. Your slots will be confirmed once you pay the full amount within the week.

    https://goo.gl/forms/naLw5KtGiGESJJcV2


    *****************************************************************************

    ಯುಗೋತ್ಸವದಲ್ಲಿ ಮಳಿಗೆಗಳು ಲಬ್ಯವಿವೆ

    ಕನ್ನಡ ಕೂಟವು, ಸುಮಾರು 1200ಕ್ಕೂ ಹೆಚ್ಚು ಜನಸಂದಣಿ ಇರುವಂತಹ ನಮ್ಮ ಸಮಾರಂಭಗಳಲ್ಲಿ ನಿಮ್ಮ ವ್ಯಾಪಾರಗಳನ್ನು ಅಥವಾ ಉತ್ಪನ್ನಗಳು ಸಾದರಪಡಿಸುವ ದೊಡ್ಡ ಅವಕಾಶಗಳನ್ನು ನೀಡುತ್ತದೆ. ಚಬೋಟ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಏಪ್ರಿಲ್ ೯ ರಂದು ನಡೆಯುವ ನಮ್ಮ ಯುಗೋತ್ಸವದ ಸಂದರ್ಭದಲ್ಲಿ ನಿಮ್ಮ ಮಳಿಗೆಯನ್ನು ಇರಿಸಲು ಆಸಕ್ತಿ ಇರುವ ಎಲ್ಲಾ ವ್ಯಾಪಾರ ಹೊಂದಿದವರನ್ನು ಆಹ್ವಾನಿಸುತ್ತಿದ್ದೇವೆ. ನಿಮ್ಮ ಬಂಧು ಮಿತ್ರರರಲ್ಲಿ ಯಾರಾದರು ತಮ್ಮ ವ್ಯವಹಾರದ ಮಳಿಗೆಯನ್ನು ನಮ್ಮ ಸದಸ್ಯರಿಗೆ ಪ್ರದರ್ಶಿಸಲು ಇಷ್ಟವಿದ್ದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಲು ಹೇಳಿ. ವಾಹನ ವಿಮೆ ಏಜೆಂಟರು, ಸೀರೆ ವ್ಯಾಪಾರಿಗಳು, ಉಡುಪು ಮಾರಾಟಗಾರರು, ಅಡುಗೆ ವ್ಯಾಪಾರ, ಯೋಗ, ನೃತ್ಯ & ಸಂಗೀತ ಶಿಕ್ಷಕರು, ದಂತವೈದ್ಯರು, ರಿಯಲ್ ಎಸ್ಟೇಟ್ ಏಜೆಂಟ್, SAT ಶಿಕ್ಷಕರು ಇತ್ಯಾದಿ ಇತ್ಯಾದಿ ಎಲ್ಲಾ ರೀತಿಯ ವ್ಯವಹಾರದ ಮಳಿಗೆಗಳನ್ನು ನಮ್ಮ ಸದಸ್ಯರೊಂದಿಗೆ ಹಂಚಿಕೊಳ್ಳಲು ನಿಮಗೆ ಸ್ವಾಗತ ನೀಡುತ್ತಿದ್ದೇವೆ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 408-431-1401, ಅಥವಾ ಮಿಂಚಂಚೆ [email protected]

    Booths available in Yugotsava

    KKNC offers great opportunities for presenting Products or services to larger groups (around 1200+) at our events. We would like to invite all business holders who ever is interested in placing the booth at our Yugotsava event on Sunday April 9th at Chabot College, Hayward. Please ask your friends/family to contact us in case they want to host Booths for their business needs like Auto Insurance Agents, Saree Vendor, Clothing vendors, Catering business, Party planners, Yoga, Dance & Music teachers, Dentists, Real estate agents, SAT tutors etc etc are all welcome to get connected with our members. Anyone interested can contact 408-431-1401 or [email protected]

    *****************************************************************************

    ಕಲಾವಿದರ ಆಗಮನದ ಖರ್ಚುವೆಚ್ಚಕ್ಕೆ ಧನ ಸಂಗ್ರಹಣೆ

    ಕನ್ನಡ ಕೂಟದ ಬಾಂಧವರೇ
    ನಮ್ಮ ಕನ್ನಡ ಕೂಟದ ಕಾರ್ಯಕ್ರಮಗಳಿಗೆ ಭಾರತದಿಂದ ಉತ್ತಮ ಕಲಾವಿದರನ್ನು ಬರಮಾಡಿಕೊಳ್ಳಲು ಆಗುವ ಖರ್ಚುವೆಚ್ಚಗಳಿಗೆಂದೇ ಕಾಯ್ದಿರಿಸುವ ನಿಗದಿತ ಮೊತ್ತದ ನಿರ್ಮಾಣ ಕಾರ್ಯದ ಯೋಜನೆಯೊಂದನ್ನು ನಮ್ಮ ಸಮಿತಿಯು ಆಯೋಜಿಸಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಕಾರ್ಯಕ್ರಮಗಳಿಗೆಂದು ನಾವು ತೆರುವ ಸಭಾಮಂದಿರದ ಬಾಡಿಗೆಯು ಗಗನಕ್ಕೇರಿದೆ. ಕೇವಲ ಸದಸ್ಯತ್ವ ಶುಲ್ಕಕ್ಕೆ ಸೀಮಿತವಾದ ಕನ್ನಡ ಕೂಟದ ಆದಾಯದಿಂದ ಇದು ಅಸಂಭವವಾಗಿದೆ. ಆದ್ದರಿಂದ ನಮ್ಮ ಸಮಿತಿಯು ನಿಮ್ಮ ಸಹಾಯ ಮತ್ತು ಸಹಕಾರ ಕೋರುತ್ತಿದ್ದೇವೆ. ನಮ್ಮ ಸದಸ್ಯರು ಇದಕ್ಕೆಂದೇ $೨೦೦ ಅಥವಾ ಸಾಧ್ಯವಾದಲ್ಲಿ ಹೆಚ್ಚು ಹಣವನ್ನು ದಾನಮಾಡಿದಲ್ಲಿ ನಾವು ಅದನ್ನು ಈ ಕಾರ್ಯಕ್ಕೆಂದೇ ಮೀಸಲಾಗಿಡುತ್ತೇವೆ. ಧನಸಹಾಯ ಮಾಡಿದ ನಮ್ಮ ಎಲ್ಲಾ ಬೆಂಬಲಿಗರನ್ನು ನಮ್ಮ ವಾರ್ಷಿಕ ಪತ್ರಿಕೆಯಾದ ‘ಸ್ವರ್ಣಸೇತು’ ವಿನಲ್ಲಿ ನಿಮ್ಮ ಕುಟುಂಬದ ಭಾವಚಿತ್ರವನ್ನು ಪ್ರಕಟಿಸುವುದರ ಮೂಲಕ ಮತ್ತು ವರ್ಷವಿಡೀ ಹಲವು ವಿಧಗಳಲ್ಲಿ ಗುರುತಿಸಿ ಗೌರವ ನೀಡಬೇಕೆಂದು ಯೋಚಿಸುತ್ತಿದ್ದೇವೆ. ಎಲ್ಲ ಸದಸ್ಯರಿಗೂ ನಮ್ಮ ಕಳಕಳಿಯ ಪ್ರಾರ್ಥನೆಯೇನೆಂದರೆ ದಯವಿಟ್ಟು ಧನ ಸಹಾಯ ಮಾಡಿ ನಿಮ್ಮ ಬೆಂಬಲ ನೀಡಿ ಕನ್ನಡ ಕೂಟವನ್ನು ಪೋಷಣೆ ಮಾಡಿ. ನಮ್ಮ ಈ ಯೋಜನೆಯಲ್ಲಿ ನಿಮ್ಮ ಬೆಂಬಲವಿದೆ ಎಂದು ನಾವು ಸಂಪೂರ್ಣವಾಗಿ ನಂಬಿದ್ದೇವೆ. ನಿಮ್ಮ ವಿವರಗಳೊಂದಿಗೆ ಕೊಡುಗೆಯ ಮೊತ್ತವನ್ನು ಇಲ್ಲಿ ತಿಳಿಸಿ. https://goo.gl/forms/NhhqDyqRxLfMlQjn2
    ಧನ್ಯವಾದಗಳು
    ಕೆ.ಕೆ.ಏನ್.ಸಿ ಕಾರ್ಯನಿರ್ವಾಹಕ ಸಮಿತಿ
    *****************************************************************************

    Dear KKNC friends

    Build a reserve for bringing good artists for KKNC programs, in return your family photo in the Swarnasethu.

    As you all know (also hope you agree with us) that with the sky rocket price for the event halls and other expenses bringing quality programs with limited membership fees is quite a stretch.
    We need your support to build a reserve for bringing good artists and also conducting workshops and presenting high-quality programs a donation of $200 or more will help.
    We want to recognize all such supporters in many ways throughout the year and also in our signature annual magazine Swarnasethu having your family photo.
    Once again all supporters/patrons will be recognized in Swarnasethu for their significant contribution. Thanks in advance.
    We look forward to your support. Please add your details with donation amount in the following form. We will contact you.
    https://goo.gl/forms/NhhqDyqRxLfMlQjn2

    Thank you
    KKNC 2017 Executive committee and leads

    ಯುಗೋತ್ಸವ ಕಾರ್ಯಕ್ರಮಕ್ಕೆ ನಾವು ಭಾರತದಿಂದ ಅದ್ಭುತ ಕಲಾವಿದರನ್ನು ಕರೆಸುತ್ತಿದ್ದೇವೆ. ಈ ವರ್ಷ ನಾವು “ಜಾನಪದ ಕಲೆ” ಯನ್ನು ಮುಖ್ಯ ವಿಷಯವಾನ್ನಾಗಿಟ್ಟುಕೊಂಡಿರುವುದರಿಂದ ಜಾನಪದ ಕಲೆಯ ಜಗತ್ತಿನಲ್ಲಿ ಅಪಾರ ಸೇವೆ ಸಲ್ಲಿಸಿರುವಂತಹವರನ್ನು ನಿಮ್ಮ ಮನರಂಜನೆಗಾಗಿ ಮತ್ತು ಆಸಕ್ತರಿಗೆ ಜಾನಪದ ಕಲೆಯನ್ನು ಕಲಿಸಲು ಕಾರ್ಯಾಗಾರಗಳನ್ನು ನಿರ್ಮಿಸಲು ಅತಿಥಿಗಳಾಗಿ ಶ್ರೀ ಬಸಲಿಂಗಯ್ಯ ಹಿರೇಮಠ ಮತ್ತು ಶ್ರೀಮತಿ ವಿಶ್ವೇಶ್ವರಿ ಬಸಲಿಂಗಯ್ಯ ಅವರನ್ನು ಆಹ್ವಾನಿಸಿ ಬರಮಾಡಿಕೊಳ್ಳುತ್ತಿದೇವೆ. ಶ್ರೀ ಬಸಲಿಂಗಯ್ಯ ಹಿರೇಮಠ ಅವರು ಕಿತ್ತೂರಿನ ಜಾನಪದ ಸಂಶೋಧನಾ ಕೆಂದ್ರದ ಅದ್ಯಕ್ಷರಾಗಿದ್ದಾರೆ ಮತ್ತು ಶ್ರೀಮತಿ ವಿಶ್ವೇಶ್ವರಿ ಬಸಲಿಂಗಯ್ಯ ಅವರು ರಂಗ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದಾರೆ. ದೂರದರ್ಶನ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿ ಅಪಾರ ಮನ್ನಣೆ ಮತ್ತು ಹಲವು ಪುರಸ್ಕಾರಗಳನ್ನು ಗಳಿಸಿ, ದೇಶ ವಿದೇಶಗಳಲ್ಲಿ ಬಯಲಾಟದ ಪ್ರದರ್ಶನ ನೀಡಿ ಜಾನಪದ ಕಲೆಯ ಪುನರುಜ್ಜೀವನ ಕಾರ್ಯದಲ್ಲಿ ನಿರತರಾಗಿರುವ ನಮ್ಮ ಈ ಅತಿಥಿಗಳು ಯುಗೋತ್ಸವದಲ್ಲಿ “ಕೃಷ್ಣಪಾರಿಜಾತ” ಎಂಬ ಬಯಲಾಟವನ್ನು ಪ್ರದರ್ಶನ ಮಾಡಲೆಂದು ಇಲ್ಲಿನ ಕಲಾವಿದರಿಗೆ ರಂಗಗೀತೆಗಳನ್ನು, ನಟನೆಯನ್ನು ಕಲಿಸಲು ಕಾರ್ಯಾಗಾರ ಶಿಭಿರವೊಂದನ್ನು ಮಾರ್ಚ್ ೨೪ ರಿಂದ ಏಪ್ರಿಲ್ 8 ರವರೆಗೆ ಏರ್ಪಡಿಸಲಾಗಿದೆ. ಆಸಕ್ತರು ಇಲ್ಲಿ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ. ಮತ್ತು ಈ ಶಿಭಿರದಲ್ಲಿ ಭಾಗವಹಿಸಿ ಇದರ ಉಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.
    https://goo.gl/forms/EnxFOIOKE3iZarz73

    *****************************************************************************

    We have amazing artists coming from India to entertain and conduct workshops for all of us.
    Sri Baslingiah Hiremath & Srimathi Vishveshwari Hiremath, a well-known artists from India in the field of Karnataka folk art are invited to conduct workshop on “Krishnaparijaata” to train local talents in singing rangageethegaLu & to teach acting to the local artists. The workshop will be held from March 24th to April 8th 2017. Please register here for the workshop & make use of this great opportunity to learn & perform in Yugothsava.
    https://goo.gl/forms/EnxFOIOKE3iZarz73

    *****************************************************************************

    ವಾಲಿಬಾಲ್ ಮತ್ತು ಥ್ರೋ ಬಾಲ್ ಪಂದ್ಯಾವಳಿ
    ಬೇ ಏರಿಯಾದಲ್ಲಿ ಮೊಟ್ಟಮೊದಲ ಬಾರಿಗೆ ಕೆ.ಕೆ.ಎನ್‍.ಸಿ ಹೆಮ್ಮೆಯಿಂದ ಸಾದರಪಡಿಸುವ ೨೦೧೭ ರ ವಾಲಿಬಾಲ್ ಮತ್ತು ಥ್ರೊ ಬಾಲ್ ಪಂದ್ಯಾವಳಿ. ಈ ಪಂದ್ಯಾವಳಿ ಕೇವಲ ಕನ್ನಡಿಗರಿಗೆ ಮಾತ್ರ ಸೀಮಿತವಾಗಿರದೆ, ಕೊಲ್ಲಿ ಪ್ರದೇಶದ ಇತರ ಸಮುದಾಯಗಳಿಗೂ ಅನ್ವಯಿಸುವುದು. ಇದರ ನಿವ್ವಳ ಆದಾಯವನ್ನು ಅನಾಥಾಶ್ರಮಗಳು & ಕುರುಡು ಶಾಲೆಗೆ ದಾನ ಮಾಡಲಾಗುವುದರಿಂದ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಕೋರಿಕೊಳ್ಳುತ್ತೇವೆ.
    ದಿನಾಂಕ: ಶನಿವಾರ ಏಪ್ರಿಲ್ ೧೫ – ೨೦೧೭
    ಸ್ಠಳ: ಲೇಕ್ ವುಡ್ ಪಾರ್ಕ್, ೮೩೪ ಲೇಕ್ ಚೈಮ್ ಡ್ರೈವ್ , ಸನ್ನಿವೇಲ್ , ಸಿಎ ೯೪೦೮೯

    ವಾಲಿಬಾಲ್ ಮತ್ತು ಥ್ರೊ ಬಾಲ್ ಪಂದ್ಯಗಳಿಗೆ ನೋಂದಾವಣಿ ಏಪ್ರಿಲ್ ೧೫ ಬೆಳಿಗ್ಗೆ ಎಂಟು ಗಂಟೆಗೆ ಪ್ರಾರಂಭಿಸಲಾಗುತ್ತದೆ.
    ತಂಡದ ವಿವರ ಹೀಗಿದೆ
    ವಾಲಿಬಾಲ್ ತಂಡದ ಗಾತ್ರ: ೬ ಜನ ಮುಖ್ಯ ಆಟಗಾರರು, ಇಬ್ಬರು ಉಪ ಆಟಗಾರರು
    ಥ್ರೊ ಬಾಲ್: ೫ ಜನ ಮುಖ್ಯ ಆಟಗಾರರು, ಇಬ್ಬರು ಉಪ ಆಟಗಾರರು

    ಈಗಾಗಲೇ ತಂಡಗಳನ್ನು ಹೊಂದಿರುವ ಆಟಗಾರರು, ನಿಮ್ಮ ತಂಡವನ್ನು ಇಲ್ಲಿ ನೋಂದಾಯಿಸಿಕೊಳ್ಳಿ
    https://docs.google.com/spreadsheets/d/1AcHJXhFdmOmO1tjTYebzG6oJO_0UEhbx...

    ಯಾವುದೇ ತಂಡಗಳಿಗೆ ಸೇರದ ವೈಯಕ್ತಿಕ ಆಟಗಾರರು, ಇಲ್ಲಿ ನೋಂದಾಯಿಸಿಕೊಳ್ಳಿ. ಪಂದ್ಯಾವಳಿಯ ದಿನ ಕೆ.ಕೆ.ಏನ್.ಸಿ ತಂಡಗಳನ್ನು ರಚಿಸಿ, ನಂತರ ಮಾಹಿತಿಯನ್ನು ನೀಡುವುದು.
    https://docs.google.com/spreadsheets/d/1Awl9KUkdzZgpvvGmeR9I7BAls2Ncus5q...

    ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ ಏಪ್ರಿಲ್ ೧೦ ೨೦೧೭.
    ವೈಯಕ್ತಿಕ ನೋಂದಣಿಯನ್ನಾಗಲಿ ಪಂದ್ಯದ ನೋಂದಣಿಯನ್ನಾಗಲಿ, ಪಂದ್ಯಾವಳಿಯ ದಿನ, ಸ್ಥಳದಲ್ಲೇ, ಎಂಟು ಗಂಟೆಗೆ ನೋಂದಾಯಿಸಿಕೊಳ್ಳಬಹುದು. ಆದರೆ ಎಲ್ಲರೂ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕೆಂದು ಪ್ರಾರ್ಥನೆ. ಇದರಿಂದ ಆಹಾರ ಮತ್ತು ಇತರ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಸಹಾಯವಾಗುವುದು. ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಗಳಿಗೆ, ತಂಡದವರು ತಮ್ಮ ವಾಲಿಬಾಲ್ ಮತ್ತು ಥ್ರೋಬಾಲ್ ಗಳನ್ನು ತಾವೇ ತರಬೇಕು, ಬಾಲ್ ಗಳನ್ನು ಕೆ.ಕೆ.ಏನ್.ಸಿ ಒದಗಿಸುವುದಿಲ್ಲ. ಬಿಗಿನರ್ಸ್ ವಾಲಿಬಾಲ್ ಆಟಗಾರರು ಗೊಲ್ಡ್ ಮತ್ತು ಸಿಲ್ವರ್ ವಿಭಾಗಗಳನ್ನು ದಯವಿಟ್ಟು ತಿಳಿಸಿರಿ.
    ಸಿಲ್ವರ್ ಸೂಚನೆಗಳು: ಕನಿಷ್ಟ ಎರಡು ಉತ್ತಮ ಸ್ಪೈಕರ್ಸ್ ಮತ್ತು ಹಿಂದಿನ ಪಂದ್ಯಾವಳಿಗಳಲ್ಲಿ ನಿಮ್ಮ ತಂಡ ಫ಼ಿನಲ್ ತಲುಪಿರಬಾರದು.
    ನಮಗೆ ಕನಿಷ್ಟ ನಾಲ್ಕು ತಂಡಗಳ ಅಗತ್ಯವಿದೆ. ಇಲ್ಲವಾದಲ್ಲಿ ನಾವು ಬೇರೆ ಹಂತಗಳಲ್ಲಿ ರೂಪಿಸುವೆವು.
    ವೈಯಕ್ತಿಕ ಆಟಗಾರರನ್ನು ನೋಂದಾಯಿಸಲು ಹಾಗು ತಂಡ ರಚಿಸಲು ನಮಗೆ ವಾಲಿಬಾಲ್‍ಗೆ ಕನಿಷ್ಟ ಆರು ಆಟಗಾರರು ಮತ್ತು ಥ್ರೊ ಬಾಲ್‍ಗೆ ಐದು ಆಟಗಾರರ ಅಗತ್ಯವಿದೆ.

    ಆಹಾರದ ಮಾಹಿತಿ
    ಊಟ, ಟೀ, ಕಾಫಿ, ತಿಂಡಿ ಮತ್ತು ನೀರಿನ ಬಾಟಲಿಗಳು ಅತ್ಯಲ್ಪ ಶುಲ್ಕದಲ್ಲಿ ಲಭ್ಯವಿರುತ್ತದೆ.
    ನೋಂದಣಿಗಾಗಲಿ, ಆಹಾರಕ್ಕಾಗಲಿ ಹಣವನ್ನಷ್ಟೇ ತೆಗೆದುಕೊಳ್ಳಲಾಗುವುದು. ಆದ್ದರಿಂದ ನಿಖರವಾಗದ ನಗದನ್ನು ಕೊಟ್ಟು ಸಹಕರಿಸಿ.
    ನಿಮ್ಮ ಸ್ವಸಹಾಯಕ್ಕಾಗಿ ಟೋಪಿ, ಕುರ್ಚಿ, ನೀರು ಮತ್ತು ಸನ್ಸ್ಕ್ರೀನ್ ಲೋಷನ್ ತರಲು ಮರೆಯದಿರಿ.
    ದಯವಿಟ್ಟು ನೆಲದ ಸ್ವಚ್ಛತೆ ಯನ್ನು ಕಾಪಾಡಬೇಕಾಗಿ ವಿನಂತಿ.
    ಈ ಪಂದ್ಯಾವಳಿಯನ್ನು ಒಂದು ಉದಾತ್ತ ಕಾರಣಕ್ಕೆಂದು ಏರ್ಪಡಿಸಲಾಗಿರುವುದರಿಂದ ಯಾವುದೇ ಘರ್ಷಣೆ, ವಾದವಿವಾದ, ಗಲಭೆಗಳಿಗೆ ಎಡೆಕೊಡದೆ ಸಹರಿಸಬೇಕಾಗಿ ಕೋರುತ್ತೇವೆ. ತಂಡಗಳ ನಡುವೆ ಘರ್ಷಣೆ, ವಾದವಿವಾದವಾದಲ್ಲಿ ಆಯಾ ತಂಡದ ನಾಯಕರುಗಳು ಮಾತ್ರ ಮಾತನಾಡಲು ಅವಕಾಶವಿರುತ್ತದೆ. ಮಿತಿಮೀರುವಂತಹ ಸಂದರ್ಭ ಬಂದಲ್ಲಿ ಕೆ.ಕೆ.ಏನ್.ಸಿ ಯು ಯಾವುದೇ ತಂಡವನ್ನು ಸ್ಪರ್ಧೆಯಿಂದ ಹೊರಗಿಡುವ ಅಧಿಕಾರವನ್ನು ಹೊಂದಿರುತ್ತದೆ
    *****************************************************************************
    KKNC presents Volleyball and Throw ball tournament for the first time in Bay Area.

    This event is open to all communities. Since the net proceeds will be donated to orphanages & blind school, we request you all to participate in huge number and help us for the noble cause.
    This is open to all communities across bay area and is not restricted to Kannada community.
    Date: April 15th 2017 - Saturday
    Venue: Lakewood Park, 834 Lakechime Dr, Sunnyvale, CA 94089
    Registration starts at 8.00 AM on the tournament day for Volleyball and Throw ball.
    Volleyball Team size: 6 Main Players and 2 Sub
    Throw ball: 5 Main players and 2 Sub
    Here is the google sheet link for registration.
    Individual player who don’t have team with them can register in the below google sheet and later KKNC will form a team on the tournament day and communicate accordingly:
    https://docs.google.com/spreadsheets/d/1Awl9KUkdzZgpvvGmeR9I7BAls2Ncus5q...
    And those who have team with them can register here in the below google sheet:
    https://docs.google.com/spreadsheets/d/1AcHJXhFdmOmO1tjTYebzG6oJO_0UEhbx...
    We will also have spot registration on the tournament day which starts at 8.00 AM but prefer everyone to register in advance which will help us in logistics like food and other arrangements etc.
    Online Registration ends on 10th April 2017.
    Important Note: Volley ball and Throw ball – Individual team has to bring their own ball. KKNC will not provide the balls.
    Beginners Volleyball: Please specify Gold and Silver sections properly.
    Guidelines for Silver:
    Less than 2 good spikers and your team did not enter the finals in previous tournaments.
    We need at least 4 teams or else we will combine with different levels.
    For individual player registration we need min of 6 players for volley ball and 5 players to form a team.

    FOOD INFO:
    Lunch, Tea, coffee, Snacks and water bottles will be available on nominal fee
    Please bring cash and tender exact changes for the tournament for registrations / food etc.
    Get hats, sunscreen lotion, chairs etc. Keep yourself hydrated at all the times.
    Please keep the ground clean and put all the waste items, bottles in the trash box.
    This tournament is for noble cause. KKNC requests co-operation from all of the teams in case of conflicts / arguments. KKNC will have all reserve to disqualify any team/s due to un-supportive arguments. Only respective team captains should talk in case of any issues/conflicts or clarification.

    *****************************************************************************

    Sankranti - Suggi Jatri!

    ನಮಸ್ಕಾರ,
    ಸ್ನೇಹಿತರೆ ಜಾನಪದ ದಿಗ್ಗಜ ಶಂಭು ಬಳೆಗಾರವರು ನಮ್ಮ ಇಳಕಲ್ ತಾಲೂಕಿನವರು,ಅವರು ನಮ್ಮೊಂದಿಗೆ ಸಂಜೆ ಭೆಟ್ಟಿಯಾಗಿ ಸ್ವಲ್ಪ ಸಮಯಕಳೆಯುವ ಸದೈವಕಾಶ್.

    ಪ್ರಥಮಬಾರಿಗೆ ಜಾನಪದ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದ ನಮ್ಮ ಉತ್ತರ ಕರ್ನಾಟಕದರನ್ನು ಭೇಟಿ ಮಾಡಿ ಹರಟಿ ಹೊಡ್ಯೂವ ಅವಕಾಶ .
    ಅವರೊಂದಿಗೆ ವಿಶೇಷ ವಿಷಯಗಳ ಪರಿಚಯನು ಮಾಡಕೋಳುಣು,ನಾವೆಲ್ಲ ಮರೆತಿರುವ ಜಾನಪದ ಹಾಡು ಕೇಳುನು ..ಎಲ್ಲರೂ ಮತ ...
    ಹಂಗಾದ್ರ ರಿಜಿಸ್ಟರ್ ಮಾಡ್ರಿ ... ತಡಾ ಯಾಕ

    http://evite.me/QcTM1Av3PK

    Great opportunity to meet and spend an evening with Janapada Scholar Dr. Shambu Baligar along with dinner. Please click the evite and RSVP as the seats are limited, Hurry up !!

    http://evite.me/QcTM1Av3PK

    *****************************************************************************

    Sankranti - Suggi Jatri

    ಕನ್ನಡ ಕೂಟದ ಬಾಂಧವರೇ,

    ನೀವೆಲ್ಲರೂ ನಿಮ್ಮ ನಿಮ್ಮ ಬಂಧು ಭಾಂದವರೊಂದಿಗೆ ಉಲ್ಲಾಸದ ರಜಾ ದಿನಗಳನ್ನು ಮುಗಿಸಿ ಹೊಸ ವರ್ಷದಲ್ಲಿ ಹುರುಪಿನ ದಿನಗಳನ್ನು ಪ್ರಾಂಭಿಸಿದ್ದೀರೆಂದು ನಂಬಿದ್ದೇವೆ. ಅಂತೆಯೇ ಕನ್ನಡ ಕೂಟ ೨೦೧೭ ರ ಕಾರ್ಯಕಾರಿ ಸಮಿತಿಯ ಸದಸ್ಯರು ಕೂಡ ಹೊಸ ವರ್ಷದ ಕಾರ್ಯಕ್ರಮಗಳನ್ನು ಬಹಳ ಹುರುಪಿನಿಂದ ಪ್ರಾಂಭಿಸಿದ್ದೇವೆ. ನಮ್ಮೆಲ್ಲಾ ಕಾರ್ಯಕ್ರಮಗಳಲ್ಲಿ ಮತ್ತು ಹುರುಪಿನಲ್ಲಿ ಭಾಗವಹಿಸಲು ನಿಮಗೆಲ್ಲರಿಗೂ ಹೃತ್ಪೂರ್ವಕ ಆಹ್ವಾನವನ್ನು ನೀಡುತ್ತೇವೆ. ಬನ್ನಿ ಮತ್ತೊಂದು ಸಂತಸಭರಿತ ವರ್ಷವನ್ನು ಅನುಭವಿಸೋಣ. ಈ ವರ್ಷದ ನಮ್ಮ ಮೊಟ್ಟ ಮೊದಲ ಕಾರ್ಯಕ್ರಮವಾದ ಸಂಕ್ರಾಂತಿ ಆಚರಣೆಯ "ಸುಗ್ಗಿ ಜಾತ್ರಿ" ಗೆ ನಮ್ಮ ಕನ್ನಡ ಕೂಟದ ಎಲ್ಲಾ ಪ್ರತಿಭಾವಂತ ನಿರ್ದೇಶಕರಿಗೂ ಈ ಮೂಲಕ ತಮ್ಮ ಕಾರ್ಯಕ್ರಮಗಳನ್ನು ನೊಂದಾಯಿಸಿಕೊಳ್ಳಲು ಕೋರಿಕೊಳ್ಳುತ್ತೇವೆ. "ಕರ್ನಾಟಕ ಜಾನಪದ ಜಗತ್ತು" ಇದು ನಮ್ಮ "ಸುಗ್ಗಿ ಜಾತ್ರಿ" ಯ ಮುಖ್ಯ ವಿಷಯವಾಗಿರುವುದರಿಂದ ಎಲ್ಲಾ ಕಲಾತಂಡ ನಿರ್ದೇಶಕರು ಕರ್ನಾಟಕ ಜಾನಪದ ಜಗತ್ತಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ನಿರ್ದೇಶಿಸಲು ಕೋರಿಕೊಳ್ಳುತೇವೆ. ಹೆಚ್ಚಿನ ವಿವರಕ್ಕಾಗಿ ನೀವು ಸಂಪರ್ಕಿಸಬೇಕಾದ ಇ-ಅಂಚೆ... [email protected]

    ಇಲ್ಲಿ ನಿಮ್ಮ ಕಾರ್ಯಕ್ರಮಗಳನ್ನು ನೊಂದಾಯಿಸಿಕೊಳ್ಳಿ https://goo.gl/zD7yqX

    ಕರ್ನಾಟಕದ ಜಾನಪದ ಕಲೆಗಳನ್ನು ಪೋಷಿಸುವುದು ಮತ್ತು ನಮ್ಮ ಮುಂದಿನ ಪೀಳಿಗೆಗೆ ಆ ಕಲೆಗಳನ್ನು ಪರಿಚಯಿಸುವುದು ಈ ವರ್ಷದ ಸಮಿತಿಯ ಮುಖ್ಯ ಧ್ಯೇಯವಾಗಿದೆ. ನಮ್ಮ ತಂಡವು ವ್ಯಾಪಕವಾಗಿ ಈ ನಿಟ್ಟಿನಲ್ಲಿ ಕೆಲಸಮಾಡುತ್ತಿದ್ದು ಜಾನಪದ ಕಲೆಗಳು ಮತ್ತು ಕೆಲವು ಕಲಾವಿದರ ಹೆಸರುಗಳನ್ನು ಪಟ್ಟಿ ಮಾಡುತ್ತಿದ್ದೇವೆ. ನಿಮಗೇನಾದರೂ ಉತ್ತಮವಾದ ಜಾನಪದ ಕಲಾವಿದರ ಪರಿಚಯವಿದ್ದಲ್ಲಿ ಅಥವಾ ಸೂಚನೆಗಳಿದ್ದಲ್ಲಿ ತಕ್ಷಣವೇ ನಮ್ಮನ್ನು ಸಂಪರ್ಕಿಸಿ.

    ಈ ಮುಂದೆ ನಾವು ಮುಂದುವರೆಸಿ ಸಾಧಿಸಲು ಬಯಸುವ ಕೆಲವು ಪ್ರಮುಖ ವಿಷಯಗಳು ಹೀಗಿವೆ

    1. ನಾವು ಕೆ.ಕೆ.ಏನ್.ಸಿ ಟ್ಯಾಲೆಂಟ್ ಪೂಲ್ / ಡೇಟಾಬೇಸ್ ರಚಿಸಲು ಯೋಜನೆ ಮಾಡಿದ್ದೇವೆ. ಇದರಿಂದ ಎಲ್ಲ ಪ್ರತಿಭಾವಂತ & ಆಸಕ್ತಿಯುತ ಕಲಾವಿದರಿಗೂ ಕೆ.ಕೆ.ಏನ್.ಸಿ ವೇದಿಕಯಲ್ಲಿ ನ್ಯಾಯಯುತ ಅವಕಾಶ ಸಿಗುತ್ತದೆ. ಆದ್ದರಿಂದ, ದಯವಿಟ್ಟು ಅಂತಹ ಆಸಕ್ತಿಯುತ ಕಲಾವಿದರು ನಿಮ್ಮ ಪ್ರತಿಭೆ / ಕೌಶಲ್ಯಗಳ (ನೃತ್ಯ, ಸಂಗೀತ, ನಾಟಕ, ವಾದ್ಯ ಸಂಗೀತ , ನಿರೂಪಣೆ ಇತ್ಯಾದಿ) ವಿವರಗಳೊಂದಿಗೆ ನಮ್ಮನ್ನು ಸಂಪರ್ಕಿಸಿ. ನಾವು ನಂತರ ಕಾರ್ಯಕ್ರಮದ ನಿರ್ದೇಶಕರುಗಳೊಂದಿಗೆ ಇಂತಹ ಪ್ರತಿಭೆಯನ್ನು ತಮ್ಮ ತಂಡಗಳಲ್ಲಿ ಅಳವಡಿಸಲು & ಧ್ವನಿಪರೀಕ್ಷೆ ಮಾಡಲು ಅವರ ಜೊತೆ ಕೆಲಸ ಮಾಡುತ್ತೇವೆ.

    2. ನಮ್ಮ ಕನ್ನಡ ಕೂಟವು ಹಲವಾರು ಸಂಗೀತ ವ್ಯಾಪಕ ಯುವ ಪ್ರತಿಭೆಯನ್ನು ಹೊಂದಿದೆ. ಈ ವರ್ಷದ ಸಮಿತಿಯು ಇಂತಹ ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಅಧಿಕೃತ ಯುವ ಕೆ.ಕೆ.ಏನ್.ಸಿ ಬ್ಯಾಂಡ್ ಮಾಡಲು ಯೋಚಿಸಿದ್ದೇವೆ. ಆಸಕ್ತರು ಈ ಮೇಲಿನ ಈ-ಅಂಚೆಗೆ ನಿಮ್ಮ ಯುವ ಪ್ರತಿಭೆಯ ವಿವರದೊಂದಿಗೆ ಸಂಪರ್ಕಿಸಿ

    ನೀವೆಲ್ಲರೂ ನಮ್ಮ ಸಮಿತಿಯೊಂದಿಗೆ ಕೈಗೂಡಿಸಿದರೆ ಈ ಧ್ಯೇಯಗಳನ್ನು ತಲುಪುವಲ್ಲಿ ಸಂದೇಹವೇ ಇಲ್ಲ.

    ದಯವಿಟ್ಟು ನಿಮ್ಮ ಸದಸ್ಯತ್ವಗಳು ನವೀಕರಿಸಿಕೊಳ್ಳಿ (goo.gl/sUl8AC) ಜೊತೆಗೆ ನಿಮ್ಮ ಹೊಸ ಸ್ನೇಹಿತರುಗಳನ್ನೂ ಕರೆತನ್ನಿ. ಎಲ್ಲರೂ ಕೂಡಿ ಸಂತಸದ ವರುಷವನ್ನು ಕಳೆಯೋಣ

    ಕೆಲವು ಗಡುವುಗಳನ್ನು ಗಮನಿಸಿ
    "ಸುಗ್ಗಿ ಜಾತ್ರಿ" ಗೆ ನಿರ್ದೇಶಕರು ತಮ್ಮ ಕಾರ್ಯಕ್ರಮವನ್ನು ವಿವರಸಹಿತ ನೊಂದಾಯಿಸಲು ಕೊನೆಯ ದಿನಾಂಕ ಜನವರಿ ೨೨ ೨೦೧೭ (Jan 22 2017)

    ಟ್ಯಾಲೆಂಟ್ ಪೂಲ್ ಸಲ್ಲಿಕೆಗೆ ಕೊನೆಯ ದಿನಾಂಕ ಜನವರಿ ೧೫ ೨೦೧೭ (Jan 15 2017)

    ಯುವ ಬ್ಯಾಂಡ್ ಸಲ್ಲಿಕೆಗೆ ಕೊನೆಯ ದಿನಾಂಕ ಜನವರಿ ೧೫ ೨೦೧೭ (Jan 15 2017)

    "ಸುಗ್ಗಿ ಜಾತ್ರಿ" ಯ ಮಾಹಿತಿ:

    ಯಾವಾಗ: ಫೆಬ್ರವರಿ ೧೮ ೨೦೧೭ (ಶನಿವಾರ) (Feb 18 2017)

    ಎಲ್ಲಿ: ಅಡಿಗುಡ್ಡ ಪದವಿ ಶಿಕ್ಷಣ ಸಭಾಂಗಣದಲ್ಲಿ (ಫುಟ್ ಹಿಲ್ ಕಾಲೇಜ್ ಸಭಾಂಗಣದಲ್ಲಿ)

    ಸಮಯ: ಸಂಜೆ ೪.೦೦ ಘಂಟೆಗೆ (Evening 4 pm)

    *****************************************************************************

    ಈ ವರ್ಷದ ಕಾರ್ಯಕಾರಿ ಸಮಿತಿಯು ಕೆಲವು ಹೊಸ ಉಪಕ್ರಮಗಳನ್ನು ಯೋಚಿಸಿದೆ.

    1. ಐ -ಕೆ.ಕೆ.ಏನ್.ಸಿ ಆಪ್ ಅಭಿವೃದ್ಧಿ - ಐಒಎಸ್ ಮತ್ತು ಆಂಡ್ರಾಯ್ಡ್ ಸಾಧನಗಳೆರಡಕ್ಕೂ ಐ -ಕೆ.ಕೆ.ಏನ್.ಸಿ ಆಪ್ ಅಭಿವೃದ್ಧಿಯೋಜನೆ (ಯುವ ಸದಸ್ಯರು ಮತ್ತು ವಯಸ್ಕ ಮುಖಂಡರು ಒಟ್ಟಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡುವ ಒಂದು ಯೋಜನೆ )

    2. ಕೆ.ಕೆ.ಏನ್.ಸಿ ಉದ್ಯೋಗ ಸಂಪರ್ಕ - ಉದ್ಯೋಗಾವಶ್ಯಕವಿರುವ ಕೆ.ಕೆ.ಏನ್.ಸಿ ಸದಸ್ಯರಿಗೆ ಕೆಲಸ ಹುಡುಕಾಟದಲ್ಲಿ ನೆರವಾಗುವಾಗುವ ಒಂದು ಸಮುದಾಯ ಜಾಲ ಅಭಿವೃದ್ಧಿಯೋಜನೆ

    3. ಕೆ.ಕೆ.ಏನ್.ಸಿ ಸೋಲ್ಮೇಟ್ ಪೋರ್ಟಲ್ ( ಜೀವನ ಸಂಗಾತಿಯ ಅನ್ವೇಷಣೆಯಲ್ಲಿರುವ ಸದಸ್ಯರಿಗೆ ನೆರವಾಗುವ ಒಂದು ಸಮುದಾಯ ಜಾಲ ಅಭಿವೃದ್ಧಿಯೋಜನೆ)

    4. ಕನ್ನಡ ಈ-ಗ್ರಂಥಾಲಯ (ಕೆ.ಕೆ.ಏನ್.ಸಿ ಸದಸ್ಯರಿಗೆ ಕನ್ನಡ ಈ-ಪುಸ್ತಕಗಳ ಸಂಗ್ರಹ)

    ಈ ಎಲ್ಲಾ ಉಪಕ್ರಮಗಳು ಯಶಸ್ವಿಯಾಗಲು, ನಮಗೆ ನಿಮ್ಮೆಲ್ಲರ ಸಹಾಯ, ಬೆಂಬಲ ಮತ್ತು ಭಾಗವಹಿಸುವಿಕೆಯ ಅಗತ್ಯವಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಕೆಲಸ ಮಾಡಲು ಈ ಹಿನ್ನೆಲೆಯಿರುವ ವಯಸ್ಕ ಮುಖಂಡರು, ಸ್ವಯಂಸೇವಕರು ಮತ್ತು ಯುವ ಸ್ವಯಂಸೇವಕರನ್ನು ಹುಡುಕುತ್ತಿದ್ದೇವೆ. ನಿಮಗೆ ಈ ಹಿನ್ನೆಲೆಯ ಅನುಭವವಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ ಮತ್ತು ಇಲ್ಲಿ ನೊಂದಾಯಿಸಿಕೊಳ್ಳಿ https://goo.gl/forms/umydM1a1zpychpiT2

    *****************************************************************************

    Namaskara KKNC mitrare,

    We hope everyone has had a wonderful holiday season, that you were able to spend much quality time with your families, and that you are refreshed as we begin to tackle 2017. As we gear up for 2017 with the turn of the new year, we, the 2017 KKNC team extend you all a warm welcome for another fun filled year at KKNC. Yes, the 2017 KKNC team is already in the works leading to the Sankranti celebrations & we would like to invite all our talented program directors to submit their entries to the Entertainment team [email protected].

    The theme for Sankranti is Folk, and the celebration is named "Suggi Jatri".

    Our focus is to nurture and make our newer generations familiar with the folk arts of Karnataka. The 2017 KKNC team is working towards this extensively and are shortlisting some of the folks arts & artists. If you know of a folk artist who is extremely good and would like to have them perform on KKNC stage, then please reach out to us asap.

    Some of the key things that we want to achieve and continue it going forward,

    1. We are planning to build a KKNC talent pool/database so that everyone who’s talented & interested to perform on KKNC stage gets a fair chance. So, every such interested individual, please send in your entry along with the your talent /skill description ( Dance / Drama / Skits / Choregraphy / Direction / Singing / Music instruments). We will then work out with program directors to incorporate such talents in their teams, upon auditions.

    2. KKNC family has extensive youth talents in Music and we would like to encourage this & make an official youth KKNC band. Please reach out to the aforesaid contact.

    We believe in teamwork and team here isn’t limited to just the executives, leads & volunteers, it also includes you all, the proud supporters of KKNC, the KKNC members & our sponsors. Yes, we are the TEAM & “Together Everyone Achieves More”. Please renew your memberships for 2017 (goo.gl/sUl8AC) & also bring in your new friends to KKNC and be a reason for some extra fun in their lives!!!

    Some deadlines

    1. Programs’ Submission: Jan 22nd 2017

    2. Talent pool submission: Jan 15th 2017

    3. Youth band: Jan 15th 2017

    Event Info:

    When: February 18th 2017 (Saturday)

    Where: Foothill College Auditorium
    Time: 4:00 pm

    *****************************************************************************

    We have thought of few initiatives for KKNC for the year 2017.

    1. iKKNC App Development for both iOS and Android devices(involving youth members and adult Leads)
    2. KKNC Job Connect (to help needy Kannadigas through community networks)
    3. KKNC Soulmate portal (to help eligible ones to find their life partner)
    4. Kannada e-Library (collection of Kannada books online for KKNC Members)

    In order to make these initiatives happen, we need all your support, inputs and help.

    Hence, we are looking for Adult Leads, volunteers and youth volunteers to help us on these intiatives:

    1. App Development (iOS and Android tracks – we have a team by now and looking for some more volunteers)
    2. Youth volunteers with any App development knowledge and interested in App development for iOS and Android tracks.
    3. Web Developers
    4. Graphics designers for creating logo/s, App icons, portal pages, etc

    Please find here is the link for sign-up:
    https://goo.gl/forms/umydM1a1zpychpiT2

    Cheers,
    Team KKNC 2017

    *****************************************************************************

    Welcome to 2017 - KKNC begins its 44th Year !!

    ಪ್ರೀತಿಯ ಸ್ನೇಹಿತರೇ,

    ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಎಲ್ಲಾ ಸದಸ್ಯರಿಗೂ, ಮಿತ್ರರಿಗೂ ೨೦೧೭ ರ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯು ಮಾಡುವ ನಮಸ್ಕಾರಗಳು. ಆತ್ಮೀಯ ಕನ್ನಡ ಬಾಂಧವರೇ ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ಹೊಸ ವರ್ಷವು ನಿಮಗೆಲ್ಲರಿಗೂ ಆಯುರಾರೋಗ್ಯ, ಸಂತೋಷ, ಶಾಂತಿ, ನೆಮ್ಮದಿಗಳನ್ನು ತರಲಿ ಎಂದು ಆಶಿಸುತ್ತೇವೆ.

    ೨೦೧೬ ರ ಅಧ್ಯಕ್ಷರಾದ ಪ್ರದೀಪ್ ನಡುತೋಟ ಮತ್ತು ಅವರ ತಂಡದವರು ೨೦೧೬ ರ ಎಲ್ಲಾ ಕಾರ್ಯಕ್ರಮಗಳನ್ನು ಅತ್ಯಂತ ಅಮೋಘವಾಗಿ ಮತ್ತು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಇದಕ್ಕಾಗಿ ಅವರಿಗೆ ನಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಈ ಹೊಸ ವರ್ಷದಲ್ಲಿ ಹೊಸ ಕಾರ್ಯಕಾರಿ ಸಮಿತಿಯು ಕಾರ್ಯಾರಂಭ ಮಾಡಲು ಸಿದ್ಧರಾಗಿದ್ದೇವೆ . ಈ ನಮ್ಮ ಸಮಿತಿಯು ಹಲವಾರು ಸ್ವಯಂಸೇವಕರಿಂದ ಮತ್ತು ಬೆಂಬಲಿಗರಿಂದ ಕೂಡಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ತಮ್ಮೆಲ್ಲರ ಸಹಾಯ,ಸಹಕಾರ, ಬೆಂಬಲ ಹಾಗೂ ಪಾಲ್ಗೊಳ್ಳುವಿಕೆಯ ಭರವಸೆಯೊಂದಿಗೆ ನಾವು ಈ ವರ್ಷವನ್ನು ಆರಂಬಿಸುತ್ತಿದೇವೆ. ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ದಲ್ಲಿ ಕನ್ನಡದ ಬೆಳವಣಿಗೆಗೆ ಈ ನಿಮ್ಮ ಕನ್ನಡ ಕೂಟ 43ಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡುತ್ತಿದೆ. ಆ ಹೆಮ್ಮೆಯ ಜವಾಬ್ದಾರಿಯನ್ನು ಮುಂದುವರಿಸಲು ನಿಮ್ಮ ಬೆಂಬಲ ಸದಾ ನಮಗೆ ಇರುತ್ತದೆ ಎಂದು ನಮ್ಮ ನಂಬಿಕೆ. ಈ ವರ್ಷದ ಕಾರ್ಯಕಾರಿ ಸಮಿತಿಯ ಕ್ರಮಾನುಗತ ಹೀಗಿದೆ

    ಈ ವರ್ಷ ನಾವು ನಮ್ಮ ಜಾನಪದ ಜಗತ್ತಿನೆಡೆಗೆ ಅವಲೋಕಿಸುವುದನ್ನು ಮುಖ್ಯ ಧ್ಯೇಯವಾಗಿಡುವುದರೊಂದಿಗೆ ಆರೋಗ್ಯ ಮತ್ತು ಕ್ರೀಡೆಯಲ್ಲಿ ಹೆಚ್ಚು ಗಮನವಹಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುವ ಯೋಜನೆಯಲ್ಲಿದ್ದೇವೆ. ಜೊತೆಗೆ ನಮ್ಮಎಲ್ಲ ಕಾರ್ಯಗಳಲ್ಲಿ ಯುವ ಮಕ್ಕಳನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಯೋಜನೆಯನ್ನು ಸಹ ಮಾಡುತ್ತಿದ್ದೇವೆ. ನಿಮೆಲ್ಲರ ಸಹಕಾರವಿದ್ದಲ್ಲಿ ನಾವು ಯಶಸ್ವಿಯಾಗುವುದರಲ್ಲಿ ನಮಗೆ ಸಂದೇಹವೇ ಇಲ್ಲ.

    ನಮ್ಮ ಮುಂಬರುವ ಕೆಲವು ಕಾರ್ಯಕ್ರಮಗಳ ಮಾಹಿತಿ ಹೀಗಿದೆ . ದಯವಿಟ್ಟು ನಿಮ್ಮ ಕ್ಯಾಲೆಂಡರ್ ನಲ್ಲಿ ಗುರುತು ಹಾಕಿಕೊಳ್ಳಿ.
    ಫೆಬ್ರವರಿ ೧೮ ಶನಿವಾರ ಸಂಕ್ರಾಂತಿ ಹಬ್ಬವನ್ನು ಫೂಟ್ ಹಿಲ್ ಕಾಲೇಜಿನ ಸಭಾಂಗಣದಲ್ಲಿ ಆಚರಿಸೋಣ
    ಏಪ್ರಿಲ್ ೯ ಭಾನುವಾರ ಯುಗಾದಿ ಹಬ್ಬವನ್ನು ಚಾಬೊಟ್ ಕಾಲೇಜಿನಿ ಸಭಾಂಗಣದಲ್ಲಿ ಆಚರಿಸೋಣ
    ಆಗಸ್ಟ್ ೧೮-೧೯-೨೦ ಕ್ಯಾಂಪಿಂಗ್ ಇರುತ್ತದೆ, ಹೆಚ್ಚಿನ ಮಾಹಿತಿ ಮುಂದಿನ ಸುದ್ದಿಪತ್ರ ದಲ್ಲಿ ತಿಳಿಸಲಾಗುವುದು.

    ಇವೆಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಲು ನೀವೆಲ್ಲರೂ ಇಂದೇ ಸದಸ್ಯರಾಗುವುದು ಅತ್ಯವಶ್ಯಕ. ಆದ್ದರಿಂದ ತಡ ಮಾಡದೆ ಇಂದೇ ಈಗಲೇ ದಯವಿಟ್ಟು ಸದಸ್ಯರಾಗಿ ಎಂದು ಕೋರಿಕೊಳ್ಳುತೇವೆ - goo.gl/sUl8AC

    Dear members and friends of KKNC,
    The new KKNC 2017 committee wishes you all a very Happy & a prosperous New Year. We hope that the New Year brings you health, wealth & peace in your life. We thank & Congratulate last year President Pradeep Naduthota and his team for their excellent job in 2016. The new committee is all ready to take on the jobs in 2017. Our committee is filled with enthusiastic volunteers and supporters and like every year we look forward to your help, support and participation. KKNC is working towards the development of Kannadigas in SF and bay area for a long time. We proudly carry forward this work and it’s our firm belief that your support will be with us going forward. This year’s executive committee’s detail is as follows:

    This year we are focusing more on the folk culture of Karnataka along with the programs on health and sports. We are also looking to engage with youth more and more this year. We are sure that with your help we will be very successful. Following are some of the programs for this year, please mark your calendar
    Sankranthi celebration on Saturday February 18th at Foot Hill College Auditorium in Los Altos
    Yugadi celebration on Sunday April 9th at Chabot College Auditorium in Hayward. Camping will be in August 18-19-20. More information will be sent in our future News letters.

    In order for these programs to be successful, it’s important you be a member of KKNC today. So please, come forward and become a member by clicking this link.

    We will send you more information on our first program, Sankranti in our next newsletter.

    Thank you.
    KKNC 2017 Executive Team

    ಕನ್ನಡೋತ್ಸವ ಸೆಪ್ಟೆಂಬರ ೧೭ರಂದು ಶಬೊ ಕಾಲೇಜುನಲ್ಲಿ !!

    We are inviting 15 Well Known Artists from India to felicitate them as part of this event. So, please join us in welcoming them and honor them for their achievements in the music industry

    ಕನ್ನಡ ಕೂಟದ 2016ರ ತಂಡ ಈ ಬಾರಿ ಕನ್ನಡೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ ೧೭ರಂದು ಶಬೊ ಕಾಲೇಜು ಆಡಿಟೋರಿಯಂನಲ್ಲಿ ಆಯೋಜಿಸುತ್ತಿದೆ. ಇದು ದಿನವಿಡೀ ನಡೆಯುವ ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು ,ಅನೇಕ ಚಟುವಟಿಕೆಗಳು ಸಭಾಂಗಣದ ಒಳಗೂ ಹೊರಗೂ ನಡೆಯಲಿವೆ. ಈ ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಚಟುವಟಿಕೆಗಳು ೩ ವಿಭಾಗಳಲ್ಲಿ ನಡೆಯಲಿವೆ.

    1. KKNC Got Talent (Competition)
    2. KKNC ಕನ್ನಡ ಕಲರವ - ಕಂಸಾಳೆ, ಫ್ಯಾಷನ್ ಷೋ, ಬೀದಿ ನಾಟಕ,
    ಆರು ಗುಣಗಳ ಸತ್ಯ - ಪಂಪಾ ನಾಟ್ಯವೃಂದದವರಿಂದ ಭರತನಾಟ್ಯ
    3. Mano Lahari


    Buy Tickets - here













    ೩. Mano Lahari - Mano Murthy Musical night

    1 Kannadothsava Ticket = KKNC Got Talent + KKNC ಕನ್ನಡ ಕಲರವ + Mano Lahari

    Buy Kannadothsava Tickets - here














    ಸ್ವರ್ಣಸೇತು ೨೦೧೬ರ ಕಥಾಸ್ಪರ್ಧೆ !!
    Deadline Extended to Sept 30th 2016

    ಪ್ರತಿಯೊಬ್ಬರಲ್ಲೂ ಒಬ್ಬ ಒಳ್ಳೆಯ ಕಥೆಗಾರನೊಬ್ಬ ಅಡಗಿರುತ್ತಾನೆ. ಅವನಿಗೆ ಅಕ್ಷರ ರೂಪ ಕೊಟ್ಟು ಸಾಕ್ಷಾತ್ಕಾರಗೊಳಿಸಲು, ಉತ್ತರ ಕ್ಯಾಲಿಫೋರ್ನಿಯಾ ಕನ್ನಡಿಗರ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಲು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ "ಸ್ವರ್ಣ ಸೇತು ೨೦೧೬" ಸುವರ್ಣಾವಕಾಶವೊಂದನ್ನು ನೀಡುತ್ತಿದೆ. ಕೌತುಕ ಕಥೆಯೊಂದನ್ನು ಬರೆಯಿರಿ. ಬಹುಮಾನವನ್ನು ಗೆಲ್ಲಿರಿ!

    ಸ್ಪರ್ಧೆಯ ನಿಯಮಗಳು :

    ೧. ಕಥೆ ೧೫೦೦ ಪದಗಳನ್ನು ಮೀರದಿರಲಿ
    ೨. ಕಥೆ ಸ್ವಂತದ್ದಾಗಿರಬೇಕು
    ೩. ಕಥೆ ಬೇರೆಲ್ಲೂ (ಅಂತರ್ಜಾಲ ಮತ್ತು ಮುದ್ರಿತ ಮಾಧ್ಯಮ) ಪ್ರಕಟವಾಗಿರಬಾರದು
    ೪. ಒಬ್ಬರು ಒಂದಕ್ಕಿಂತ ಹೆಚ್ಚು ಕಥೆ ಕಳುಹಿಸುವಂತಿಲ್ಲ
    ೫. ಭಾಷಾಂತರಿಸಿದ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ
    ೬. ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿ ನೆಲೆಸಿರುವ ಎಲ್ಲ ಕನ್ನಡಿಗರಿಗೂ ಭಾಗವಹಿಸುವ ಅವಕಾಶವಿದೆ.
    ೭. ಕಥೆಗಳು ಬರಹ, ನುಡಿ ಅಥವಾ ಯುನಿಕೋಡ್ ತಂತ್ರಾಂಶದಲ್ಲಿರಬೇಕು. ಕೈಬರಹದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
    ೮. ಆಯ್ದ ಕಥೆಗಳಿಗೆ ಬಹುಮಾನವಿರುತ್ತದೆ. ತೀರ್ಪುಗಾರರ ನಿರ್ಧಾರವೇ ಅಂತಿಮ.
    ೯. ಆಯ್ದ ಕಥೆಗಳನ್ನು ಸ್ವರ್ಣಸೇತು - ೨೦೧೬ರಲ್ಲಿ ಪ್ರಕಟಿಸಲಾಗುವುದು. ಪರಿಷ್ಕರಿಸಿ ಪ್ರಕಟಿಸುವ ಹಕ್ಕು ಸ್ವರ್ಣಸೇತು-೨೦೧೬ರ ಸಂಪಾದಕ ಸಮಿತಿಗೆ ಸೇರಿದ್ದು.
    ೧೦. ಕಥೆಯ ಜೊತೆಗೆ ಲೇಖಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಭಾವಚಿತ್ರ ಮತ್ತು ಮಿಂಚಂಚೆ ವಿಳಾಸ (email ID) ಕಳುಹಿಸಬೇಕು.
    ೧೨. ನಿಮ್ಮ ಕಥೆಗಳು ನಮಗೆ ತಲುಪಲು ಅಂತಿಮ ದಿನಾಂಕ Sept 30th 2016
    ೧೩. ನಿಮ್ಮ ಕಥೆಗಳನ್ನು ಕಳುಹಿಸಬೇಕಾದ ವಿಳಾಸ - [email protected]





    Join KKNC Parade on India Independence Day Celebration on Aug 14th 2016 @ Fremont

    ನಿಮಗೆ ತಿಳಿದಿರುವಂತೆ ಆಗಸ್ಟ್ 14ರಂದು Fremont ನಲ್ಲಿ FOG ಸಂಸ್ಥೆಯವರು India Independence Day Celebration ಆಯೋಜಿಸಿದ್ದಾರೆ. ಪ್ರತೀ ವರುಷದಂತೆ, ಈ ವರುಷವೂ ಕನ್ನಡ ಕೂಟವು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲ್ಲುತ್ತಿದೆ ಎಂದು ತಿಳಿಸಲು ನಮಗೆ ಹೆಮ್ಮೆ.

    ಈ ಪ್ರಯುಕ್ತ, ನಮ್ಮ Creative ಸಮಿತಿ, Jaisheela Kandagal ಮತ್ತು Shubha Prithvi Raj ಅವರ ನೇತೃತ್ವದಲ್ಲಿ ಈಗಾಗಲೇ, ಒಂದು ವೈಶಿಷ್ಟ್ಯವಾದ ವರ್ಣ ರಂಜಿತ ಗ್ಲೋಬ್ ಅನ್ನು ನಿರ್ಮಿಸುವಲ್ಲಿ ತೊಡಗಿದ್ದಾರೆ. ಈ ಗ್ಲೋಬಿನ ಸುತ್ತಲೂ ಕರ್ನಾಟಕದ ವೈವಿಧ್ಯತೆ ಬೀಗುವ ವಸ್ತ್ರಾಭರಣ ಗಳನ್ನು ಧರಿಸಿ ಕೂಡುವ ಕೂಟದ ಸದಸ್ಯರು. ನಿಮಗೆ ಅಥವಾ ನಿಮ್ಮ ಮಕ್ಕಳನ್ನು ಸೇರ್ಪಡೆ ಮಾಡಲು Uma Srinath ಅವರನ್ನು ಸಂಪರ್ಕಿಸಿ. ಸಾಮೂಹಿಕ ಹಾಡುಗಾರಿಕೆ ಹಾಗೂ ಸಾಮೂಹಿಕ ನೃತ್ಯವನ್ನೂ ಆಯೋಜಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಪಾಲ್ಗೊಳ್ಳಲು Shashikala Murthy ಅವರನ್ನು ಸಂಪರ್ಕಿಸಿ.

    ಈ ಕಾರ್ಯಕ್ರಮದ ಯಶಸ್ಸಿಗೆ ನಿಮ್ಮೆಲ್ಲರ ಶ್ರಮ, ಕೊಡುಗೆ ಅತ್ಯಗತ್ಯ. ಆಗಸ್ಟ್ 13 ರಂದು ತಯಾರಿ. ಆಗಸ್ಟ್ 14ರಂದು Parade. ನಮ್ಮೊಂದಿಗೆ ಕೈ ಜೋಡಿಸಲು Form ಭರ್ತಿ ಮಾಡಿ. ಬನ್ನಿ, ಕನ್ನಡ ಕೂಟವನ್ನು ನಾವೆಲ್ಲರೂ ಒಟ್ಟಾಗಿ ಪ್ರತಿನಿಧಿಸೋಣ



    KKNC Sports Day on June 4th

    ಕನ್ನಡ ಕೂಟದ Sports Day ಜೂನ್ 4ರಂದು Murdock Park, San Jose ನಲ್ಲಿ ಆಚರಿಸುತ್ತಿದೆ.

    Sports Day ದಿನದಂದು ತಮ್ಮ ಅಡುಗೆ ಮನೆಯಲ್ಲಿ ತಯಾರಿಸಿದ ಸೊಗಸಾದ ಭಕ್ಷ್ಯಗಳನ್ನು ತಂದು ವಿಕ್ರಯಿಸುವುದೆಂದರೆ ಕೂಟದ ಸದಸ್ಯರಿಗೆ ಬಲು ಪ್ರೀತಿ. ಇಂದೇ ನೀವು ತರಲಿಚ್ಚುಸುವ ಪದಾರ್ಥಗಳನ್ನು ಇಲ್ಲಿ ಆಯ್ಕೆ ಮಾಡಿ

    ನಿಮಗೆ Volleyball, ಅಥವಾ Throw Ball ಆಡಲು ಇಷ್ಟವಿದ್ದಲ್ಲಿ ಇಂದೇ ನೋಂದಾಯಿಸಿ.
    Register @ here

    KKNC is conducting 'Sports Day' on June 4th 2016 at Murdock Park, San Jose. We are planning for variety of sports events for all age groups including Kids, Adults and Visiting Parents - Volley ball, Throw ball, Track & Field events to name a few.

    Sports day is embellished with food meLa prepared by volunteers with love. If you are interested in cooking up or lending a hand at cooking please sign up.

    The listed items can be prepared as individuals or group, KKNC will reimburse cost of material upon receipt. Sign up for food here

    As a run up towards the Sports day, we have already conducted Chess, Carrom, Table Tennis, Shuttle Badminton, Tennis and Cricket.

    As always, we are seeking entries from all the Sports enthusiasts to participate for Volleyball, throwball. Here is the google form doc to register - here.

    We look forward for an encouraging response from our KKNC Sports loving community!!



    KKNC is conducting 'Sports Day' on June 4th 2016 at Murdock Park, San Jose. We are planning for variety of sports events for all age groups including Kids, Adults and Visiting Parents - Volley ball, Throw ball, Track & Field events to name a few. We are also planning for a grand 'Food Mela' during Sports day!!

    As a run up towards the Sports day, we have already conducted Chess, Carrom, Table Tennis, Shuttle Badminton, Tennis and subsequently we are planning to conduct Cricket on May 21st.

    As always, we are seeking entries from all the Sports enthusiasts to participate. Here is the google form doc to register for these sports here

    We look forward for an encouraging response from our KKNC Sports loving community!!



    ಕನ್ನಡ ಕಲಿ - 2016-17 ನೋಂದಣೆ ಪ್ರಾರಂಭವಾಗಿದೆ

    ಕನ್ನಡ ಕಲಿ 2016-17 ರ ದಾಖಲಾತಿ ಪ್ರಾರಂಭವಾಗಿದೆಯೆಂದು ತಿಳಿಸಲು ಕನ್ನಡ ಕಲಿಯ ಪ್ರಾಂಶುಪಾಲರು ಮತ್ತು ಶಿಕ್ಷಕವರ್ಗದವರು ಹೆಮ್ಮೆ ಪಡುತ್ತಾರೆ. ಪ್ರತಿ ವರ್ಷದಂತೆ ಈ ವರುಷವೂ ಸೆಪ್ಟೆಂಬರ್ ತಿಂಗಳಿನಲ್ಲಿ ಶಾಲೆ ಪ್ರಾರಂಭವಾಗಲಿದ್ದು, ಮುಂದಿನ ಮೇ ತಿಂಗಳವರೆಗೂ ಜರುಗಲಿದೆ. ಶಾಲೆಯನ್ನು ಮಿಲ್ಪೀಟೆಸ್ನಲ್ಲಿ ಪ್ರತಿ ಶನಿವಾರ ಸಂಜೆ 4-5ರ ವರೆಗೆ ನಡೆಸಲಾಗುತ್ತದೆ. ಈ ವರ್ಷ, ಪೋಷಕರ ವಿನಂತಿಯ ಮೇರೆಗೆ, ಕನ್ನಡ ಕಲಿ ದಾಖಲಾತಿಯನ್ನು ಶಾಲಾದಿನಕ್ಕೂ ಮುಂಚಿತವಾಗಿ ತೆರವು ಗೊಳಿಸಿದ್ದೇವೆ.

    ನೋಂದಾಯಿಸಲು, ಈ ಕೆಳಕಂಡ ದಾಖಲಾತಿ ಮನವಿ ಪತ್ರವನ್ನು ಭರ್ತಿಮಾಡಿ, ನಾಲ್ಕನೇ ತರಗತಿ ಶಿಕ್ಷಕರೂ ಹಾಗೂ ಕನ್ನಡ ಕಲಿ ಖಜಾಂಚಿಯೂ ಆದ ಶ್ರೀಮತಿ ಸಂಧ್ಯಾ ಗಾಯತ್ರಿ ಅಥವಾ ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ ಶೇಖರ್ ಅವರಿಗೆ ಚೆಕ್ಕು/ನಗದು ಶುಲ್ಕದ ಜೊತೆಗೆ ತಲುಪಿಸ ಬೇಕಾಗಿ ಕೋರುತ್ತೇವೆ.

    ದಾಖಲಾತಿ ಮನವಿ ಪತ್ರ - https://goo.gl/YMKwqp

    ಮೇ 31ರ ನಂತರ ಹೆಚ್ಚಿಗೆ ಶುಲ್ಕವಿರುವ ಕಾರಣ, ಆದಷ್ಟೂ ಅಷ್ಟರ ಒಳಗೆ ನೋಂದಾಯಿಸ ಬೇಕೆಂದು ಕೋರುತ್ತೇವೆ. ಜೂನ್ 30 ನೋಂದಾಯಿಸಲು ಕೊನೆಯ ದಿನಾಂಖ.



    Kannada Kali is very excited to begin registrations for Kannada Kali's next academic year of 2016-17 from today! Kannada Kali school is run Sept-May for kids 5 years and above in Milpitas, CA from 4-5pm every Saturday.

    Many parents requested that they wanted to register before School day as they would leave on vacation after that. So, we are starting registrations early this year. Please go to download the registration form here and submit the form along with either check or cash to Class 4 teacher & treasurer, Sandhya Gayathri OR Principal, Jyothi Shekar during the next few classes. You may also mail the form and check to the address on the form.

    Regitration Form : here

    PLEASE NOTE THAT EARLY BIRD ENROLLMENT ENDS ON MAY 31ST, 2016 AND ALL REGISTRATIONS END ON JUNE 30TH, 2016.

    ABSOLUTELY NO ENROLLMENTS AFTER JUNE 30TH, 2016!

    PLEASE ENROLL BY MAY 31ST AND AVOID EXTRA FEES! PLEASE SPREAD THE WORD TO OTHER INTERESTED FAMILIES AND FRIENDS!!!




    2016 Camping - Registrations are Closed ! ಜುಲೈ 29- ಜುಲೈ 31 2016

    ಕನ್ನಡ ಕೂಟದ 2016 Camping ಜುಲೈ 29- ಜುಲೈ 31ರ ವರೆಗೆ ಆಯೋಜಿಸಲಾಗುವುದು. ಕೂಟದ ಸದಸ್ಯರಿಗೆ ಕ್ಯಾಮ್‌ಪಿಂಗ್ ಅತಿ ಪ್ರಿಯಕಾರವಾದದ್ದು - ಸುಮಾರು 400 ಕನ್ನಡಿಗರ ಜೊತೆಗೂಡಿ ಕ್ಯಾಂಪ್ ಫೈಯರ್ ಬಳಿ ಕುಳಿತು ಹರಟೆ ಹೊಡೆಯುತ್ತಾ, ತಿಂಡಿ ತಿನಸುಗಳನ್ನು ತಯಾರಿ ಮಾಡುತ್ತಾ, ಹೈಕಿಂಗ್ ಇತ್ಯಾದಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುತ್ತಾ, ನಿಸರ್ಗದ ಸೌಂದರ್ಯವನ್ನು ಬಗೆಯುತ್ತಾ ನಕ್ಕು ನಲಿಯುವ ಮೂರು ದಿನದ ಅಮೋಘ ಅನುಭವ ನಮ್ಮ ಕ್ಯಾಮ್‌ಪಿಂಗ್ .

    ಕೂಟದ ಸದಸ್ಯರಿಗೆ ತಮ್ಮದೇ ಟೆಂಟ್ ಹಾಕುವುದು ಬಹಳ ಅಚ್ಚು ಮೆಚ್ಚು. ನಿಮಗೆ ಟೆಂಟ್ ನಲ್ಲಿ ಮಲಗಲು ತೊಂದರೆ ಇದ್ದಲ್ಲಿ, ಕ್ಯಾಬಿನ್ ಸೌಲಭ್ಯ ವೂ ಇರುತ್ತದೆ.

    Currently, both Tents and Cabins are sold out. Please note your reservation is confirmed only after the payment. So, If you had reserved, but not paid, you will be put on the waitlist.

    ಸಮಯ : Jul 29th 2016 4PM to Jul 31st 2016 11AM
    ಸ್ಥಳ : Little Basin (http://littlebasin.org/)



    Dr BKS Varma ಅವರೊಡನೆ ಕೂಟದ ವಸಂತ ವೈಭವ !!
    ಕೂಟದ ವಸಂತ ವೈಭವ ಕಾರ್ಯಕ್ರಮ ಏಪ್ರಿಲ್ 10ರಂದು ಛಾಬೊ ಕಾಲೇಜ್ ನಲ್ಲಿ ಮೂಡಿಬಂದಿತು. ಸಂಧರ್ಭಕ್ಕೆ ಅನುಗುಣವಾದ ಚಿತ್ರಕಲೆಯನ್ನು ಥಟ್ ಎಂದು ಪ್ರೇಕ್ಷಕರ ಮುಂದೆ ನಿರ್ಮಿಸಿದರು ಅಪರೂಪದ ಚಿತ್ರ ಕಲಾವಿದ Dr BKS Varma.ಅವರೊಡನೆ ನಾಗಚಂದ್ರಿಕೆ ಭಟ್ ಅವರ ಗಾಯನ ನೆರೆದ ಜನರ ಮನ ಸೆಳೆಯಿತು. ಜೊತೆಗೆ ನಾಟ್ಯದಲ್ಲಿ ಗಣೇಶ್ ವಾಸುದೇವ ಹಾಗೂ ವಾದ್ಯ ವೃಂದದಲ್ಲಿ ಸ್ಥಳೀಯ ವಾದಕರು ಗೀತ-ಚಿತ್ರ-ನೃತ್ಯ ವೈಭವವನ್ನು ವಿಜೃಂಭಣೆಯಿಂದ ನಡೆಸಿ ಕೊಟ್ಟರು.

    ಕಾರ್ಯಕ್ರಮ ಯಶಸ್ವಿ ಯಾಗಿ ಮೂಡಿಬರಲು ಶ್ರಮಿಸಿದ ಮನೋರಂಜನಾ ಸಮಿತಿ, ಸದಸ್ಯತ್ವ ಸಮಿತಿ ಹಾಗೂ ಊಟದ ವ್ಯವಸ್ಥೆ ನಡೆಸಿಕೊಟ್ಟ ಸ್ವಯಂ ಸೇವಕರಿಗೂ , ಛಾಯಾಗ್ರಹಣ, ಅಲಂಕರಣದಲ್ಲಿ ನೆರವಾದವರಿಗೂ, ಸ್ವರ್ಣಸೇತು ವರದಿಗಾರರಿಗೂ ನಮ್ಮ ಅನಂತಾನಂತ ಧನ್ಯವಾದಗಳು.

    ಪ್ರೇಕ್ಷಕರ ಮನ ಸೆಳೆದ "ರಾಕ್ ಆನ್ ರಾಗ "

    ಕನ್ನಡ ಕೂಟ ಮಾರ್ಚ್ 20 ರಂದು ನಮ್ಮ ಬೇ ಏರಿಯಾದ ಸುಪ್ರಸಿದ್ದ ಕನ್ನಡ ಮ್ಯೂಸಿಕ್ ಬ್ಯಾಂಡ್ "ರಾಗ" ಜೊತೆಗೂಡಿ, "ರಾಕ್ ಆನ್ ರಾಗ !!!" ಕಾರ್ಯಕ್ರಮವನ್ನು ಆಯೋಜಿಸಿತು. ಇದರಿಂದ ಸಂಗ್ರಹಿಸಿದ ಧನವನ್ನು"ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್" ಮತ್ತು "ಒನ್ ಸ್ಕೂಲ್ ಅಟ್ ಆ ಟೈಮ್" ಸಂಸ್ಥೆಗಳಿಗೆ ಕೊಡಲಾಗುವುದು. ನಯನ ಮನೋಹರ ದೀಪ ರಂಜಿತ ಸಭಾಂಗಣವು ಪ್ರೇಕ್ಷಕರನ್ನು ಧಿಗ್ಭ್ರಮೆ ಗೊಳಿಸುತ್ತಿದ್ದಂತೆ ರಾಗ ತಂಡದ ಕಲಾವಿದರು ತಮ್ಮ ಸುಶ್ರಾವ್ಯ ಸಂಗೀತದಲ್ಲಿ ಮೈ ಮರೆಸಿದರು. ಕಾರ್ಯಕ್ರಮವನ್ನು ಅದ್ಧೂರಿಯಿಂದ ನಡೆಸಿಕೊಟ್ಟ ರಾಗ ತಂಡಕ್ಕೆ ಕೂಟದ ಕಾರ್ಯಕಾರಿ ಸಮಿತಿ ಚಿರ ರುಣಿ.

    ಸ್ನೇಹ ಸುಗ್ಗಿಯ ಪ್ರಯುಕ್ತ ಸಾವಿರಕ್ಕೂ ಮೀರಿದ ಕನ್ನಡ ಕೂಟದ ಜನ ಸಮೂಹ !!

    ಮದ್ಯಾಹ್ನ 2ಕ್ಕೆ ಡೊಳ್ಳಿನ ಸದ್ದು ಬೇ ಏರಿಯಾ ಕನ್ನಡ ಜನ ಸಮೂಹವನ್ನು ಕಾರ್ಯಕ್ರಮಕ್ಕೆ ಬರೆ ಮಾಡಿಕೊಂಡಿತು. ನಮ್ಮ ಸದಸ್ಯತ್ವ ಸಮಿತಿ ನೆರೆದ ಜನರಿಗೆಲ್ಲ ಸದಸ್ಯತ್ವ ಪಡೆದು ದಿನದ ಕಾರ್ಯಕ್ರಮಕ್ಕೆ ನೋಂದಾಯಿಸಲು ಅನು ಮಾಡಿಕೊಟ್ಟಿತು. ಮೆರವಣಿಗೆಯ ಸಡಗರದಲ್ಲಿ ಸದಸ್ಯರು ಜೊತೆಗೂಡಿ ಒಮ್ಮತದಿಂದ ರಂಗಾಯಣವನ್ನು ಪ್ರವೇಶಿಸಿದರು.

    ದೀಪ ಬೆಳಗಿ ಸದಸ್ಯರನ್ನು ಆಹ್ವಾನಿಸಿದರು ಕೂಟದ ಅಧ್ಯಕ್ಷರು. ಶ್ಲೋಕ ಉಚ್ಚಾರಣೆಯೊಂದಿಗೆ ಪ್ರಾರಂಭ ವಾದ ವೇದಿಕೆ, ಭಾವಧಾರೆ, ಪುಣ್ಯಕೋಟಿ, ಮಕ್ಕಳ ಜಾನಪದ ನೃತ್ಯ, ಅಪರೂಪದ ಕೊರವಂಜಿ ನೃತ್ಯ , ದಂಡಪಿಂಡಗಳು ಎಂಬ ಹಾಸ್ಯ ನಾಟಕ ನೆರೆದವರನ್ನು ಮನೋರಂಜಿಸಿತು. ಕೂಟದಿಂದ ಆಯೋಜಿಸಿದ ಪಂಚತಂತ್ರ ಪ್ರೇಕ್ಷಕರನ್ನು ಸೆಳೆಯಿತು.

    ಒಂದು ತಾಸು ನೀಡಿದ ವಿರಾಮದಲ್ಲಿ, ಸದಸ್ಯರು, ರುಚಿಯಾದ ಭೋಜನ ಸವಿಯುತ್ತಾ ನಮ್ಮ ಚಂದಾ ನಿಗ್ರಹಣಾ ಸಮಿತಿ ಆಯೋಜಿಸಿದ ಪ್ರಾಯೋಜಕರ ಬೀಡುದಾಣಗಳಿಗೆ ಭೇಟಿ ಕೊಟ್ಟರು. ನಂತರ ನಡೆಯಿತು ನಯನ ಮನೋಹರ ತೊಗಲು ಗೊಂಬೆ ಆಟ. ನಡೆಸಿಕೊಟ್ಟ ಶ್ರೀ ಗುಂಡು ರಾಜು ಅವರಿಗೆ ಅನಂತಾನತ ಧನ್ಯವಾದಗಳು. ವಿಶೇಷ ಅತಿಥಿಗಳಾದ ಶ್ರೀಯುತ ರಾಜೇಶ್ ಕೃಷ್ಣನ್ ರವರು, ಶ್ರೀಮತಿ ಶೀಲಾ ರವರೊಂದಿಗೆ ಪ್ರೇಕ್ಷಕರನ್ನು ಸಂಗೀತದಲ್ಲಿ ತಲ್ಲೀನ ಗೊಳಿಸಿದರು.

    ಕಾರ್ಯುಕ್ರಯ ಇಷ್ಟು ಸೊಗಸಾಗಿ ಮೂಡಿ ಬರಲು ಕಾರಣರಾದ ಪ್ರತೀ ಸದಸ್ಯರಿಗೂ ಕೂಟದ ಕಾರ್ಯ ನಿರ್ವಾಹಕ ಸಮಿತಿಯು ಚಿರ ಋಣಿ. ಅವರ ಶ್ರಮಕ್ಕೆ ನಮ್ಮ ಧನ್ಯವಾದಗಳು. ವರ್ಷಾದ್ಯಂತ ಕೂಟದ ಕೆಲಸವನ್ನು ಸೊಗಾಸಾಗಿ ನಡೆಸಲು ನಮಗೆ ಇದೇ ಪ್ರೇರಣೆ..



    ಕೂಟದ ಯುಗಾದಿ ಕಾರ್ಯಕ್ರಮ - 'ವಸಂತ ವೈಭವ' - Apr 10th @ Chabot College
    ಕೂಟದ ಉಗಾದಿ ವಸಂತ ವೈಭವಕ್ಕೆ ಹೆಸರಾಂತ ಕಲಾವಿದ Dr. B.K.S Varma ಬರುತ್ತಿದ್ದಾರೆ. ಸಂಧರ್ಭಕ್ಕೆ ಅನುಗುಣವಾದ ಚಿತ್ರಕಲೆಯನ್ನು ಥಟ್ ಎಂದು ಪ್ರೇಕ್ಷಕರ ಮುಂದೆ ನಿರ್ಮಿಸುವ ಅಪಾರೂಪದ ಕಲೆಗೆ ಇವರು ಪ್ರಖ್ಯಾತರಾಗಿದ್ದಾರೆ. ಬನ್ನಿ, ಇವರ ನಯನ ಮನೋಹರ ಚಿತ್ರಕಲೆಯನ್ನು ಸುಗಮ ಸಂಗೀತದೊಂದಿಗೆ ಆನಂದಿಸೋಣ.

    ಸಮಯ : April 10th 2016 230 PM
    ಸ್ಥಳ : Performing Arts Center, Chabot College
    25555 Hesperian Blvd, Hayward, CA 94545



    ಕೂಟದ ಯುಗಾದಿ ಕಾರ್ಯಕ್ರಮ - 'ವಸಂತ ವೈಭವ' ಕ್ಕೆ ಆಹ್ವಾನ

    ವಸಂತ ಮಾಸದ ಆಗಮನ ಈಗಾಗಲೇ ನಿಸರ್ಗದಲ್ಲಿ ಗೋಚರಿಸುತ್ತಿದೆ. ಸುಗ್ಗಿಯ ಸಂಭ್ರಮವನ್ನು ಆಚರಿಸಿದ ಸಮಿತಿ ಈಗ "ವಸಂತ ವೈಭವ" ಕ್ಕೆ ಸಿದ್ಧವಾಗುತ್ತಿದೆ. ನಿಸರ್ಗದ ವಿವಿಧತೆಯನ್ನು, ಮನದಲ್ಲಿಟ್ಟುಕೊಂಡು "ವೈವಿಧ್ಯತೆಯಲ್ಲಿ ವಿಶೇಷತೆ" ಎಂಬ ವಿಷಯವನ್ನು ಮನರಂಜನಾ ಸಮಿತಿ 'ವಸಂತ ವೈಭವದ' ಪ್ರಧಾನ ವಸ್ತುವನ್ನಾಗಿಸಿ ಕೊಂಡಿದೆ. ತಮ್ಮಲ್ಲಿರುವ ಸೃಜನಶೀಲತೆಯನ್ನು ಸಾಕಾರರೂಪಗೊಳಿಸಿ, ಕನ್ನಡ ಕೂಟದ ವೇದಿಕೆಯ ಮೇಲೆ ಪ್ರದರ್ಶಿಸಲು ಈ ಮೂಲಕ ತಮ್ಮನ್ನು ಅಹ್ವಾನಿಸುತ್ತಿದ್ದೇವೆ.





    Photography Workshop - April 02ರಂದು Milpitas Police Station Hall ನಲ್ಲಿ

    ನಮ್ಮ ಮೆಚ್ಚಿನ ರವಿ ಶೇಖರ್ ಅವರು ಕನ್ನಡ ಕೂಟದ ಜನತೆಗೆ ಫೋಟೋಗ್ರಫೀ ತರಬೇತಿ ಶಿಬಿರವನ್ನು ಆಯೋಜಿಸಲು ಸಮ್ಮತಿಸಿದ್ದಾರೆ. ನೀವೆಲ್ಲ ಇದರ ಸದುಪಯೋಗ ಪಡೆಯಬೇಕೆಂದು ಕೇಳುತ್ತೇವೆ. ನಿಮಗೆ ಫೋಟೋಗ್ರಫೀ ಕಲೆಯುವ ಹಂಬಲವಿದ್ದಲ್ಲಿ ಇಂದೇ ನೋಂದಾಯಿಸಿ. ತರಬೇತಿಯು, ಕೂಟದ ಸದಸ್ಯರಿಗೆ ಸೀಮಿತವಾಗಿದ್ದು , ಯಾವುದೇ ಶುಲ್ಕ ವ್ಯಯ ಮಾಡುವಂತಿರುವಿದಿಲ್ಲ.

    ಸಮಯ : April 2nd 2016 430PM to 630PM
    ಸ್ಥಳ : 1275 N Milpitas Blvd, Milpitas, CA 95035

    Register here



    ಕನ್ನಡ ಕೂಟ ಪ್ರಸ್ತುತ ಪಡಿಸಲಿದೆ "ರಾಕ್ ಆನ್ ರಾಗ !!! " - ಮಾರ್ಚ್ 20th 2016

    ಕನ್ನಡ ಕೂಟ ಮಾರ್ಚ್ 20 ರಂದು ನಮ್ಮ ಬೇ ಏರಿಯಾದ ಸುಪ್ರಸಿದ್ದ ಕನ್ನಡ ಮ್ಯೂಸಿಕ್ ಬ್ಯಾಂಡ್ "ರಾಗ" ಜೊತೆಗೂಡಿ, "ರಾಕ್ ಆನ್ ರಾಗ !!!" ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದೆ. ಇಂದೇ ನಿಮ್ಮ ಟಿಕೆಟ್ ಪಡೆದುಕೊಳ್ಳಿ - http://tinyurl.com/hry2wqc. ಇದರಿಂದ ಸಂಗ್ರಹಿಸಿದ ಧನವನ್ನು"ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್" ಮತ್ತು "ಒನ್ ಸ್ಕೂಲ್ ಅಟ್ ಆ ಟೈಮ್" ಸಂಸ್ಥೆಗಳಿಗೆ ಕೊಡಲಾಗುವುದು.

    ಗಮನಿಸಿ, ಈ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಭಾನುವಾರ ಮಾರ್ಚ್ ೨೦ಕ್ಕೆ ಮುಂದೂಡಲಾಗಿದೆ.



    ಪ್ರತಿಭಾವಂತ ಕನ್ನಡ ಕೂಟದ ಸದಸ್ಯರೆ, ತಮ್ಮಲ್ಲಿ ಅಡಗಿರುವ ಹಾಡುಗಾರ ಅಥವಾ ಹಾಡುಗಾರ್ತಿ ಅವಕಾಶಕ್ಕಾಗಿ ಕಾಯುತ್ತಿರುವರೆ? ರಾಜೇಶ್ ಕೃಷ್ಣನ್ ಅವರೆದುರು ಹಾಡುವ ಆಸೆ ಕೂಡ ಇದೆಯೆ? ಇಗೊ ಇಲ್ಲೊಂದು ಸುವರ್ಣಾವಕಾಶ ನಿಮ್ಮೆಲ್ಲರ ಮುಂದೆ.
    ರಾಜೇಶ್ ಕೃಷ್ಣನ್ ಅವರೊಂದಿಗೆ 'ಸಪ್ತಸ್ವರ'.
    ನಿಮ್ಮ ಧ್ವನಿ ಸುರಳಿಯನ್ನು(audio) ಅಥವ video with audio ನಮಗೆ ಕಳಿಸಿ. (Approx 1 minute)
    ಕನ್ನಡ ಚಿತ್ರ ಹಿನ್ನೆಲೆ ಗಾಯಕರಾದ "ಶಷಾಂಕ್ ಶೇಷಗಿರಿ" ಅವರ ತೀರ್ಪಿನ ಪ್ರಕಾರ ಕೊನೆಯ ಕೆಲವು ಸ್ಪರ್ದಿಗಳು ರಾಜೇಶ್ ಕೃಷ್ಣನ್ ಅವರೆದುರು ಹಾಡುವರು. ಇವರಲ್ಲಿ ವಿಜೇತರನ್ನು ಸ್ವತಹ ರಾಜೇಶ್ ಕೃಷ್ಣನ್ ಆಯ್ಕೆ ಮಾಡುವರು.
    ಎಲ್ಲರಿಗು ಅವಕಾಶ. 8-12(sub-junior) 13-15(junior) 15+Adults. ಇದರೊಂದಿಗೆ 'ಸಪ್ತ ಸ್ವರ' ದ ಸಂಜೆ ರುಚಿಯಾದ ಊಟ ಹಾಗು ರಾಜೇಶ್ ಕೃಷ್ಣನ್ ಅವರೊಂದಿಗೆ Photo.
    ಇನ್ನೇಕೆ ತಡ, Entry ಕಳುಹಿಸಲು ಕೊನೆಯ ದಿನಾಂಕ ಫೆಬ್ರವರಿ 23rd, 2016.

    Register for ಸಪ್ತಸ್ವರ










    Social Media

    Grand Annual Sponsor

    Gold Sponsor

    Sponsor

    Yugadi Event Sponsor